ಭಾರತೀಯ ಸಂಪ್ರದಾಯದಂತೆ ಹೆಂಡತಿಗೆ ಸೀಮಂತ ನೆರವೇರಿಸಿದ ಕ್ರಿಕೆಟರ್ ಮ್ಯಾಕ್ಸ್‌ವೆಲ್ ಬೆಂಗಳೂರು: ಆಸ್ಟ್ರೇಲಿಯಾ ಕ್ರಿಕೆಟರ್ ಹಾಗೂ ಐಪಿಎಲ್ ಸ್ಟಾರ್ ಆಟಗಾರ ಗ್ಲೆನ್ ಮ್ಯಾಕ್ಸ್‌ವೆಲ್ ಅವರು ಕಳೆದ ವರ್ಷ ತಮಿಳುನಾಡಿನ ವಿನಿ ರಾಮನ್ ಅವರನ್ನು ಮದುವೆಯಾಗಿದ್ದರು. ಈಗ ಈ ದಂಪತಿ ಮೊದಲ ಮಗುವಿನ ಆಗಮನದ ನಿರೀಕ್ಷೆಯಲ್ಲಿದೆ. ವಿಶೇಷವೆಂದರೆ ಮ್ಯಾಕ್ಸ್‌ವೆಲ್ ವಿನಿ ರಾಮನ್ ಅವರಿಗೆ ಭಾರತೀಯ ಸಂಪ್ರದಾಯದಂತೆ ಸೀಮಂತ ಕಾರ್ಯಕ್ರಮ ನೆರವೇರಿಸಿದ್ದಾರೆ. ಈ ಕುರಿತ ಫೋಟೊ ಮತ್ತು ವಿಡಿಯೊಗಳನ್ನುಅವರು ಸಾಮಾಜಿಕ ಜಾಲತಾಣಗಳ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ಆಸ್ಟ್ರೇಲಿಯಾದ ತಮ್ಮ ಮನೆಯಲ್ಲಿ ಮ್ಯಾಕ್ಸ್‌ವೆಲ್ ಅವರು ಹೆಂಡತಿಗೆ ಸೀಮಂತ ನೆರವೇರಿಸಿದ್ದಾರೆ. ಪ್ರೀತಿಯ ಉಡುಗೊರೆಗಳನ್ನು ನೀಡಿದ್ದಾರೆ. ಈ ವೇಳೆ ವಿನಿ ಕುಟುಂಬದವರು ಹಾಜರಿದ್ದರು. 2022 ರ ಮಾರ್ಚ್ 27 ರಂದು ಚೆನ್ನೈನಲ್ಲಿ ವಿನಿ ಅವರನ್ನು ಮ್ಯಾಕ್ಸ್‌ವೆಲ್ ವರಿಸಿದ್ದರು. (@.) ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.