ಕ್ರಿಕೆಟ್‌: ಬೆಂಗಳೂರು ಸ್ಪೋರ್ಟ್ಸ್ ಕ್ಲಬ್‌ಗೆ ಜಯ ಬೆಂಗಳೂರು: ಎನ್.ಎಸ್. ಶೌರ್ಯ (94) ಮತ್ತು ಸುಜಯ್ ಭೂಷಣ್‌ ಪಾಟೀಲ (69) ಅವರ ಅರ್ಧಶತಕಗಳ ನೆರವಿನಿಂದ ಬೆಂಗಳೂರು ಸ್ಪೋರ್ಟ್ಸ್ ಕ್ಲಬ್ ತಂಡವು ಕೆಎಸ್‌ಸಿಎ ಗುಂಪು ಒಂದು 1,2,3 ವಿಭಾಗಗಳ 16 ವರ್ಷದೊಳಗಿನವರ ಅಂತರ ಕ್ಲಬ್‌ ಕ್ರಿಕೆಟ್‌ ಟೂರ್ನಿಯಲ್ಲಿ ವಿಶ್ವೇಶ್ವರಪುರಂ ಕ್ರಿಕೆಟ್ ಕ್ಲಬ್ ತಂಡವನ್ನು 258 ರನ್‌ಗಳಿಂದ ಮಣಿಸಿತು. ಮೊದಲು ಬ್ಯಾಟಿಂಗ್‌ ಮಾಡಿದ ಬೆಂಗಳೂರು ಸ್ಪೋರ್ಟ್‌ ಕ್ಲಬ್‌ 50 ಓವರ್‌ಗಳಲ್ಲಿ 9 ವಿಕೆಟ್‌ಗೆ 325 ರನ್‌ ಪೇರಿಸಿತು. ಈ ಗುರಿಯನ್ನು ಬೆನ್ನತ್ತಿದ ವಿಶ್ವೇಶ್ವರಪುರಂ ಕ್ಲಬ್ 19.4 ಓವರ್‌ಗಳಲ್ಲಿ 64 ರನ್‌ಗಳಿಗೆ ಕುಸಿಯಿತು. ಬೆಂಗಳೂರು ಸ್ಪೋರ್ಟ್‌ ಕ್ಲಬ್‌ನ ಎಸ್‌.ಜೆ. ಆದರ್ಶ್‌ 13ಕ್ಕೆ 5, ವಿಜಯ್‌ ಮಲ್ಲರ್‌ 12ಕ್ಕೆ 3 ವಿಕೆಟ್‌ ಪಡೆದು ಮಿಂಚಿದರು. ಸಂಕ್ಷಿಪ್ತ ಸ್ಕೋರ್‌: ಬೆಂಗಳೂರು ಸ್ಪೋರ್ಟ್ಸ್ ಕ್ಲಬ್: 50 ಓವರ್‌ಗಳಲ್ಲಿ 9 ವಿಕೆಟ್‌ಗೆ 325 (ಸುಜಯ್ ಭೂಷಣ್ ಪಾಟೀಲ್ 69, ಎನ್.ಎಸ್. ಶೌರ್ಯ 94, ಆರುಷ್ ಜೈನ್ 42; ಸೂರಜ್ ಶೆಟ್ಟಿ 45ಕ್ಕೆ 2, ಪ್ರದೀಪ್ ಹಿರೇಮಠ 51ಕ್ಕೆ 3, ಎಚ್‌.ಎಸ್‌. ಸಂಚಿತ್ 38ಕ್ಕೆ 2); ವಿಶ್ವೇಶ್ವರಪುರಂ ಕ್ರಿಕೆಟ್ ಕ್ಲಬ್: 19.4 ಓವರ್‌ಗಳಲ್ಲಿ 67 (ವಿಜಯ್ ಮಲ್ಲರ್ 12ಕ್ಕೆ 3, ಎಸ್‌.ಜೆ. ಆದರ್ಶ್ 13ಕ್ಕೆ 5) ಸರ್ ಸೈಯದ್ ಕ್ರಿಕೆಟರ್ಸ್: 49.2 ಓವರ್‌ಗಳಲ್ಲಿ 154 (ಎನ್‌.ಪಿ. ವಿವೇಕ್ 28, ಕೃಷ್ಣ ವಿ. ರಾವ್ 53; ಆರ್ಯನ್ ಮನುಜ್ 41ಕ್ಕೆ 2, ಎ.ಸಿ. ರವಿಚಂದ್ರ ತೇಜಸ್ವಿ 25ಕ್ಕೆ 2, ಬಿ.