: ವಿವಾದಾತ್ಮಕ ಕ್ಯಾಚ್; ಶುಭಮನ್ ಗಿಲ್ ಔಟ್ ಅಥವಾ ನಾಟೌಟ್ ? ಲಂಡನ್: ಐಸಿಸಿ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್‌ನಲ್ಲಿ ಆಸ್ಟ್ರೇಲಿಯಾ ವಿರುದ್ಧ ನಡೆಯುತ್ತಿರುವ ಫೈನಲ್ ಪಂದ್ಯದಲ್ಲಿ ಭಾರತದ ಆರಂಭಿಕ ಬ್ಯಾಟರ್ ಶುಭಮನ್ ಗಿಲ್‌ಗೆ ಔಟ್ ತೀರ್ಪು ನೀಡಿರುವುದು ವಿವಾದಕ್ಕೀಡು ಮಾಡಿದೆ. ಪಂದ್ಯದ ನಾಲ್ಕನೇ ದಿನದಾಟದಲ್ಲಿ ಘಟನೆ ನಡೆದಿತ್ತು. ಆಸ್ಟ್ರೇಲಿಯಾ ಒಡ್ಡಿದ ಬೃಹತ್ ಗುರಿ ಬೆನ್ನಟ್ಟಿದ ಭಾರತಕ್ಕೆ ಗಿಲ್ ರೂಪದಲ್ಲಿ ಆರಂಭಿಕ ಆಘಾತ ಎದುರಾಗಿತ್ತು. ಸ್ಕಾಟ್‌ ಬೊಲಾಂಡ್ ದಾಳಿಯಲ್ಲಿ ಕ್ಯಾಮರೂನ್ ಗ್ರೀನ್ ಕೈಗೆ ಕ್ಯಾಚಿತ್ತ ಗಿಲ್ ಪೆವಿಲಿಯನ್‌ಗೆ ಮರಳಿದರು. ಆದರೆ ಗ್ರೀನ್ ಕ್ಯಾಚ್ ಪಡೆಯುವ ವೇಳೆ ಚೆಂಡು ನೆಲಕ್ಕೆ ಸವರಿದೆಯೇ ಎಂಬ ಬಗ್ಗೆ ಅನುಮಾನ ಮೂಡಿದೆ. ಟಿ.ವಿ ರಿಪ್ಲೇಯಲ್ಲಿ ಈ ಕುರಿತು ಹಲವು ಬಾರಿ ಪರೀಶಿಲಿಸಿದ ಮೂರನೇ ಅಂಪೈರ್ ಕೊನೆಗೆ ಔಟ್ ತೀರ್ಪು ನೀಡಿದ್ದರು. ಪರಿಣಾಮ 18 ರನ್ ಗಳಿಸಿದ್ದ ಗಿಲ್ ಪೆವಿಲಿಯನ್‌ನತ್ತ ಹೆಜ್ಜೆ ಹಾಕಿದರು. 🔎🔎🤦🏻‍♂️ ../pOnHYfgb6L ದಿನದಾಟದ ಬಳಿಕ ತಮ್ಮ ಇನ್‌ಸ್ಟಾಗ್ರಾಂ ಖಾತೆಯಲ್ಲಿ ಈ ಕುರಿತು ಚಿತ್ರ ಹಂಚಿರುವ ಗಿಲ್, ಅಂಪೈರ್ ನಿರ್ಣಯಕ್ಕೆ ಪರೋಕ್ಷವಾಗಿ ಅಸಮಾಧಾನ ತೋಡಿಕೊಂಡಿದ್ದಾರೆ. ಏತನ್ಮಧ್ಯೆ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಫೈನಲ್ ಪಂದ್ಯದಲ್ಲಿ ಭಾರತ ಸೋಲಿನ ಭೀತಿಗೆ ಒಳಗಾಗಿದೆ. ಐದನೇ ದಿನದಾಟದಲ್ಲಿ 5 ವಿಕೆಟ್ ನಷ್ಟಕ್ಕೆ 196 ರನ್ ಗಳಿಸಿದೆ. 49 ರನ್ ಗಳಿಸಿದ ವಿರಾಟ್ ಕೊಹ್ಲಿ ವಿಕೆಟ್ ನಷ್ಟವಾಗಿದೆ. # ' 💔😞 ../D7fwqMisHD ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.