ಕ್ರಿಕೆಟ್: ನಿತಿನ್ ನಾಯ್ಡುಗೆ 12 ವಿಕೆಟ್ ಬೆಂಗಳೂರು: ಒಟ್ಟು ಒಂದು ಡಜನ್ ವಿಕೆಟ್ ಗಳಿಸಿದ ಎಡಗೈ ಸ್ಪಿನ್ನರ್ ನಿತಿನ್ ನಾಯ್ಡು (49ಕ್ಕೆ4 ಮತ್ತು 68ಕ್ಕೆ8) ಅವರ ಅಮೋಘ ಬೌಲಿಂಗ್‌ ಬಲದಿಂದ ಹೆರಾನ್ಸ್‌ ಕ್ರಿಕೆಟ್ ಕ್ಲಬ್ ತಂಡವು ಎಂ.ಎ.ಟಿ. ಆಚಾರ್ಯ ಶೀಲ್ಡ್‌ಗಾಗಿ ನಡೆಯುತ್ತಿರುವ ಕೆಎಸ್‌ಸಿಎ 1 ಮತ್ತು 2ನೇ ಡಿವಿಷನ್ ಲೀಗ್‌ ಟೂರ್ನಿಯ ಪಂದ್ಯದಲ್ಲಿ ಜಯಿಸಿತು. ಹೆರಾನ್ಸ್ ತಂಡವು 3 ವಿಕೆಟ್‌ಗಳಿಂದ ಜವಾಹರ್ ಸ್ಪೋರ್ಟ್ಸ್ ಕ್ಲಬ್ (1) ವಿರುದ್ಧ ಗೆದ್ದಿತು. ನಿತಿನ್ ನಾಯ್ಡು ಎರಡೂ ಇನಿಂಗ್ಸ್‌ಗಳಲ್ಲಿ ಮಿಂಚಿದರು. ತಂಡದ ಆರಂಭಿಕ ಬ್ಯಾಟರ್ ವಿನೀತ್ ಮಂಜುನಾಥ್ (154; 177ಎ, 4X21, 6X4) ಮೊದಲ ಇನಿಂಗ್ಸ್‌ನಲ್ಲಿ ಶತಕ ಬಾರಿಸಿದರು. ಸಂಕ್ಷಿಪ್ತ ಸ್ಕೋರು: ಹೆರಾನ್ಸ್ ಸಿಸಿ: ಮೊದಲ ಇನಿಂಗ್ಸ್ 67.2 ಓವರ್‌ಗಳಲ್ಲಿ 299 (ವಿನೀತ್ ಮಂಜುನಾಥ್ 154, ಅರ್ಜುನ್ ಎಸ್‌.ಪಿ 28, ರೋಹಿತ್ ಗೌಡ 76, ಸೌರಭ್ ಮುತ್ತೂರ್ 91ಕ್ಕೆ7) ಜವಾಹರ್ ಸ್ಪೋರ್ಟ್ಸ್ ಕ್ಲಬ್: 48.2 ಓವರ್‌ಗಳಲ್ಲಿ 174 (ಜಯೇಶ್ ಬಾಬು 30, ಸೌರಭ್ ಮುತ್ತೂರ್ 34, ನಿತಿನ್ ನಾಯ್ಡು 49ಕ್ಕೆ4, ಅಮೋಘ ಶ್ರೀಕಾಂತ್ 38ಕ್ಕೆ4, ಆದರ್ಶ್ ಪ್ರಕಾಶ್ 26ಕ್ಕೆ2) ಎರಡನೇ ಇನಿಂಗ್ಸ್: ಹೆರಾನ್ಸ್‌ ಸಿಸಿ: 16.1 ಓವರ್‌ಗಳಲ್ಲಿ 7 ವಿಕೆಟ್‌ಗಳಿಗೆ 73 (ಸುಭಾಶ್ ಅಡಿಗಾ 37, ಜಯೇಶ್ ಬಾಬು 30ಕ್ಕೆ4, ಡೊಕಾ ಅಮೋಘ 10ಕ್ಕೆ2), ಜವಾಹರ್ ಸ್ಪೋರ್ಟ್ಸ್ ಕ್ಲಬ್: 55.1 ಓವರ್‌ಗಳಲ್ಲಿ 197 (ರಘುವೀರ್ 60, ಜಯೇಶ್ ಬಾಬು 25, ಚೈತನ್ಯ 65, ಆದರ್ಶ ಪ್ರಕಾಶ್ 51ಕ್ಕೆ2, ನಿತಿನ್ ನಾಯ್ಡು 68ಕ್ಕೆ8) ಹೆರಾನ್ಸ್‌ ಕ್ರಿಕೆಟ್ ಕ್ಲಬ್‌ಗೆ 3 