2023 | ಸಿಎಸ್‌ಕೆಗೆ ಗೆಲುವು ತಂದುಕೊಟ್ಟ ಜಡೇಜರನ್ನು ಮೇಲೆತ್ತಿ ಪ್ರಶಂಸಿಸಿದ ಧೋನಿ! ಅಹಮದಾಬಾದ್‌: ಮಹೇಂದ್ರಸಿಂಗ್ ಧೋನಿ ನಾಯಕತ್ವದ ಚೆನ್ನೈ ಸೂಪರ್ ಕಿಂಗ್ಸ್‌ ತಂಡವು ಈ ಬಾರಿಯ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್‌) ಕ್ರಿಕೆಟ್ ಟೂರ್ನಿಯ ಪ್ರಶಸ್ತಿಯನ್ನು ಗೆದ್ದು ಬೀಗಿದೆ. ಚೆನ್ನೈಗೆ ಗೆಲುವು ತಂದು ಕೊಟ್ಟ ಆಲ್‌ರೌಂಡರ್‌ ರವೀಂದ್ರ ಜಡೇಜ ಅವರನ್ನು ನಾಯಕ ಮಹೇಂದ್ರ ಸಿಂಗ್‌ ಧೋನಿ ಮೇಲೆತ್ತಿ ಪ್ರಶಂಸಿಸಿದ್ದಾರೆ. ಅಹಮದಾಬಾದ್‌ನಲ್ಲಿ ಸೋಮವಾರ ನಡೆದ ಫೈನಲ್‌ ಪಂದ್ಯ ಕೊನೆಯ ಎಸೆತದವರೆಗೆ ಕುತೂಹಲ ಉಳಿಸಿಡಿತ್ತು. ಮೊದಲು ಬ್ಯಾಟ್‌ ಮಾಡಿದ್ದ ಗುಜರಾತ್‌ ಟೈಟನ್ಸ್‌ ತಂಡ, 20 ಓವರ್‌ಗಳಲ್ಲಿ 4 ವಿಕೆಟ್‌ ನಷ್ಟಕ್ಕೆ 214ರನ್‌ ಗಳಿಸಿತ್ತು. ಮೊದಲ ಇನ್ನಿಂಗ್ಸ್‌ ನಂತರ ಮಳೆ ಸುರಿದಿದ್ದರಿಂದ ಡಕ್ವರ್ಥ್ ಲೂಯಿಸ್ ನಿಯಮದಂತೆ ಪಂದ್ಯ ಪರಿಷ್ಕತಗೊಂಡಿತ್ತು. ಅದರಂತೆ, ಚೆನ್ನೈಗೆ 15 ಓವರ್‌ಗಳಲ್ಲಿ 171 ರನ್‌ಗಳ ಗುರಿ ನಿಗದಿಯಾಯಿತು. ಸವಾಲಿನ ಮೊತ್ತ ಬೆನ್ನುಹತ್ತಿದ ಚೆನ್ನೈಗೆ ಕಡೇ ಎರಡು ಎಸೆತಗಳಲ್ಲಿ ಹತ್ತು ರನ್‌ಗಳ ಬೇಕಿತ್ತು. ಆಗ ಬ್ಯಾಟ್‌ ಬೀಸಿದ ರವೀಂದ್ರ ಜಡೇಜ, ಒಂದು ಸಿಕ್ಸರ್ ಮತ್ತು ಒಂದು ಬೌಂಡರಿ ಭಾರಿಸಿ ಚೆನ್ನೈಗೆ ಗೆಲುವು ತಂದುಕೊಟ್ಟರು. ತಂಡದ ಗೆಲುವಿಗೆ ಕಾರಣವಾದ ಜಡೇಜ ಅವರನ್ನು ಕ್ರೀಡಾಂಗಣದಲ್ಲೇ ಮೇಲಕ್ಕೆತ್ತಿದ ನಾಯಕ ಮಹೇಂದ್ರ ಸಿಂಗ್‌ ಧೋನಿ ಪ್ರಶಂಸೆ ವ್ಯಕ್ತಪಡಿಸಿದ್ದಾರೆ. ಈ ಚಿತ್ರವನ್ನು ಚೆನ್ನೈ ಸೂಪರ್‌ ಕಿಂಗ್ಸ್‌ ತಂಡ ತನ್ನ ಟ್ವಿಟರ್‌ ಖಾತೆಯಲ್ಲಿ ಹಂಚಿಕೊಂಡಿದ್ದು, ಫೊಟೊ ಮೆಚ್ಚುಗೆಗೆ ಪಾತ್ರವಾಗಿದೆ. 🦁💛#IPL2023Final # # # ../WNal0IHikd ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.