ವಿಶ್ವಕಪ್‌ ಅರ್ಹತಾ ಟೂರ್ನಿ: ಜಿಂಬಾಬ್ವೆಗೆ ರೋಚಕ ಜಯ ಬುಲಾವಯೊ: ಉತ್ತಮ ಹೋರಾಟದ ಪಂದ್ಯದಲ್ಲಿ ಆತಿಥೇಯ ಜಿಂಬಾಬ್ವೆ ತಂಡ 14 ರನ್‌ಗಳಿಂದ ಒಮಾನ್‌ ಮೇಲೆ ಜಯಗಳಿಸಿ ವಿಶ್ವ ಕಪ್‌ ಅರ್ಹತಾ ಟೂರ್ನಿಯ ಸೂಪರ್‌ ಸಿಕ್ಸ್‌ನಲ್ಲಿ ಉತ್ತಮ ಆರಂಭ ಮಾಡಿತು. ಸೀನ್‌ ವಿಲಿಯಮ್ಸ್‌ (103 ಎಸೆತಗಳಲ್ಲಿ 142) ಟೂರ್ನಿಯಲ್ಲಿ ಮೂರನೇ ಶತಕ ದಾಖಲಿಸಿದರು. ಗುರುವಾರ ನಡೆದ ಪಂದ್ಯದಲ್ಲಿ ಜಿಂಬಾಬ್ವೆ 50 ಓವರುಗಳಲ್ಲಿ 7 ವಿಕೆಟ್‌ಗೆ 332 ರನ್‌ ಗಳಿಸಿತು. ಈ ಮೊತ್ತ ಬೆನ್ನಟ್ಟಿದ ಒಮಾನ್‌ ಹೋರಾಟ ತೋರಿದರೂ 9 ವಿಕೆಟ್‌ಗೆ 318 ರನ್‌ ಗಳಿಸಿ ಸ್ವಲ್ಪದರಲ್ಲೇ ಹಿಂದೆಬಿದ್ದಿತು. ಆರಂಭ ಆಟಗಾರ ಕಶ್ಯಪ ಪ್ರಜಾಪತಿ 97 ಎಸೆತಗಳಲ್ಲಿ 103 ರನ್‌ ಹೊಡೆದು ದಿಟ್ಟ ಪ್ರತಿರೋಧ ತೋರಿದರು. ಲೀಗ್‌ ಹಂತದಲ್ಲಿ ವೆಸ್ಟ್‌ ಇಂಡೀಸ್ ಮತ್ತು ನೆದರ್ಲೆಂಡ್ಸ್‌ ಮೇಲೆ ಜಯಗಳಿಸಿದ್ದ ಜಿಂಬಾಬ್ವೆ ಈಗ ಲೀಗ್‌ ಪಾಯಿಂಟ್‌ ಪಟ್ಟಿಯಲ್ಲಿ ಮೇಲಕ್ಕೇರಿದೆ. ಜಿಂಬಾಬ್ವೆ ಭಾನುವಾರ ನಡೆಯುವ ಪಂದ್ಯದಲ್ಲಿ ಶ್ರೀಲಂಕಾ ತಂಡವನ್ನು ಎದುರಿಸಲಿದೆ. ಮರುದಿನ ಒಮಾನ್‌ ತಂಡ, ದಿ ನೆದರ್ಲೆಂಡ್ಸ್ ವಿರುದ್ಧ ಆಡಲಿದೆ. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.