ಕೆಎಸ್‌ಸಿಎ : ಆಯ್ಕೆ ಸಮಿತಿಗೆ ಅಭಿರಾಮ್ ಮುಖ್ಯಸ್ಥ ಬೆಂಗಳೂರು: ಕರ್ನಾಟಕ ರಾಜ್ಯ ಪುರುಷರ ಕ್ರಿಕೆಟ್ ತಂಡದ ಆಯ್ಕೆ ಸಮಿತಿಯ ಮುಖ್ಯಸ್ಥರಾಗಿ ಜಯಸೂರ್ಯ ಅಭಿರಾಮ್ ಅವರನ್ನು ನೇಮಕ ಮಾಡಲಾಗಿದೆ. ಸೀನಿಯರ್ ಮಹಿಳಾ ತಂಡದ ಆಯ್ಕೆ ಸಮಿತಿಗೆ ಸುನೀತಾ ಅನಂತಕೃಷ್ಣನ್ ಮತ್ತು ಜೂನಿಯರ್ ತಂಡಕ್ಕೆ ಎಸ್. ಶರ್ಮಿಳಾ ಮುಖ್ಯಸ್ಥರಾಗಿದ್ದಾರೆ. ಅಭಿರಾಮ್ ಅವರು ಸೀನಿಯರ್, 23 ವರ್ಷದೊಳಗಿನವರ, 19 ವರ್ಷದೊಳಗಿನವರ ಹಾಗೂ 16 ವರ್ಷದೊಳಗಿನವರ ಆಯ್ಕೆ ಸಮಿತಿಗಳಿಗೆ ಮುಖ್ಯಸ್ಥರಾಗಿದ್ದಾರೆ. ಸೀನಿಯರ್ ಸಮಿತಿಗೆ ಮಾಜಿ ಕ್ರಿಕೆಟಿಗರಾದ ಕೆ.ಎಲ್. ಅಶ್ವಥ್, ಸಿ. ರಘು ಮತ್ತು ಕಮಲ್ ಟಂಡನ್ ಅವರನ್ನು ಸದಸ್ಯರನ್ನಾಗಿ ಆಯ್ಕೆ ಮಾಡಲಾಗಿದೆ. ಜೂನಿಯರ್ ಸಮಿತಿಯಲ್ಲಿ ಉದಿತ್ ಬಿ ಪಟೇಲ್ ಹಾಗೂ ರಘೋತ್ತಮ ನವಲಿ ಸ್ಥಾನ ಪಡೆದಿದ್ದಾರೆ. ಕಳೆದ ಅವಧಿಯಲ್ಲಿ ಸೀನಿಯರ್ ಸಮಿತಿಯ ಮುಖ್ಯಸ್ಥರಾಗಿ ಫಜಲ್ ಖಲೀಲ್ ಕಾರ್ಯನಿರ್ವಹಿಸಿದ್ದರು. ಕೆಎಸ್‌ಸಿಎ ಅಧ್ಯಕ್ಷ ರಘುರಾಮ್ ಭಟ್ ಅವರು ಪ್ರಕಟಿಸಿರುವ ಸಮಿತಿಗಳು; ಸೀನಿಯರ್ ಮತ್ತು 23 ವರ್ಷದೊಳಗಿನವರು: ಜೆ. ಅಭಿರಾಮ್ (ಚೇರ್ಮನ್), ಕೆ.ಎಲ್. ಅಶ್ವಥ್‌, ಸಿ. ರಘು, ಕಮಲ್ ಟಂಡನ್ (ಸದಸ್ಯರು) 19 ಮತ್ತು 16 ವರ್ಷದೊಳಗಿನವರು: ಜೆ. ಅಭಿರಾಮ್ (ಚೇರ್ಮನ್), ಎಂ.ವಿ. ಪ್ರಶಾಂತ್, ಉದಿತ್ ಬಿ ಪಟೇಲ್, ಕೆ.ಎಂ. ಅಯ್ಯಪ್ಪ, ರಘೋತ್ತಮ ನವಲಿ (ಸದಸ್ಯರು) ಮಹಿಳೆಯರ ಸೀನಿಯರ್: ಸುನೀತಾ ಅನಂತಕೃಷ್ಣನ್ (ಚೇರ್ಮನ್), ಅರುಣಾ ರೆಡ್ಡಿ, ನಿವೇದಿತಾ ರೇಷ್ಮೆ, ಮುಕ್ತಾ ಅಲ್ಗೇರಿ (ಸದಸ್ಯರು) ಮಹಿಳಾ ಜೂನಿಯರ್: ಎಸ್. ಶರ್ಮಿಳಾ (ಚೇರ್ಮನ್), ರಂಜನಿಕುಮಾರ್, ಸಬಾ ಸಿದ್ಧೀಕಿ, ಮೀನಾಕುಮಾರಿ (ಸದಸ್ಯರು) ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.