ಕ್ರಿಕೆಟ್‌: ಮಂಗಳೂರು ವಲಯಕ್ಕೆ ಜಯ ಬೆಂಗಳೂರು: ಹರ್ಷಿತ್‌ ಪೂಜಾರಿ (65 ರನ್‌) ಅವರ ಅರ್ಧಶತಕದ ನೆರವಿನಿಂದ ಮಂಗಳೂರು ವಲಯ ತಂಡ ಕೆಎಸ್‌ಸಿಎ 23 ವರ್ಷದೊಳಗಿನವರ ಅಂತರ (ಗ್ರಾಮಾಂತರ) ವಲಯ ಕ್ರಿಕೆಟ್‌ ಟೂರ್ನಿಯಲ್ಲಿ ಮಂಗಳವಾರ 80 ರನ್‌ಗಳಿಂದ ತುಮಕೂರು ವಲಯದ ಮೇಲೆ ಗೆಲುವು ಸಾಧಿಸಿತು. ಇತರ ಪಂದ್ಯಗಳಲ್ಲಿ ಧಾರವಾಡ ವಲಯ ತಂಡ 2 ವಿಕೆಟ್‌ಗಳಿಂದ ಮೈಸೂರು ವಲಯ ತಂಡವನ್ನು, ರಾಯಚೂರು ವಲಯ 7 ವಿಕೆಟ್‌ಗಳಿಂದ ಶಿವಮೊಗ್ಗ ವಲಯ ತಂಡವನ್ನು ಪರಾಭವಗೊಳಿಸಿದವು. ಸಂಕ್ಷಿಪ್ತ ಸ್ಕೋರ್‌: (ಬಿಜಿಎಸ್‌ ಮೈದಾನ) ಮಂಗಳೂರು ವಲಯ: 47.4 ಓವರ್‌ಗಳಲ್ಲಿ 235 (ಹರ್ಷಿತ್ ಪೂಜಾರಿ 65, ರುಶಿ ಬಿ. ಶೆಟ್ಟಿ 29, ಶ್ರೀವತ್ಸ ಆರ್. ಆಚಾರ್ಯ 31, ನಾಥನ್ ಡಿಮೆಲ್ಲೊ 37; ಎಸ್. ತೌಫೀಕ್ 28ಕ್ಕೆ 3, ಟಿ. ಚಿರಂಜೀವಿ 36ಕ್ಕೆ 2, ಎಚ್‌.ಪಿ. ಅಭಿಷೇಕ್ 34ಕ್ಕೆ 2); ತುಮಕೂರು ವಲಯ: 34.2 ಓವರ್‌ಗಳಲ್ಲಿ 155 (ಎಸ್.ತೌಫೀಕ್ 25, ಹೇಮಂತ್ ಕುಮಾರ್ 35, ನಾಥನ್ ಡಿಮೆಲ್ಲೊ 29ಕ್ಕೆ 4, ವಿನಾಯಕ ಹೊಳ್ಳ 49ಕ್ಕೆ 3, ಬಿ.ಪಿ. ಮನೀಶ್ 21ಕ್ಕೆ 2). (ಕಿಣಿ ಸ್ಪೋರ್ಟ್ಸ್ ಅರೇನಾ ಮೈದಾನ) ಮೈಸೂರು ವಲಯ: 40.3 ಓವರ್‌ಗಳಲ್ಲಿ 136 (ಪ್ರಿಯರಂಜನ್ 30ಕ್ಕೆ 3, ಸಾಯಂ ಆರ್. ಅಪ್ಪಣ್ಣವರ 31ಕ್ಕೆ 3, ಮುದಸ್ಸರ್ ನಜರ್ 35ಕ್ಕೆ 2); ಧಾರವಾಡ ವಲಯ: 33.3 ಓವರ್‌ಗಳಲ್ಲಿ 8 ವಿಕೆಟ್‌ಗೆ 139 (ಆರ್‌.ಎನ್‌. ಚಿರಾಗ್ 33, ಕೃಷ್ಣಪ್ಪ ಬಗಾಡಿ 26, ಎಂ.ಆರ್‌. ಜಯಂತ್ 29ಕ್ಕೆ 4, ಜೆ. ಮಹೇಂದ್ರ ಕುಮಾರ್ 12ಕ್ಕೆ 2). ಫಲಿತಾಂಶ: ಧಾರವಾಡ ವಲಯಕ್ಕೆ 2 ವಿಕೆಟ್‌ಗಳ ಜಯ. (ಐಎಎಫ್‌ ಮೈದಾನ) ಶಿವಮೊಗ್ಗ ವಲಯ: 46.2 ಓವರ್‌ಗಳಲ್ಲಿ 164 (ಅಬು 34, ಶ್ರೇಯಾಂಕ್ ಸಾಗರ್ 28, ಪುನೀತ್ ಕುಮಾರ್ 40ಕ್ಕೆ 4, ಕೆ.ಶಶಿಕುಮಾರ್ 20ಕ್ಕೆ 2); ರಾಯಚೂರು ವಲಯ: 33.4 ಓವರ್‌ಗಳಲ್ಲಿ 3 ವಿಕೆಟ್‌ಗೆ 165 (ಬಿ. ವಿಜಯ ರಾಜ್ 50, ಅಮಯ್ ತೇಜಸ್ 34, ತಿಪ್ಪಾರೆಡ್ಡಿ 41, ಪ್ರಲ್ಹಾದ್ ಕುಲಕರ್ಣಿ 25) ಫಲಿತಾಂಶ: ರಾಯಚೂರು ವಲಯಕ್ಕೆ 7 ವಿಕೆಟ್‌ಗಳ ಜಯ. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.