–2023 ಕ್ವಾಲಿಫೈಯರ್ 2: ಗುಜರಾತ್ ಎದುರು ಟಾಸ್ ಗೆದ್ದು ಬೌಲಿಂಗ್ ಆಯ್ದುಕೊಂಡ ಮುಂಬೈ ಅಹಮದಾಬಾದ್: ಐದು ಸಲದ ಚಾಂಪಿಯನ್ ಮುಂಬೈ ಇಂಡಿಯನ್ಸ್‌ ತಂಡವು ಈ ಬಾರಿಯ ಐಪಿಎಲ್‌ 2ನೇ ಕ್ವಾಲಿಫೈಯರ್‌ ಪಂದ್ಯದಲ್ಲಿ ಹಾಲಿ ಚಾಂಪಿಯನ್‌ ಗುಜರಾತ್ ಟೈಟನ್ಸ್ ಎದುರು ಟಾಸ್‌ ಗೆದ್ದು ಬೌಲಿಂಗ್ ಆಯ್ದುಕೊಂಡಿದೆ. ಮಳೆಯಿಂದಾಗಿ ಟಾಸ್‌ 15 ನಿಮಿಷ ತಡವಾಯಿತು. ಈ ಪಂದ್ಯದಲ್ಲಿ ಗೆದ್ದರಷ್ಟೇ ಫೈನಲ್‌ಗೆ ಲಗ್ಗೆ ಇಡಲು ಸಾಧ್ಯವಾಗಲಿದೆ. ಇಲ್ಲಿನ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ಕಳೆದ ವರ್ಷ ನಡೆದಿದ್ದ ಫೈನಲ್‌ನಲ್ಲಿ ಹಾರ್ದಿಕ್ ಪಾಂಡ್ಯ ನಾಯಕತ್ವದ ಗುಜರಾತ್ ಬಳಗವು, ರಾಜಸ್ಥಾನ ರಾಯಲ್ಸ್‌ ಎದುರು ಜಯ ಸಾಧಿಸಿ ಪ್ರಶಸ್ತಿ ವಶಪಡಿಸಿಕೊಂಡಿತ್ತು. ಈ ಬಾರಿಯೂ ಇಲ್ಲಿಯೇ ಎರಡನೇ ಕ್ವಾಲಿಫೈಯರ್ ಹಾಗೂ ಫೈನಲ್ ಆಯೋಜನೆಗೊಂಡಿವೆ. 🍿 # 2023 🏆 _____ 🤔#Qualifier2 | # ../MmCIDvDdV0 @hardikpandya7 @gujarat_titans 🙌🙌# | #Qualifier2 | # ../1L6TOVgvKz ! ▶️ ://./f0Ge2x8XbA# | #Qualifier2 | # ../GY5a7fgAMa ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.