ವಿಕೆಟ್‌ಗಳ ಜಯ, ಐದು ಅಂಕ ಮತ್ತು ಜವಾಹರ್‌ಗೆ 1 ಅಂಕ. ಚಿಂತಾಮಣಿ ಕ್ರೀಡಾ ಸಂಸ್ಥೆ, ಚಿಂತಾಮಣಿ: 38.1 ಓವರ್‌ಗಳಲ್ಲಿ 156 (ಆದಿತ್ಯ ಕೆ ಉಡುಪ 23, ಸಹರ್ಷ ರೆಡ್ಡಿ 21, ರಾಜಶೇಕರ್ ಹರಿಕಾಂತ್ 25, ಎನ್. ರೋಹನ್ 32ಕ್ಕೆ2, ಅಬ್ರಾರ್ ಖಾಜಿ 24ಕ್ಕೆ4, ಗೊರ್ಲಿ ದುರ್ಗಾಪ್ರಸಾದ್ 18ಕ್ಕೆ2) ವಿಲ್ಸನ್ ಗಾರ್ಡನ್ ಸಿಸಿ: 36.3 ಓವರ್‌ಗಳಲ್ಲಿ 131 (ರಘುವೀರ್ ರಾಜಪುರೋಹಿತ್ 38, ರಿಷಭ್ ನವರತನ್ 21, ನೇಥನ್ ಡಿ ಮೆಲ್ಲೊ 71ಕ್ಕೆ8, ಆಶಿಶ್ ನಾಯಕ 14ಕ್ಕೆ2) ಎರಡನೇ ಇನಿಂಗ್ಸ್: 35.3 ಓವರ್‌ಗಳಲ್ಲಿ 112 (ರಿಷಿನ್ ಅರಿಂಜಯ್ 20, ರಾಜಶೇಖರ್ ಹರಿಕಾಂತ್ 50, ಮೀರ್ ಕೌನೇನ್ ಅಬ್ಬಾಸ್ 25, ಅಬ್ರಾರ್ ಖಾಜಿ 44ಕ್ಕೆ7), ವಿಲ್ಸನ್ ಗಾರ್ಡನ್: 17.4 ಓವರ್‌ಗಳಲ್ಲಿ 2 ವಿಕೆಟ್‌ಗಳಿಗೆ 93 (ಎಂ.ಕೆ. ಯಶವಂತ್ 39, ರಘುವೀರ್ ರಾಜಪುರೋಹಿತ್ ಔಟಾಗದೆ 26) ವಿಲ್ಸನ್ ಗಾರ್ಡನ್ ತಂಡಕ್ಕೆ 8 ವಿಕೆಟ್‌ಗಳ ಜಯ ಹಾಗೂ ಐದು ಅಂಕ. ಚಿಂತಾಮಣಿಗೆ 1 ಅಂಕ. ದ ಬೆಂಗಳೂರು ಕ್ರಿಕೆಟರ್ಸ್: 81.1 ಓವರ್‌ಗಳಲ್ಲಿ 292 (ಆರ್. ಅಕ್ಷಯರ್ 116, ಕೆ.ಬಿ. ಶ್ರೇಯಸ್ 36, ಎಸ್‌. ಚೇತನ್ 71, ಮಂಜುನಾಥ್ 26, ಶ್ರೇಯಸ್ ಕುಮಾರ್ 15ಕ್ಕೆ2, ಪ್ರಾಣೇಶ್ ದೇಸಾಯಿ 88ಕ್ಕೆ4), ಮಾಡರ್ನ್ ಸಿಸಿ: 68.1 ಓವರ್‌ಗಳಲ್ಲಿ 280 (ಎಂ.ಆರ್. ಜಯಂತ್ 26, ಪ್ರೇಮನಾಥ್ ಜೆ ಗೋಡೆ 31, ಕಾರ್ತಿಕ್ ರಾಮಣ್ಣ 36, ಎಸ್‌.ಎ. ಸಚಿನ್ 75, ಪ್ರಣವ್ ಅಶ್ವಥ್ 64, ಮಂಜುನಾಥ್ 48ಕ್ಕೆ3, ಮನೋಜ್ ಕುಮಾರ್ 45ಕ್ಕೆ2, ಪವನ್ ಕುಮಾರ್ 31ಕ್ಕೆ2, ಅಕ್ಷಯ್ 28ಕ್ಕೆ3) ಪಂದ್ಯ ಡ್ರಾ. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.