ಎನ್‌ಸಿಎಗೆ ಇಶಾನ್ ಕಿಶನ್ ಮುಂಬೈ: ಭಾರತ ತಂಡದ ವಿಕೆಟ್‌ಕೀಪರ್ ಇಶಾನ್ ಕಿಶನ್ ಅವರು ಸ್ಟ್ರೆಂಥ್ ಮತ್ತು ಕಂಡಿಷನಿಂಗ್‌ ಪ್ರಕ್ರಿಯೆಯಲ್ಲಿ ಪಾಲ್ಗೊಳ್ಳಲು ಮುಂದಿನ ವಾರ ಬೆಂಗಳೂರಿನ ರಾಷ್ಟ್ರೀಯ ಕ್ರಿಕೆಟ್ ಅಕಾಡೆಮಿ (ಎನ್‌ಸಿಎ) ಸೇರಲಿದ್ದಾರೆ. ಭಾರತ ತಂಡವು ಜುಲೈ 3ರಂದು ವೆಸ್ಟ್ ಇಂಡೀಸ್‌ಗೆ ತೆರಳಲಿದೆ. 12ರಿಂದ ಸರಣಿ ಆರಂಭವಾಗಲಿದೆ. ಎರಡು ಟೆಸ್ಟ್, ಮೂರು ಏಕದಿನ ಹಾಗೂ ಐದು ಟಿ20 ಪಂದ್ಯಗಳಲ್ಲಿ ಆಡಲಿದೆ. ಇಶಾನ್ ಕಿಶನ್ ಕೂಡ ಭಾರತ ತಂಡದಲ್ಲಿದ್ದಾರೆ. ಎರಡು ಅಂತರರಾಷ್ಟ್ರೀಯ ಸರಣಿಗಳ ನಡುವಿನ ಬಿಡುವಿನಲ್ಲಿ ಮತ್ತು ಯಾವುದೇ ದೇಶಿ ಟೂರ್ನಿಯಲ್ಲಿ ಆಡದಿದ್ದರೆ ಎನ್‌ಸಿಎಗೆ ಕರೆಸಿ ಫಿಟ್‌ನೆಸ್‌ ಸ್ಥಿತಿಗತಿಯನ್ನು ಅವಲೋಕಿಸಲಾಗುತ್ತದೆ. ಜೂನ್ 28ರಿಂದ ಬೆಂಗಳೂರಿನಲ್ಲಿ ದುಲೀಪ್ ಟ್ರೋಫಿ ಟೂರ್ನಿ ನಡೆಯಲಿದೆ. ಜುಲೈ 12 ರಿಂದ 16ರವರೆಗೆ ಎಂ. ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಫೈನಲ್ ಕೂಡ ನಡೆಯಲಿದೆ. ಆದರೆ ಇಶಾನ್ ಈ ಟೂರ್ನಿಯಲ್ಲಿ ಆಡುತ್ತಿಲ್ಲ. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.