ಧಾರ್ಮಿಕ ಕಾರಣಕ್ಕೆ ಕ್ರಿಕೆಟ್‌ಗೆ ಪಾಕ್ ಆಟಗಾರ್ತಿ ವಿದಾಯ ಕರಾಚಿ: ಪಾಕಿಸ್ತಾನದ ಉದಯೋನ್ಮುಖ ಪ್ರತಿಭೆ ಆಯೇಷಾ ನಸೀಂ ಅವರು ಅಂತರರಾಷ್ಟ್ರೀಯ ಕ್ರಿಕೆಟಿಗೆ ವಿದಾಯ ಹೇಳಿದ್ದಾರೆ. ಪಾಕಿಸ್ತಾನದ ಮಾಜಿ ಕ್ರಿಕೆಟಿಗ ವಾಸಿಂ ಅಕ್ರಮ್ ಅವರಿಂದ ‘ಉತ್ತಮ ಪ್ರತಿಭೆ’ ಕರೆಸಿಕೊಂಡಿದ್ದ ಅವರು ತನ್ನ 18ನೇ ವಯಸ್ಸಿನಲ್ಲೇ ಧಾರ್ಮಿಕ ಕಾರಣಕ್ಕಾಗಿ ವಿದಾಯದ ನಿರ್ಧಾರ ತೆಗೆದುಕೊಂಡಿದ್ದಾರೆ. ತಮ್ಮ ನಿವೃತ್ತಿ ವಿಚಾರವಾಗಿ ಈಗಾಗಲೇ ಅವರು ಪಾಕಿಸ್ತಾನ ಕ್ರಿಕೆಟ್ ಮಂಡಳಿ (ಪಿಸಿಬಿ)ಯನ್ನು ಸಂಪರ್ಕಿಸಿದ್ದಾರೆ. ಪಾಕ್‌ನ ವನಿತೆಯರ ತಂಡದ ನಾಯಕಿ ನಿದಾ ದಾರ್ ಮತ್ತು ಪಿಸಿಬಿಯವರು ಮನವೊಲಿಸಲು ಪ್ರಯತ್ನಿಸಿದ್ದು, ಆದರೆ, ತನ್ನ ನಿರ್ಧಾರವನ್ನು ಮರುಚಿಂತನೆ ಮಾಡಲು ಅವರು ನಿರಾಕರಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ. 15ನೇ ವಯಸ್ಸಿನಲ್ಲಿ ಆಯೇಷಾ 2020ರ ಐಸಿಸಿ ಮಹಿಳಾ ಟಿ20 ವಿಶ್ವಕಪ್‌ ಟೂರ್ನಿಗೆ ಪಾಕಿಸ್ತಾನದ ತಂಡಕ್ಕೆ ಆಯ್ಕೆಯಾಗಿದ್ದರು. ಒಟ್ಟು 33 ಟಿ20 ಪಂದ್ಯಗಳನ್ನಾಡಿರುವ ಅವರು 369 ರನ್ ಗಳಿಸಿದ್ದಾರೆ. ನಾಲ್ಕು ಏಕದಿನ ಪಂದ್ಯಗಳನ್ನು ಆಡಿದ್ದಾರೆ. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.