2023 | ಬೆಂಗಳೂರಿನಲ್ಲಿ ಪಾಕ್, ಆಸ್ಟ್ರೇಲಿಯಾ ಮುಖಾಮುಖಿ ಬೆಂಗಳೂರು: ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಈ ಬಾರಿಯ ವಿಶ್ವಕಪ್ ಟೂರ್ನಿಯ ಐದು ಪಂದ್ಯಗಳು ನಡೆಯಲಿವೆ. ನವೆಂಬರ್ 11ರಂದು ಭಾರತ ತಂಡದ ಪಂದ್ಯ ನಡೆಯಲಿದೆ. ಕ್ವಾಲಿಫೈಯರ್‌ನಲ್ಲಿ ಅರ್ಹತೆ ಪಡೆದ ತಂಡವನ್ನು ಇಲ್ಲಿ ಎದುರಿಸಲಿದೆ. ಇದನ್ನು ಬಿಟ್ಟರೆ ಇಲ್ಲಿ ಭಾರತ ಇನ್ನಾವುದೇ ಪಂದ್ಯಗಳು ಇಲ್ಲಿ ಇಲ್ಲ. ಆಸ್ಟ್ರೇಲಿಯಾ–ಪಾಕಿಸ್ತಾನ (ಅ. 20), ಇಂಗ್ಲೆಂಡ್–ಕ್ವಾಲಿಫೈಯರ್ ಎರಡನೇ ಸ್ಥಾನ ಪಡೆದ ತಂಡ (ಅ.26), ನ್ಯೂಜಿಲೆಂಡ್ – ಪಾಕಿಸ್ತಾನ (ನ.4), ನ್ಯೂಜಿಲೆಂಡ್ –ಕ್ವಾಲಿಫೈಯರ್‌ ತಂಡ (ನ. 9) ಹಾಗೂ ಭಾರತ–ಕ್ವಾಲಿಫೈಯರ್ ಒಂದನೇ ತಂಡ (ನ.11) ಪಂದ್ಯಗಳು ನಡೆಯಲಿವೆ. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.