ಭಾರತ ಟೆಸ್ಟ್ ಕ್ರಿಕೆಟ್ ತಂಡದ ನೂತನ ಸಮವಸ್ತ್ರ ಅನಾವರಣ; ಅಭಿಮಾನಿಗಳ ಆಕ್ರೋಶ ಬೆಂಗಳೂರು: ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿಯು (ಬಿಸಿಸಿಐ) ಭಾರತ ಟೆಸ್ಟ್ ಕ್ರಿಕೆಟ್ ತಂಡದ ನೂತನ ಸಮವಸ್ತ್ರ ಅನಾವರಣಗೊಳಿಸಿದೆ. ಮತ್ತೊಂದೆಡೆ ಟೀಮ್ ಇಂಡಿಯಾದ ನೂತನ ಸಮವಸ್ತ್ರದ ಬಗ್ಗೆ ಅಭಿಮಾನಿಗಳು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಈ ಕುರಿತು ಸಾಮಾಜಿಕ ಮಾಧ್ಯಮಗಳಲ್ಲಿ ವ್ಯಾಪಕ ಆಕ್ರೋಶ ವ್ಯಕ್ತವಾಗಿದೆ. 💡 📸 ⏳ #' - 😎# ../YVbbLAE5Ea ಭಾರತ ಎಲ್ಲಿ? ಇತ್ತೀಚೆಗೆ ನಡೆದ ಐಸಿಸಿ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಫೈನಲ್ ಪಂದ್ಯದಲ್ಲಿ ಭಾರತೀಯ ಆಟಗಾರರು ಧರಿಸಿದ್ದ ಸಮವಸ್ತ್ರದಲ್ಲಿ ಎದೆಯ ಭಾಗದಲ್ಲಿ 'ಇಂಡಿಯಾ' ಎಂಬ ಪದ ಎದ್ದು ಕಾಣಿಸುತ್ತಿತ್ತು. ಆದರೆ ಈಗ ಬಿಡುಗಡೆ ಮಾಡಿರುವ ಹೊಸ ಸಮವಸ್ತ್ರದಲ್ಲಿ ಭಾರತ ಪದವನ್ನು ಕಿತ್ತೊಗೆಯಲಾಗಿದೆ. ಆ ಜಾಗದಲ್ಲಿ ಮುಖ್ಯ ಪ್ರಾಯೋಜಕರಾದ 'ಡ್ರೀಮ್ 11' ಜೋಡಣೆ ಮಾಡಲಾಗಿದೆ. @ ' @Dream11' . ' . , !! ⬇️ ⬇️ ../DmlTBKc6dX ಇದು ಅಭಿಮಾನಿಗಳ ಆಕ್ರೋಶಕ್ಕೆ ಕಾರಣವಾಗಿದೆ. ದುಡ್ಡಿಗಾಗಿ ಭಾರತವನ್ನೇ ಮಾರಾಟ ಮಾಡಲಾಗಿದೆ ಎಂದು ಅಭಿಮಾನಿಗಳು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಇನ್ನು ಹೊಸ ಸಮವಸ್ತ್ರದ ಒಟ್ಟಾರೆ ನೋಟದ ಬಗ್ಗೆಯೂ ಅಭಿಮಾನಿಗಳು ಬೇಸರ ತೋಡಿಕೊಂಡಿದ್ದಾರೆ. ಇದು ಶಾಲೆಯ ಯೂನಿಫಾರ್ಮ್ ಎಂದು ಇನ್ನು ಕೆಲವರು ಕಾಮೆಂಟ್ ಮಾಡಿದ್ದಾರೆ. 5 . ../cZX1lmS7lq . 11 . ../ 🥹 ../dacx0XRBHC Dream11 ? ' Dream11 🤣 ../ 🔥 ://./M0AvFJ4p4i ../ Dream11 , . . , . . ' . ://./feR030WVFk ? 11 ' '' . ../VZSDewoNe3 ! !@ @ @ @Dream11 # # #Dream11 # ../ ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.