ಐಸಿಸಿ: ಬಜ್ವಾ, ಉಸ್ಮಾನಿ ಪುನರಾಯ್ಕೆ ಡರ್ಬನ್: ಕ್ರಿಕೆಟ್ ಕೆನಡಾದ ರಷ್‌ಪಾಲ್ ಬಜ್ವಾ ಮತ್ತು ಎಮಿರೇಟ್ಸ್‌ ಕ್ರಿಕೆಟ್ ಮಂಡಳಿಯ ಮುಬಾಶಿರ್ ಉಸ್ಮಾನಿ ಅವರನ್ನು ಅಂತರರಾಷ್ಟ್ರೀಯ ಕ್ರಿಕೆಟ್ ಕೌನ್ಸಿಲ್‌ ಸಹಸದಸ್ಯ ಪ್ರತಿನಿಧಿಗಳನ್ನಾಗಿ ಮರು ಆಯ್ಕೆ ಮಾಡಲಾಗಿದೆ ಸೋಮವಾರ ನಡೆದ ಐಸಿಸಿ ವಾರ್ಷಿಕ ಸಮ್ಮೇಳನದಲ್ಲಿ ಆಯೋಜಿಸಲಾಗಿದ್ದ ಮುಖ್ಯ ಕಾರ್ಯನಿರ್ವಾಹಕರ ಸಮಿತಿ (ಸಿಇಸಿ) ಸಭೆಯಲ್ಲಿ ಇಬ್ಬರ ಪುನರಾಯ್ಕೆಗೆ ಮತದಾನ ನಡೆಯಿತು. ಬಜ್ವಾ ಮತ್ತು ಉಸ್ಮಾನಿ ಅವರು ಮುಂದಿನ ಎರಡು ವರ್ಷ ಕಾರ್ಯನಿರ್ವಹಿಸುವರು. ಡ್ಯಾನಿಷ್ ಕ್ರಿಕೆಟ್ ಸಂಸ್ಥೆಯ ಉಮೇರ್ ಭಟ್ ಅವರು ಮೊದಲ ಬಾರಿಗೆ ಆಯ್ಕೆಯಾದರು. ಈ ಮೂವರು ಅಭ್ಯರ್ಥಿಗಳೂ ಅತಿ ಹೆಚ್ಚು ಮತಗಳನ್ನು ಗಳಿಸಿದರು. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.