2023 | ಇಂಗ್ಲೆಂಡ್ 325ಕ್ಕೆ ಆಲೌಟ್; ಆಸೀಸ್‌ಗೆ 91 ರನ್ ಮುನ್ನಡೆ ಲಂಡನ್: ಲಾರ್ಡ್ಸ್‌ನಲ್ಲಿ ಅತಿಥೇಯ ಇಂಗ್ಲೆಂಡ್ ವಿರುದ್ಧ ನಡೆಯುತ್ತಿರುವ ಆ್ಯಷಸ್ ಟೆಸ್ಟ್ ಸರಣಿಯ ಎರಡನೇ ಪಂದ್ಯದ ಮೊದಲ ಇನಿಂಗ್ಸ್‌ನಲ್ಲಿ ಆಸ್ಟ್ರೇಲಿಯಾ 91 ರನ್‌ಗಳ ಮುನ್ನಡೆ ಗಳಿಸಿದೆ. ಆಸ್ಟ್ರೇಲಿಯಾದ 416 ರನ್‌ಗಳಿಗೆ ಉತ್ತರವಾಗಿ ಆಂಗ್ಲರ ಪಡೆ 76.2 ಓವರ್‌ಗಳಲ್ಲಿ 325 ರನ್‌ಗಳಿಗೆ ತನ್ನೆಲ್ಲ ವಿಕೆಟ್‌ಗಳನ್ನು ಕಳೆದುಕೊಂಡಿದೆ. ನಾಲ್ಕು ವಿಕೆಟ್ ನಷ್ಟಕ್ಕೆ 278 ರನ್ ಗಳಿಸಿದ ಇಂಗ್ಲೆಂಡ್, ಎರಡನೇ ದಿನದಾಟದಲ್ಲಿ ದಿಢೀರ್ ಪತನ ಕಂಡಿತು. ಅಲ್ಲದೆ ಇಂದು 47 ರನ್ ಪೇರಿಸುವಷ್ಟರಲ್ಲಿ ಉಳಿದ ಆರು ವಿಕೆಟ್‌ಗಳನ್ನು ಕಳೆದುಕೊಂಡಿತು. ಇಂಗ್ಲೆಂಡ್ ಪರ ಆರಂಭಿಕ ಬೆನ್ ಡಕೆಟ್ ಗರಿಷ್ಠ 98 ರನ್ ಗಳಿಸಿದರು. ಹ್ಯಾರಿ ಬ್ರೂಕ್ 50, ಜ್ಯಾಕ್ ಕ್ರಾಲಿ 48 ಹಾಗೂ ಒಲಿ ಪೋಪ್ 42 ರನ್ ಗಳಿಸಿದರು. ' : 5-0-13-2 # ../FHH6S98l9g ಆಸ್ಟ್ರೇಲಿಯಾದ ಪರ ಮಿಚೆಲ್ ಸ್ಟಾರ್ಕ್ ಮೂರು ಮತ್ತು ಜೋಶ್ ಹೇಜಲ್‌ವುಡ್ ಹಾಗೂ ಟ್ರಾವಿಸ್ ಹೆಡ್ ತಲಾ ಎರಡು ವಿಕೆಟ್ ಕಬಳಿಸಿದರು. ಸ್ಟೀವ್ ಸ್ಮಿತ್ ಅಮೋಘ ಶತಕ (110) ಹಾಗೂ ಡೇವಿಡ್ ವಾರ್ನರ್ (66) ಹಾಗೂ ಮಾರ್ನಸ್ ಲಾಬುಷೇನ್ (47) ಉಪಯುಕ್ತ ಬ್ಯಾಟಿಂಗ್ ನೆರವಿನಿಂದ ಆಸ್ಟ್ರೇಲಿಯಾ ಮೊದಲ ಇನಿಂಗ್ಸ್‌ನಲ್ಲಿ 416 ರನ್ ಗಳಿಸಿತು. ಇಂಗ್ಲೆಂಡ್ ಪರ ಒಲಿ ರಾಬಿನ್ಸನ್ ಹಾಗೂ ಜೋಶ್ ಟಂಗ್ ತಲಾ ಮೂರು ವಿಕೆಟ್ ಗಳಿಸಿದರು. ಐದು ಪಂದ್ಯಗಳ ಆ್ಯಷಸ್ ಟೆಸ್ಟ್ ಸರಣಿಯಲ್ಲಿ ಆಸ್ಟ್ರೇಲಿಯಾ ಈಗಾಗಲೇ 1-0 ಅಂತರದ ಮುನ್ನಡೆ ಗಳಿಸಿದೆ. ಮೊದಲ ಟೆಸ್ಟ್ ಪಂದ್ಯದಲ್ಲಿ ಪ್ಯಾಟ್ ಕಮಿನ್ಸ್ ಬಳಗವು ಎರಡು ವಿಕೆಟ್ ಅಂತರದ ರೋಚಕ ಗೆಲುವು ದಾಖಲಿಸಿತ್ತು. : 325, 6-48 . ' 91 .# ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.