ಆರ್‌. ರತನ್ 18ಕ್ಕೆ 3); ಯಂಗ್ ಲಯನ್ಸ್ ಕ್ಲಬ್: 30 ಓವರ್‌ಗಳಲ್ಲಿ 4 ವಿಕೆಟ್‌ಗೆ 157 (ವೆಂಕಟ್ ಸಾಯಿ 73; ಗೌರವ್ ವೆಂಕಟೇಶ್ 29ಕ್ಕೆ 2) ಫಲಿತಾಂಶ: ಯಂಗ್ ಲಯನ್ಸ್ ಕ್ಲಬ್‌ಗೆ 6 ವಿಕೆಟ್‌ಗಳ ಜಯ ಸ್ವಸ್ತಿಕ್ ಯೂನಿಯನ್ ಕ್ರಿಕೆಟ್ ಕ್ಲಬ್: 50 ಓವರ್‌ಗಳಲ್ಲಿ 5 ವಿಕೆಟ್‌ಗೆ 281 (ತಲ್ಹಾ ಶರೀಫ್ 99, ಆರ್‌. ಶಿವ 69, ಕೆ. ಅಖಿಲ್ 36, ಪ್ರಣೀತ್ ಸಾಯಿ ಪ್ರಶಾಂತ್ 47ಕ್ಕೆ 2); ಭಾರತ್ ಕ್ರಿಕೆಟ್ ಕ್ಲಬ್: 41.5 ಓವರ್‌ಗಳಲ್ಲಿ 101 (ಆದ್ರಿತ್ 34, ಅವನೀಶ್ ಪೂಣಚ್ಚ 18ಕ್ಕೆ 2, ಜೆ. ಸುಕೃತ್ 20ಕ್ಕೆ 4, ಬಿ.ಯು. ಆಯುಷ್ ಪೊನ್ನಪ್ಪ 17ಕ್ಕೆ 2) ಫಲಿತಾಂಶ: ಸ್ವಸ್ತಿಕ್ ಯೂನಿಯನ್ ಕ್ರಿಕೆಟ್ ಕ್ಲಬ್‌ಗೆ 180 ರನ್‌ಗಳ ಜಯ ಫ್ರೆಂಡ್ಸ್ ಯೂನಿಯನ್ ಕ್ರಿಕೆಟ್ ಕ್ಲಬ್ (2): 41.5 ಓವರ್‌ಗಳಲ್ಲಿ 165 (ಎಚ್‌. ಚಿರಾಗ್ 30, ಸುಜಯ್ 43, ಡಿ.ಆರ್. ಮಣಿಕಂಠ ಯಾದವ್ 40ಕ್ಕೆ 2, ಅದಿತ್ ರಾಮ್ ಬಾಲಸುಬ್ರಮಣ್ಯಂ 41ಕ್ಕೆ 2, ಎ.ಟಿ. ದೀಕ್ಷಿತ್ 35ಕ್ಕೆ 5); ಸೆಂಚುರಿ ಕ್ರಿಕೆಟರ್ಸ್: 39 ಓವರ್‌ಗಳಲ್ಲಿ 8 ವಿಕೆಟ್‌ಗೆ 166 (ಸಿದ್ಧಾಂತ್ ಸ್ಮರಣ್ 43, ಕರಣ್ ಸಿಂಗ್ 43, ಸಾಯಿನಾಥ್ ರಾಜೋಲಿ 46ಕ್ಕೆ 4, ಆರ್.ಪ್ರಸಾದ್ ಕುಮಾರ್ 23ಕ್ಕೆ 3) ಫಲಿತಾಂಶ: ಸೆಂಚುರಿ ಕ್ರಿಕೆಟರ್ಸ್ ತಂಡಕ್ಕೆ 2 ವಿಕೆಟ್‌ಗಳ ಜಯ ಸಫೈರ್ ಕ್ರಿಕೆಟ್ ಕ್ಲಬ್: 45.5 ಓವರ್‌ಗಳಲ್ಲಿ 154 (ಎಸ್‌. ರಾಹುಲ್ 52, ಪ್ರೀಸ್ಲಿ ಶಾನ್ ಪೀಟರ್ಸ್ 49, ಎಸ್‌. ಸಂದೇಶ್ 21ಕ್ಕೆ 2, ಜಯಂತ್ ಆರ್. ಗೌಡ 27ಕ್ಕೆ 2, ಇಶಾನ್ ಪಿ. ಬಾಗ್ಲೋಡಿ 21ಕ್ಕೆ 2): ರಾಜಾಜಿನಗರ ಕ್ರಿಕೆಟರ್ಸ್: 30.1 ಓವರ್‌ಗಳಲ್ಲಿ 2 ವಿಕೆಟ್‌ಗೆ 158 (ಬಿಲಾಲ್ ಮುಹಮ್ಮದ್ ಬಶೀರ್ 71, ನಿತೀಶ್ ಆರ್ಯ: ಫಲಿತಾಂಶ: ರಾಜಾಜಿನಗರ ಕ್ರಿಕೆಟರ್ಸ್ ತಂಡಕ್ಕೆ 8 ವಿಕೆಟ್‌ಗಳ ಜಯ ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.