ಕ್ರಿಕೆಟ್‌: ಸುಧನ್ವ ಕುಲಕರ್ಣಿ ಶತಕ- ಧಾರವಾಡ ವಲಯ ತಂಡಕ್ಕೆ ಜಯ ಬೆಂಗಳೂರು: ಸುಧನ್ವ ಯು. ಕುಲಕರ್ಣಿ (126 ರನ್‌, 134 ಎಸೆತ) ಅವರ ಶತಕದ ಬಲದಿಂದ ಧಾರವಾಡ ವಲಯ ತಂಡ ಕೆಎಸ್‌ಸಿಎ 23 ವರ್ಷದೊಳಗಿನವರ ಅಂತರ (ಗ್ರಾಮಾಂತರ) ವಲಯ ಕ್ರಿಕೆಟ್‌ ಟೂರ್ನಿಯಲ್ಲಿ ಬುಧವಾರ 49 ರನ್‌ಗಳಿಂದ ರಾಯಚೂರು ವಲಯದ ಮೇಲೆ ಜಯ ಸಾಧಿಸಿತು. ಮತ್ತೊಂದು ಪಂದ್ಯದಲ್ಲಿ ಮೈಸೂರು ವಲಯ ತಂಡ‌ 9 ವಿಕೆಟ್‌ಗಳಿಂದ ಮಂಗಳೂರು ವಲಯ ತಂಡವನ್ನು ಸೋಲಿಸಿತು. ಇನ್ನೊಂದು ಪಂದ್ಯದಲ್ಲಿ ಶಿವಮೊಗ್ಗ ವಲಯ ತಂಡ 42 ರನ್‌ಗಳಿಂದ ತುಮಕೂರು ವಲಯ ತಂಡವನ್ನು ಮಣಿಸಿತು. ಸಂಕ್ಷಿಪ್ತ ಸ್ಕೋರ್‌: (ಐಎಸ್‌ಎಸ್‌ ಸ್ಪೋರ್ಟ್ಸ್ ಅರೇನಾ ಮೈದಾನ) ಧಾರವಾಡ ವಲಯ: 50 ಓವರ್‌ಗಳಲ್ಲಿ 7 ವಿಕೆಟ್‌ಗೆ 268 (ಸುಧನ್ವ ಯು. ಕುಲಕರ್ಣಿ 126, ಓಂಕಾರ್ ಯು. ವರ್ಣೇಕರ 45; ಪುನಿತ್ ಕುಮಾರ್ 54ಕ್ಕೆ 3); ರಾಯಚೂರು ವಲಯ: 45.1 ಓವರ್‌ಗಳಲ್ಲಿ 219 (ಬಿ. ವಿಜಯರಾಜ್ 37, ಅಮಯ್ ತೇಜಸ್ 39, ತಿಪ್ಪಾ ರೆಡ್ಡಿ 47, ಭೀಮ್ ರಾವ್ 33; ಮುದಸಿರ್ ನಜರ್ 21ಕ್ಕೆ 2, ಆದರ್ಶ ವಿ. ಹಿರೇಮಠ 42ಕ್ಕೆ 2, ಕೃಷ್ಣಪ್ಪ ಬಗಾಡಿ 45ಕ್ಕೆ 3) (ಐಎಎಫ್‌ ಮೈದಾನ) ಮಂಗಳೂರು ವಲಯ: 47.2 ಓವರ್‌ಗಳಲ್ಲಿ 147 (ರುಶಿ ಬಿ. ಶೆಟ್ಟಿ 61; ಕೆ. ಗೌರವ್ 30ಕ್ಕೆ 3, ಎಲ್‌. ಮನ್ವಂತ್ ಕುಮಾರ್ 28ಕ್ಕೆ 4); ಮೈಸೂರು ವಲಯ: 23.1 ಓವರ್‌ಗಳಲ್ಲಿ 1 ವಿಕೆಟ್‌ಗೆ 150 (ಎಂ.ಕೆ. ಯಶವಂತ್ 59, ಯಶವಂತ್ ಪಟೇಲ 47); ಫಲಿತಾಂಶ– ಮೈಸೂರು ವಲಯಕ್ಕೆ 9 ವಿಕೆಟ್‌ ಜಯ. (ಆರ್‌ಡಬ್ಲ್ಯುಎಫ್‌ ಮೈದಾನ) ಶಿವಮೊಗ್ಗ ವಲಯ: 42.5 ಓವರ್‌ಗಳಲ್ಲಿ 185 (ಅಬು 52, ಸಿ.ಎಲ್‌. ಯಶವಂತ್ ಗೌಡ 42; ಟಿ.ಆರ್‌. ಧನುಷ್ 44ಕ್ಕೆ 4, ಚಂದನ್ ಎಸ್. ಗುಜ್ಜರ 43ಕ್ಕೆ 3, ಎಚ್‌.ಪಿ. ಅಭಿಷೇಕ್ 36ಕ್ಕೆ 2); ತುಮಕೂರು ವಲಯ: 37.2 ಓವರ್‌ಗಳಲ್ಲಿ 143 (ಎಸ್‌.ತೌಫೀಕ್ 28, ಹೇಮಂತ್ ಕುಮಾರ್ 33; ಮಿಥೇಶ್ 46ಕ್ಕೆ 3, ದಿವಿನ್ ಸತೀಶ್ 17ಕ್ಕೆ 2, ಡಿ.ಎಂ. ಶಶಾಂಕ್ 15ಕ್ಕೆ 2); ಫಲಿತಾಂಶ– ಶಿವಮೊಗ್ಗ ವಲಯಕ್ಕೆ 42 ರನ್‌ಗಳ ಜಯ. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.