ಆರ್‌. ಅಶ್ವಿನ್‌ ‘ಶ್ರೇಷ್ಠ ಮ್ಯಾಚ್‌ವಿನ್ನರ್‌’: ಪಾರಸ್‌ ಮಾಂಬ್ರೆ ರೂಸೊ: ‘ಆರ್‌.ಅಶ್ವಿನ್‌ ಅವರು ಭಾರತದ ಶ್ರೇಷ್ಠ ಮ್ಯಾಚ್‌ವಿನ್ನರ್‌ಗಳಲ್ಲಿ ಒಬ್ಬರು’ ಎಂದು ಭಾರತ ತಂಡ ಬೌಲಿಂಗ್ ಕೋಚ್‌ ಪಾರಸ್‌ ಮಾಂಬ್ರೆ ಶ್ಲಾಘಿಸಿದ್ದಾರೆ. ‘ಮೊದಲ ಇನಿಂಗ್ಸ್‌ನಲ್ಲಿ ದೊಡ್ಡ ಮೊತ್ತ ಗಳಿಸುವುದು ಮುಖ್ಯವಾಗಿತ್ತು. ಅದರಲ್ಲಿ ನಾವು ಯಶಸ್ವಿಯಾದೆವು. ಇದರಿಂದ ಬೌಲರ್‌ಗಳು ಒತ್ತಡವಿಲ್ಲದೆ ತಮ್ಮ ಯೋಜನೆಗಳನ್ನು ಕಾರ್ಯರೂಪಕ್ಕಿಳಿಸಿದರು’ ಎಂದು ಪಂದ್ಯದ ಬಳಿಕ ಪ್ರತಿಕ್ರಿಯಿಸಿದರು. ‘ತಂಡಕ್ಕೆ ಹಲವು ಪಂದ್ಯಗಳಲ್ಲಿ ಗೆಲುವು ತಂದುಕೊಟ್ಟಿರುವ ಅಶ್ವಿನ್‌, ಶ್ರೇಷ್ಠ ಮ್ಯಾಚ್‌ವಿನ್ನರ್‌ಗಳಲ್ಲಿ ಒಬ್ಬರು ಎಂಬುದು ನನ್ನ ಅಭಿಪ್ರಾಯ. ಅವರು ಪ್ರದರ್ಶನದಲ್ಲಿ ಸ್ಥಿರತೆ ಕಾಪಾಡಿಕೊಂಡಿದ್ದಾರೆ’ ಎಂದರು. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.