ಐರ್ಲೆಂಡ್‌ ಎದುರು ಟಿ20 ಪಂದ್ಯ: ಭಾರತ ಬೌಲಿಂಗ್, ಬೂಮ್ರಾ ಆಟದ ಮೇಲೆ ಎಲ್ಲರ ಕಣ್ಣು ಡಬ್ಲಿನ್‌: ಐರ್ಲೆಂಡ್‌ ವಿರುದ್ಧದ ಟಿ20 ಕ್ರಿಕೆಟ್‌ ಸರಣಿಯ ಮೊದಲ ಹಣಾಹಣಿಯಲ್ಲಿ ಟಾಸ್‌ ಗೆದ್ದಿರುವ ಭಾರತ ತಂಡ ಬೌಲಿಂಗ್‌ ಆಯ್ದುಕೊಂಡಿದೆ. ಡಬ್ಲಿನ್‌ನ 'ದಿ ವಿಲೇಜ್‌' ಕ್ರೀಡಾಂಗಣದಲ್ಲಿ ಪಂದ್ಯ ನಡೆಯುತ್ತಿದೆ. ಟೀಂ ಇಂಡಿಯಾ ಮುನ್ನಡೆಸುತ್ತಿರುವ ಜಸ್‌ಪ್ರೀತ್‌ ಬೂಮ್ರಾ ಬರೋಬ್ಬರಿ ಹನ್ನೊಂದು ತಿಂಗಳ ಬಳಿಕ ಕಣಕ್ಕಿಳಿಯುತ್ತಿದ್ದಾರೆ. ಎರಡು ತಿಂಗಳ ನಂತರ ಏಕದಿನ ವಿಶ್ವಕಪ್‌ ಟೂರ್ನಿ ಇರುವುದರಿಂದ ಎಲ್ಲರ ಕಣ್ಣು ಅವರ ಮೇಲೆ ನೆಟ್ಟಿದೆ. ಐಪಿಎಲ್‌ನಲ್ಲಿ ಮಿಂಚಿದ್ದ ಋತುರಾಜ್‌ ಗಾಯಕವಾಡ್, ರಿಂಕು ಸಿಂಗ್‌, ಕನ್ನಡಿಗ ಪ್ರಸಿದ್ಧ ಕೃಷ್ಣ ಆಡುವ ಹನ್ನೊಂದರ ಬಳಗದಲ್ಲಿ ಸ್ಥಾನ ಪಡೆದಿದ್ದಾರೆ. ರಿಂಕು ಸಿಂಗ್‌ಗೆ ಇದು ಪದಾರ್ಪಣೆ ಟೂರ್ನಿಯಾಗಿದೆ. ಆಡುವ ಹನ್ನೊಂದರ ಬಳಗ ಭಾರತ: ಜಸ್‌ಪ್ರೀತ್‌ ಬೂಮ್ರಾ (ನಾಯಕ), ಋತುರಾಜ್‌ ಗಾಯಕವಾಡ್ (ಉಪನಾಯಕ), ಯಶಸ್ವಿ ಜೈಸ್ವಾಲ್, ತಿಲಕ್‌ ವರ್ಮಾ, ರಿಂಕು ಸಿಂಗ್, ಸಂಜು ಸ್ಯಾಮ್ಸನ್ (ವಿಕೆಟ್ ಕೀಪರ್‌), ಶಿವಂ ದುಬೆ, ವಾಷಿಂಗ್ಟನ್‌ ಸುಂದರ್, ರವಿ ಬಿಷ್ಣೋಯಿ, ಪ್ರಸಿದ್ಧ ಕೃಷ್ಣ, ಆರ್ಷದೀಪ್‌ ಸಿಂಗ್ ಐರ್ಲೆಂಡ್‌: ಪೌಲ್‌ ಸ್ಟರ್ಲಿಂಗ್‌ (ನಾಯಕ) ಆ್ಯಂಡ್ರ್ಯೂ ಬಲ್ಬರ್ನಿ (ನಾಯಕ), ಹ್ಯಾರಿ ಟೆಕ್ಟರ್, ಲೋರ್ಕನ್ ಟಕರ್, ಕರ್ಟಿಸ್‌ ಕ್ಯಾಂಫರ್, ಜಾರ್ಜ್‌ ಡಾಕ್ರೆಲ್, ಮಾರ್ಕ್‌ ಅದೈರ್‌, ಜೋಶ್‌ ಲಿಟ್ಲ್, ಬ್ಯಾರಿ ಮೆಕಾರ್ಥಿ, ಬೆನ್‌ ವೈಟ್, ಕ್ರೇಗ್ ಯಂಗ್ ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.