ಸಲ್ಮಾನ್ ಶತಕ: ಪಾಕ್ ಬೃಹತ್ ಮುನ್ನಡೆ ಕೊಲಂಬೊ: ಆಘಾ ಸಲ್ಮಾನ್ ಅವರ ಸುಂದರ ಶತಕದ ಬಲದಿಂದ ಪಾಕಿಸ್ತಾನ ತಂಡವು ಇಲ್ಲಿ ಶ್ರೀಲಂಕಾ ಎದುರು ನಡೆಯುತ್ತಿರುವ ಟೆಸ್ಟ್ ಕ್ರಿಕೆಟ್ ಪಂದ್ಯದ ಮೊದಲ ಇನಿಂಗ್ಸ್‌ನಲ್ಲಿ ಬೃಹತ್ ಮುನ್ನಡೆ ಸಾಧಿಸಿದೆ. ಪಂದ್ಯದ ಮೂರನೇ ದಿನವಾದ ಬುಧವಾರ ಸಲ್ಮಾನ್ (ಬ್ಯಾಟಿಂಗ್ 132; 148ಎ, 4X15, 6X1) ಅವರ ಅಟದಿಂದ ತಂಡವು 132 ಓವರ್‌ಗಳಲ್ಲಿ 5 ವಿಕೆಟ್‌ಗಳಿಗೆ 563 ರನ್ ಗಳಿಸಿದೆ. ಒಟ್ಟು 397 ರನ್‌ಗಳ ಮುನ್ನಡೆ ಸಾಧಿಸಿದೆ. ಸಂಕ್ಷಿಪ್ತ ಸ್ಕೋರು ಮೊದಲ ಇನಿಂಗ್ಸ್: ಶ್ರೀಲಂಕಾ 48.4 ಓವರ್‌ಗಳಲ್ಲಿ 166. ಪಾಕಿಸ್ತಾನ: 132 ಓವರ್‌ಗಳಲ್ಲಿ 5 ವಿಕೆಟ್‌ಗಳಿಗೆ 563 (ಅಬ್ದುಲ್ ಶಫೀಕ್ 201, ಸೌದ್ ಶಕೀತ್ 57, ಆಘಾ ಸಲ್ಮಾನ್ ಬ್ಯಾಟಿಂಗ್ 132, ಮೊಹಮ್ಮದ್ ರಿಜ್ವಾನ್ ಬ್ಯಾಟಿಂಗ್ 37,ಅಶಿತ್ ಫರ್ನಾಂಡೊ 133ಕ್ಕೆ3, ಪ್ರಭಾತ್ ಜಯಸೂರ್ಯ 181ಕ್ಕೆ2) ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.