–2023 | ಗಿಲ್ ಅಮೋಘ ಶತಕ; ಮುಂಬೈಗೆ 234 ರನ್ ಗುರಿ ನೀಡಿದ ಗುಜರಾತ್ ಅಹಮದಾಬಾದ್: ಯುವ ಬ್ಯಾಟರ್‌ ಶುಭಮನ್‌ ಗಿಲ್‌ ಸಿಡಿಸಿದ ಅಮೋಘ ಶತಕದ ಬಲದಿಂದ ಹಾಲಿ ಚಾಂಪಿಯನ್‌ ಗುಜರಾತ್ ಟೈಟನ್ಸ್ ತಂಡ ಐದು ಬಾರಿಯ ಚಾಂಪಿಯನ್ ಮುಂಬೈ ಇಂಡಿಯನ್ಸ್‌ ವಿರುದ್ಧ ನಿಗದಿತ 20 ಓವರ್‌ಗಳಲ್ಲಿ 3 ವಿಕೆಟ್‌ ಕಳೆದುಕೊಂಡು 233 ರನ್‌ ಕಲೆಹಾಕಿದೆ. ಇಲ್ಲಿನ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಪಂದ್ಯದಲ್ಲಿ ಟಾಸ್‌ ಗೆದ್ದ ಮುಂಬೈ ನಾಯಕ ರೋಹಿತ್‌ ಶರ್ಮಾ ಎದುರಾಳಿಗೆ ಬ್ಯಾಟಿಂಗ್ ಬಿಟ್ಟುಕೊಟ್ಟು ಎಡವಟ್ಟು ಮಾಡಿಕೊಂಡರು. ಸಿಕ್ಕ ಅವಕಾಶವನ್ನು ಚೆನ್ನಾಗಿ ಬಳಸಿಕೊಂಡ ಗುಜರಾತ್‌ ಪಡೆ ಸವಾಲಿನ ಮೊತ್ತ ಕಲೆಹಾಕಿತು. ಇನಿಂಗ್ಸ್‌ ಆರಂಭಿಸಿದ ಗಿಲ್‌ ಜೊತೆಗೆ ಇನಿಂಗ್ಸ್ ಆರಂಭಿಸಿದ ವೃದ್ಧಿಮಾನ್‌ ಸಾಹ (18) ಮೊದಲ ವಿಕೆಟ್‌ ಪಾಲುದಾರಿಕೆಯಲ್ಲಿ 54ರನ್‌ ಕಲೆಹಾಕಿದರು. ಬಳಿಕ ಬಂದ ಸಾಯಿ ಸುದರ್ಶನ್‌, ಗಿಲ್‌ ಜೊತೆಗೂಡಿ 2 ನೇ ವಿಕೆಟ್‌ಗೆ 138 ರನ್‌ಗಳ ಭರ್ಜರಿ ಜೊತೆಯಾಟವಾಡಿದರು. ಗಿಲ್‌ ಮಿಂಚು ಈ ಬಾರಿಯ ಐಪಿಎಲ್‌ನಲ್ಲಿ ಅತಿ ಹೆಚ್ಚು (851) ರನ್‌ ಗಳಿಸಿದ ಬ್ಯಾಟರ್‌ ಎನಿಸಿರುವ ಶುಭಮನ್‌ ಗಿಲ್‌, 2023ರ ಆವೃತ್ತಿಯಲ್ಲಿ 3ನೇ ಶತಕ ಸಿಡಿಸಿದರು. ಪಂದ್ಯದಲ್ಲಿ ಕೇವಲ 60 ಎಸೆತಗಳನ್ನು ಎದುರಿಸಿದ ಅವರು ಬರೋಬ್ಬರಿ 10 ಸಿಕ್ಸರ್‌ ಹಾಗೂ 7 ಬೌಂಡರಿ ಸಹಿತ 129 ರನ್‌ ಗಳಿಸಿ ಔಟಾದರು. ಗಿಲ್‌ಗೆ ಉತ್ತಮ ಸಹಕಾರ ನೀಡಿದ ಸಾಯಿ ಸುದರ್ಶನ್‌ (43 ರನ್‌) ಕೊನೇ ಓವರ್‌ನ ಮೊದಲ ಎಸೆತದಲ್ಲಿ ಔಟಾದರು. ಕೊನೆಯಲ್ಲಿ ಬೀಸಾಟವಾಡಿದ ನಾಯಕ ಹಾರ್ದಿಕ್‌ ಪಾಂಡ್ಯ ( 13 ಎಸೆತಗಳಲ್ಲಿ 28 ರನ್‌) ಹಾಗೂ ರಶೀದ್‌ ಖಾನ್‌ (5 ರನ್‌) ಅಜೇಯರಾಗಿ ಉಳಿದರು. - 👊🏻 👏👏 - .# | #Qualifier2 | # | @ ../W94VVw8TYm ! 🤯🤯 ?# | #Qualifier2 | # | @ ../BAd8NDVB0e ಮುಂಬೈ ಇಂಡಿಯನ್ಸ್‌ ಪರ ಕಳೆದ ಪಂದ್ಯದ ಹೀರೊ ಆಕಾಶ್‌ ಮಧ್ವಾಲ್‌ ಹಾಗೂ ಪಿಯೂಶ್‌ ಚಾವ್ಲಾ ತಲಾ ಒಂದೊಂದು ವಿಕೆಟ್‌ ಕಿತ್ತರು. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.