ಮಹಾರಾಜ ಟ್ರೋಫಿ ಕ್ರಿಕೆಟ್; ಟಿಕೆಟ್ ಮಾರಾಟ ಆರಂಭ ಪ್ರಜಾವಾಣಿ ವಾರ್ತೆ ಬೆಂಗಳೂರು: ಇದೇ ತಿಂಗಳು ನಡೆಯಲಿರುವ ಮಹಾರಾಜ ಟ್ರೋಫಿ ಟಿ20 ಕ್ರಿಕೆಟ್ ಟೂರ್ನಿಯ ಪಂದ್ಯಗಳ ಟಿಕೆಟ್‌ ಮಾರಾಟವನ್ನು ಆನ್‌ಲೈನ್‌ನಲ್ಲಿ ಆರಂಭಿಸಲಾಗಿದೆ. ಆಗಸ್ಟ್ 13ರಿಂದ ಆರಂಭವಾಗು ಪಂದ್ಯಗಳಿಗೆ ಟಿಕೆಟ್ ದರವನ್ನು ₹ 150 ನಿಗದಿ ಮಾಡಲಾಗಿದೆ. ಟಿಕೆಟ್‌ಗಳನ್ನು .. ವೆಬ್‌ಸೈಟ್ ಮೂಲಕ ಖರೀದಿಸಬೇಕು. ‘ಟಿಕೆಟ್‌ಗಳ ಮಾರಾಟ ಆರಂಭಿಸಿದ್ದೇವೆ. ಕ್ರಿಕೆಟ್ ಪ್ರೇಮಿಗಳು ಯುವ ಆಟಗಾರರನ್ನು ಪ್ರೋತ್ಸಾಹಿಸಲು ಕ್ರೀಡಾಂಗಣದಲ್ಲಿ ಸೇರುವ ನಿರೀಕ್ಷೆ ಇದೆ. ಈ ಟೂರ್ನಿಯನ್ನು ಅವಿಸ್ಮರಣಿಯವಾಗುವ ವಿಶ್ವಾಸವಿದೆ‘ ಎಂದು ಟೂರ್ನಿಯ ಆಡಳಿತ ಸಮಿತಿಯ ಚೇರ್ಮನ್ ಬಿ.ಕೆ. ಸಂಪತ್ ಕುಮಾರ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.