ಚಿನ್ನ ಗೆದ್ದು ರಾಷ್ಟ್ರಗೀತೆ ಆಲಿಸುವೆ: ಋತುರಾಜ್ ಗಾಯಕವಾಡ ರೂಸೊ, ಡಾಮಿನಿಕಾ: ‘ಏಷ್ಯನ್ ಕ್ರೀಡಾಕೂಟದಲ್ಲಿ ಚಿನ್ನ ಗೆದ್ದು, ರಾಷ್ಟ್ರಗೀತೆ ಮೊಳಗುವುದನ್ನು ಆಲಿಸುವ ಗುರಿ ಇದೆ‘ ಎಂದು ಕ್ರಿಕೆಟಿಗ ಋತುರಾಜ್ ಗಾಯಕವಾಡ್ ಹೇಳಿದ್ದಾರೆ. ಇದೇ ವರ್ಷ ಚೀನಾದಲ್ಲಿ ನಡೆಯಲಿರುವ ಏಷ್ಯನ್ ಕ್ರೀಡಾಕೂಟದಲ್ಲಿ ನಡೆಯಲಿರುವ ಕ್ರಿಕೆಟ್‌ ನಲ್ಲಿ ಆಡಲಿರುವ ಭಾರತ ತಂಡವನ್ನು ಋತುರಾಜ್ ಮುನ್ನಡೆಸುವರು. ಏಷ್ಯನ್ ಕ್ರೀಡಾಕೂಟವು ಚೀನಾದಲ್ಲಿ ಸೆಪ್ಟೆಂಬರ್‌ 28ರಿಂದ ಅಕ್ಟೋಬರ್ 8ರವರೆಗೆ ನಡೆಯಲಿದೆ. ಅದೇ ಹೊತ್ತಿಗೆ ಭಾರತದಲ್ಲಿ ಏಕದಿನ ಕ್ರಿಕೆಟ್ ವಿಶ್ವಕಪ್ ಕೂಡ ಆರಂಭವಾಗಲಿದೆ. ಆದ್ದರಿಂದ ಯುವ ಆಟಗಾರರ ತಂಡವನ್ನು ಆಯ್ಕೆ ಮಾಡಲಾಗಿದೆ. ಇದರಲ್ಲಿ ಬಹುತೇಕ ಯುವ ಆಟಗಾರರು ಇದ್ದಾರೆ. ‘ಈ ಅವಕಾಶವು ಬಹಳ ವಿಶೇಷವಾಗಿದೆ. ಉತ್ತಮ ಸಾಧನೆ ಮಾಡಿ ಇಡೀ ದೇಶವೇ ಹೆಮ್ಮೆಪಡುವುದೇ ಗುರಿ‘ ಎಂದರು. ‘ಬಾಲ್ಯದಿಂದಲೂ ಟಿ.ವಿಯಲ್ಲಿ ಪ್ರಸಾರವಾಗುತ್ತಿದ್ದ ಏಷ್ಯನ್ ಗೇಮ್ಸ್‌ ನೋಡುತ್ತ ಬೆಳೆದಿದ್ದೇವೆ. ಅಥ್ಲೀಟ್‌ಗಳು ದೇಶಕ್ಕಾಗಿ ಪದಕ ಗೆದ್ದು ಬೀಗುವುದನ್ನು ಕಣ್ತುಂಬಿಕೊಂಡಿದ್ದೇವೆ. ಇದೀಗ ನಾವು ಕೂಡ ದೇಶಕ್ಕೆ ಪದಕ ಗೆದ್ದುಕೊಡುವ ಅವಕಾಶ ಒದಗಿಬಂದಿದೆ‘ ಎಂದು ಸಂತಸ ವ್ಯಕ್ತಪಡಿಸಿದರು. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.