ಪಶ್ಚಿಮ ವಲಯ ತಂಡಕ್ಕೆ ತುಷಾರ್‌ ದೇಶಪಾಂಡೆ ಮುಂಬೈ: ಮುಂಬೈನ ಮಧ್ಯಮ ವೇಗದ ಬೌಲರ್‌ ತುಷಾರ್ ದೇಶಪಾಂಡೆ ಅವರು ದುಲೀಪ್‌ ಟ್ರೋಫಿಯಲ್ಲಿ ಆಡುವ ಪಶ್ಚಿಮ ವಲಯ ತಂಡಕ್ಕೆ ಭಾನುವಾರ ಸೇರ್ಪಡೆಗೊಂಡಿದ್ದಾರೆ. ಗಾಯಾಳಾಗಿರುವ ಎಡಗೈ ವೇಗಿ ಚೇತನ್ ಸಕಾರಿಯಾ ಸ್ಥಾನದಲ್ಲಿ ತುಷಾರ್‌ ಅವಕಾಶ ಪಡೆದಿದ್ದಾರೆ. ಸೌರಾಷ್ಟ್ರದ ಸಕಾರಿಯಾ ಮೊಣಕೈ ಗಾಯದಿಂದಾಗಿ ಅವರು ಟೂರ್ನಿಯಿಂದ ಹೊರಬಿದ್ದಿದ್ದಾರೆ. ಅವರಿಗೆ ಮೂರು ವಾರಗಳ ವಿಶ್ರಾಂತಿ ಅಗತ್ಯವಿದೆ ಎಂದು ಬಿಸಿಸಿಐ ಮೂಲ ತಿಳಿಸಿದೆ. ಪಶ್ಚಿಮ ವಲಯ ಸೆಮಿಫೈನಲ್‌ನಲ್ಲಿ ಕೇಂದ್ರ ವಲಯ ತಂಡವನ್ನು ಎದುರಿಸಲಿದೆ. 29 ಪ್ರಥಮ ದರ್ಜೆ ಪಂದ್ಯಗಳನ್ನಾಡಿರುವ ತುಷಾರ್‌ 27.77 ಸರಾಸರಿಯಲ್ಲಿ 80 ವಿಕೆಟ್‌ ಪಡೆದಿದ್ದಾರೆ. ಈ ವರ್ಷದ ಐಪಿಎಲ್‌ನಲ್ಲಿ 16 ಪಂದ್ಯಗಳಿಂದ 21 ವಿಕೆಟ್‌ ಪಡೆದಿದ್ದಾರೆ. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.