: ಹಿಟ್‌ಮ್ಯಾನ್ ಶತಕದ ಅಬ್ಬರ; ದಾಖಲೆಗಳ ಪಟ್ಟಿ ನವದೆಹಲಿ: ನಾಯಕ ರೋಹಿತ್ ಶರ್ಮಾ ಸಿಡಿಲಬ್ಬರದ ಶತಕದ ಬೆಂಬಲದೊಂದಿಗೆ ಭಾರತ ತಂಡವು ಅಫ್ಗಾನಿಸ್ತಾನ ವಿರುದ್ಧ ನಡೆದ ಏಕದಿನ ವಿಶ್ವಕಪ್ ಪಂದ್ಯದಲ್ಲಿ ಎಂಟು ವಿಕೆಟ್ ಅಂತರದ ಭರ್ಜರಿ ಗೆಲುವು ದಾಖಲಿಸಿತು. 272 ರನ್‌ಗಳ ಗುರಿ ಬೆನ್ನಟ್ಟಿದ ಭಾರತ 35 ಓವರ್‌ಗಳಲ್ಲಿ 2 ವಿಕೆಟ್‌ ನಷ್ಟಕ್ಕೆ ಗುರಿ ತಲುಪಿತು. ರೋಹಿತ್ ಶರ್ಮಾ 131, ವಿರಾಟ್ ಕೊಹ್ಲಿ ಔಟಾಗದೆ 55 ಮತ್ತು ಇಶಾನ್ ಕಿಶನ್ 47 ರನ್ ಗಳಿಸಿ ಮಿಂಚಿದರು. ಈ ಪಂದ್ಯದಲ್ಲಿ ರೋಹಿತ್ ಶರ್ಮಾ ಅನೇಕ ದಾಖಲೆಗಳನ್ನು ಬರೆದಿದ್ದಾರೆ. ಈ ಕುರಿತು ಪಟ್ಟಿ ಇಲ್ಲಿದೆ. ಏಕದಿನ ವಿಶ್ವಕಪ್‌ನಲ್ಲಿ ಅತಿ ಹೆಚ್ಚು ಶತಕ... ಇದು ಏಕದಿನ ವಿಶ್ವಕಪ್ ಕ್ರಿಕೆಟ್‌ನಲ್ಲಿ ರೋಹಿತ್ ಶರ್ಮಾ ಅವರ ಏಳನೇ ಶತಕ ಸಾಧನೆಯಾಗಿದೆ. ಈ ಮೂಲಕ ಸಚಿನ್ ದಾಖಲೆ ಮುರಿದಿರುವ ರೋಹಿತ್, ಏಕದಿನ ವಿಶ್ವಕಪ್‌ನಲ್ಲಿ ಅತಿ ಹೆಚ್ಚು ಶತಕ ಗಳಿಸಿದ ದಾಖಲೆಯನ್ನು ತಮ್ಮದಾಗಿಸಿಕೊಂಡರು. ರೋಹಿತ್ ಶರ್ಮಾ: 7 ಸಚಿನ್ ತೆಂಡೂಲ್ಕರ್: 6 ಕುಮಾರ ಸಂಗಕ್ಕರ: 5 ರಿಕಿ ಪಾಂಟಿಂಗ್: 5 63 ಎಸೆತಗಳಲ್ಲಿ ಶತಕ... ರೋಹಿತ್ ಶರ್ಮಾ 63 ಎಸೆತಗಳಲ್ಲಿ ಶತಕ ಸಾಧನೆ ಮಾಡಿದರು. ಈ ಮೂಲಕ ಏಕದಿನ ವಿಶ್ವಕಪ್‌ನಲ್ಲಿ ಅತಿ ವೇಗದ ಶತಕ ಗಳಿಸಿದ ಭಾರತೀಯ ಬ್ಯಾಟರ್ ಎನಿಸಿದರು. ರೋಹಿತ್ ಶರ್ಮಾ (ಪಿಟಿಐ ಚಿತ್ರ) 556 ಸಿಕ್ಸರ್... ಈ ಪಂದ್ಯದಲ್ಲಿ ಐದು ಸಿಕ್ಸರ್ ಸಿಡಿಸಿರುವ ರೋಹಿತ್, ಎಲ್ಲ ಮೂರು ಮಾದರಿಗಳ ಅಂತರರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಅತಿ ಹೆಚ್ಚು ಸಿಕ್ಸರ್ ಗಳಿಸಿದ ದಾಖಲೆಗೆ ಭಾಜನರಾದರು. ರೋಹಿತ್ ಒಟ್ಟು 556 ಸಿಕ್ಸರ್ ದಾಖಲಿಸಿದರು. ಇದರೊಂದಿಗೆ ಕ್ರಿಸ್ ಗೇಲ್ (553) ದಾಖಲೆ ಮುರಿದರು. ರೋಹಿತ್ ಶರ್ಮಾ: 556 ಕ್ರಿಸ್ ಗೇಲ್: 553 ಶಾಹೀದ್ ಅಫ್ರಿದಿ: 476 ಬ್ರೆಂಡಮ್ ಮೆಕಲಮ್: 398 ಮಾರ್ಟಿನ್ ಗುಪ್ಟಿಲ್: 383 31ನೇ ಶತಕ... ಈ ಮೂಲಕ ಏಕದಿನ ಕ್ರಿಕೆಟ್‌ನಲ್ಲಿ ರೋಹಿತ್ ಶರ್ಮಾ 31ನೇ ಶತಕ ಸಾಧನೆ ಮಾಡಿದರು. ಈ ಮೂಲಕ ಆಸ್ಟ್ರೇಲಿಯಾದ ಮಾಜಿ ನಾಯಕ ರಿಕಿ ಪಾಂಟಿಂಗ್ ದಾಖಲೆಯನ್ನು ಮುರಿದರು. ಅಲ್ಲದೆ ಏಕದಿನದಲ್ಲಿ ಅತಿ ಹೆಚ್ಚು ಶತಕ ಗಳಿಸಿದ ಬ್ಯಾಟರ್‌ಗಳ ಪಟ್ಟಿಯಲ್ಲಿ ಸಚಿನ್ ಹಾಗೂ ಕೊಹ್ಲಿ ನಂತರದ ಸ್ಥಾನದಲ್ಲಿ ಗುರುತಿಸಿಕೊಂಡಿದ್ದಾರೆ. ಸಚಿನ್ ತೆಂಡೂಲ್ಕರ್: 49 ವಿರಾಟ್ ಕೊಹ್ಲಿ: 47 ರೋಹಿತ್ ಶರ್ಮಾ: 31 ರಿಕಿ ಪಾಂಟಿಂಗ್: 30 ಸಹಸ್ರ ರನ್ ಸಾಧನೆ... ಇದರೊಂದಿಗೆ ಏಕದಿನ ವಿಶ್ವಕಪ್‌ನಲ್ಲಿ ಸಾವಿರ ರನ್ ಗಳಿಸಿದ ಎಲೈಟ್ ಆಟಗಾರರ ಪಟ್ಟಿಗೆ ರೋಹಿತ್ ಸೇರ್ಪಡೆಗೊಂಡರು. ಸಚಿನ್ ತೆಂಡೂಲ್ಕರ್: 2,278 ವಿರಾಟ್ ಕೊಹ್ಲಿ: 1,115 ರೋಹಿತ್ ಶರ್ಮಾ: 1,009 ಸೌರವ್ ಗಂಗೂಲಿ: 1,006 ಏಕದಿನ ವಿಶ್ವಕಪ್: ಕಡಿಮೆ ಇನಿಂಗ್ಸ್‌ನಲ್ಲಿ 1000 ರನ್: ಡೇವಿಡ್ ವಾರ್ನರ್: 19 ರೋಹಿತ್ ಶರ್ಮಾ: 19 ಸಚಿನ್ ತೆಂಡೂಲ್ಕರ್: 20 ಎಬಿಡಿ ವಿಲಿಯರ್ಸ್: 20 ವಿವಿಯನ್ ರಿಚರ್ಡ್ಸ್: 21 ಸೌರವ್ ಗಂಗೂಲಿ: 21 ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.