ಬಾಂಗ್ಲಾ ತಂಡಕ್ಕೆ ಲಿಟನ್‌ ದಾಸ್‌ ನಾಯಕ ಚಿತ್ತಗಾಂಗ್, ಬಾಂಗ್ಲಾದೇಶ (ಎಎಫ್‌ಪಿ): ಅಫ್ಗಾನಿಸ್ತಾನ ವಿರುದ್ಧದ ಏಕದಿನ ಕ್ರಿಕೆಟ್‌ ಸರಣಿಯ ಇನ್ನುಳಿದ ಎರಡು ಪಂದ್ಯಗಳಲ್ಲಿ ಬಾಂಗ್ಲಾದೇಶ ತಂಡವನ್ನು ಲಿಟನ್‌ ದಾಸ್‌ ಮುನ್ನಡೆಸಲಿದ್ದಾರೆ. ಸರಣಿಯ ಮೊದಲ ಪಂದ್ಯದಲ್ಲಿ ತಂಡವನ್ನು ಮುನ್ನಡೆಸಿದ್ದ ತಮೀಮ್‌ ಇಕ್ಬಾಲ್‌ ಅವರು ಗುರುವಾರ ದಿಢೀರ್‌ ನಿವೃತ್ತಿ ಪ್ರಕಟಿಸಿದ್ದರು. ಇದರಿಂದ ನಾಯಕತ್ವದ ಜವಾಬ್ದಾರಿ ಲಿಟನ್‌ಗೆ ದೊರೆತಿದೆ. ಮೊದಲ ಪಂದ್ಯದಲ್ಲಿ ಬಾಂಗ್ಲಾದೇಶ 17 ರನ್‌ಗಳಿಂದ ಸೋತಿತ್ತು. ಶನಿವಾರ ನಡೆಯುವ ಎರಡನೇ ಪಂದ್ಯ ಗೆದ್ದು ಸರಣಿ ಸಮಬಲ ಮಾಡುವುದು ತಂಡದ ಗುರಿ ಎಂದು ಲಿಟನ್‌ ತಿಳಿಸಿದರು. ತಮೀಮ್‌ ಕೈಗೊಂಡ ನಿರ್ಧಾರ ಅಚ್ಚರಿ ಉಂಟುಮಾಡಿದೆ ಎಂದೂ ಅವರು ಹೇಳಿದರು. ‘ಅವರಿಂದ ಅಂತಹ ನಿರ್ಧಾರ ಬರಬಹುದು ಎಂದು ಯಾರೂ ಊಹಿಸಿರಲಿಲ್ಲ. ಹಲವು ವರ್ಷಗಳಿಂದ ಅವರು ತಂಡಕ್ಕಾಗಿ ಆಡಿದ್ದಾರೆ. ನಾನು ಹಾಗೂ ತಂಡದ ಸಹ ಆಟಗಾರರು ಅವರ ನಿರ್ಧಾರವನ್ನು ಗೌರವಿಸುತ್ತೇವೆ’ ಎಂದಿದ್ದಾರೆ. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.