ಮಹಿಳಾ ಆ್ಯಷಸ್ ಟೆಸ್ಟ್ ಪಂದ್ಯ: ಅನಾಬೆಲ್ ಶತಕ ನಾಟಿಂಗ್‌ಹ್ಯಾಮ್: ಅನಾಬೆಲ್ ಸದರ್ಲ್ಯಾಂಡ್ (ಔಟಾಗದೆ 137, 184ಎ, 4X16, 6X1) ಅವರ ಶತಕದ ಬಲದಿಂದ ಆಸ್ಟ್ರೇಲಿಯಾ ಮಹಿಳಾ ತಂಡವು ಆ್ಯಷಸ್ ಸರಣಿಯ ಟೆಸ್ಟ್‌ನ ಮೊದಲ ಇನಿಂಗ್ಸ್‌ನಲ್ಲಿ ಉತ್ತಮ ಮೊತ್ತ ಗಳಿಸಿತು. ಟ್ರೆಂಟ್‌ಬ್ರಿಡ್ಜ್ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಪಂದ್ಯದ ಎರಡನೇ ದಿನವಾದ ಶುಕ್ರವಾರ ಆಸ್ಟ್ರೇಲಿಯಾ ತಂಡವು 124.2 ಓವರ್‌ಗಳಲ್ಲಿ 473 ರನ್‌ ಗಳಿಸಿತು. ಅದಕ್ಕುತ್ತರವಾಗಿ ಇಂಗ್ಲೆಂಡ್ ತಂಡವು 35 ಓವರ್‌ಗಳಲ್ಲಿ 1 ವಿಕೆಟ್‌ಗೆ 124 ರನ್‌ ಗಳಿಸಿದೆ. ಟಾಮಿ ಬೆಮೌಂಟ್ (ಬ್ಯಾಟಿಂಗ್ 66) ಮತ್ತು ಹೀಥರ್ (ಬ್ಯಾಟಿಂಗ್ 42) ಕ್ರೀಸ್‌ನಲ್ಲಿದ್ದಾರೆ. ಸಂಕ್ಷಿಪ್ತ ಸ್ಕೋರು: ಮೊದಲ ಇನಿಂಗ್ಸ್: ಆಸ್ಟ್ರೇಲಿಯಾ: 124. 2 ಓವರ್‌ಗಳಲ್ಲಿ 473 (ಆ್ಯಷ್ಲೆ ಗಾರ್ಡನರ್ 40, ಅನಾಬೆಲ್ ಸದರ್ಲ್ಯಾಂಡ್ ಔಟಾಗದೆ 137, ಅಲನಾ ಕಿಂಗ್ 21, ಕಿಮ್ ಗಾರ್ತ್‌ 22, ಸೋಫಿ ಎಕ್ಸೆಲ್‌ಸ್ಟನ್ 129ಕ್ಕೆ5, ಲಾರೆನ್ ಫ್ಲೈರ್ 99ಕ್ಕೆ2, ಲಾರೆನ್ ಬೆಲ್ 91ಕ್ಕೆ2) ಇಂಗ್ಲೆಂಡ್: 35 ಓವರ್‌ಗಳಲ್ಲಿ 1 ವಿಕೆಟ್‌ಗೆ 124 (ಟಾಮಿ ಬೆಮೌಂಟ್ ಔಟಾಗದೆ 66, ಹೀಥರ್ ನೈಟ್ ಔಟಾಗದೆ 40) ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.