T20 ಕ್ರಿಕೆಟ್ | ಮೆಕಾರ್ಥಿ ಅರ್ಧಶತಕ; ಭಾರತಕ್ಕೆ 140 ರನ್ ಗುರಿ ನೀಡಿದ ಐರ್ಲೆಂಡ್ ಡಬ್ಲಿನ್‌: ಮೂರು ಪಂದ್ಯಗಳ ಟಿ20 ಕ್ರಿಕೆಟ್‌ ಸರಣಿಯ ಮೊದಲ ಪಂದ್ಯದಲ್ಲಿ ಐರ್ಲೆಂಡ್‌ ತಂಡ ಬ್ಯಾರಿ ಮೆಕಾರ್ಥಿ ಗಳಿಸಿದ ಅರ್ಧಶತಕದ ನೆರವಿನಿಂದ ಭಾರತದ ಗೆಲುವಿಗೆ 140 ರನ್‌ಗಳ ಗುರಿ ನೀಡಿದೆ. ಡಬ್ಲಿನ್‌ನ 'ದಿ ವಿಲೇಜ್‌' ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಪಂದ್ಯದಲ್ಲಿ ಟಾಸ್‌ ಸೋತರೂ ಮೊದಲು ಬ್ಯಾಟಿಂಗ್‌ ಮಾಡುವ ಅವಕಾಶ ಪಡೆದ ಐರ್ಲೆಂಡ್‌, ನಿಗದಿತ 20 ಓವರ್‌ಗಳಲ್ಲಿ 7 ವಿಕೆಟ್‌ಗಳನ್ನು ಕಳೆದುಕೊಂಡು 139 ರನ್ ಗಳಿಸಿದೆ. ಮೆಕಾರ್ಥಿ ಅವರು ಎಂಟನೇ ಕ್ರಮಾಂಕದಲ್ಲಿ ಕ್ರೀಸ್‌ಗೆ ಇಳಿದು ಬಿರುಸಿನ ಅರ್ಧಶತಕ ಗಳಿಸಿದರು. 33 ಎಸೆತಗಳಲ್ಲಿ ನಾಲ್ಕು ಸಿಕ್ಸರ್‌ ಮತ್ತು ನಾಲ್ಕು ಬೌಂಡರಿ ಸಹಿತ 51 ರನ್‌ ಬಾರಿಸಿ ಅಜೇಯವಾಗಿ ಉಳಿದರು. ಅವರು ಇನಿಂಗ್ಸ್‌ನ ಕೊನೇ ಎಸೆತದಲ್ಲಿ ಸಿಕ್ಸರ್‌ ಸಿಡಿಸಿ ಅರ್ಧಶತಕ ಪೂರೈಸಿದ್ದು ವಿಶೇಷ. ಹೀಗಾಗಿ ಗೌರವ ಯುತ ಮೊತ್ತ ಕಲೆಹಾಕಲು ಸಾಧ್ಯವಾಯಿತು. ಬರೋಬ್ಬರಿ ಹನ್ನೊಂದು ತಿಂಗಳ ಬಳಿಕ ಕಣಕ್ಕಿಳಿದಿರುವ ಟೀಂ ಇಂಡಿಯಾ ನಾಯಕ ಜಸ್‌ಪ್ರೀತ್‌ ಬೂಮ್ರಾ, ಯುವ ಸ್ಪಿನ್ನರ್‌ ರವಿ ಬಿಷ್ಣೋಯಿ ಹಾಗೂ ಅರ್ಶದೀಪ್‌ ಸಿಂಗ್ ತಲಾ ಎರಡು ವಿಕೆಟ್‌ಗಳನ್ನು ಕಬಳಿಸಿದರು. ಆಡುವ ಹನ್ನೊಂದರ ಬಳಗ ಭಾರತ: ಜಸ್‌ಪ್ರೀತ್‌ ಬೂಮ್ರಾ (ನಾಯಕ), ಋತುರಾಜ್‌ ಗಾಯಕವಾಡ್ (ಉಪನಾಯಕ), ಯಶಸ್ವಿ ಜೈಸ್ವಾಲ್, ತಿಲಕ್‌ ವರ್ಮಾ, ರಿಂಕು ಸಿಂಗ್, ಸಂಜು ಸ್ಯಾಮ್ಸನ್ (ವಿಕೆಟ್ ಕೀಪರ್‌), ಶಿವಂ ದುಬೆ, ವಾಷಿಂಗ್ಟನ್‌ ಸುಂದರ್, ರವಿ ಬಿಷ್ಣೋಯಿ, ಪ್ರಸಿದ್ಧ ಕೃಷ್ಣ, ಆರ್ಷದೀಪ್‌ ಸಿಂಗ್ ಐರ್ಲೆಂಡ್‌: ಪೌಲ್‌ ಸ್ಟರ್ಲಿಂಗ್‌ (ನಾಯಕ) ಆ್ಯಂಡ್ರ್ಯೂ ಬಲ್ಬರ್ನಿ (ನಾಯಕ), ಹ್ಯಾರಿ ಟೆಕ್ಟರ್, ಲೋರ್ಕನ್ ಟಕರ್, ಕರ್ಟಿಸ್‌ ಕ್ಯಾಂಫರ್, ಜಾರ್ಜ್‌ ಡಾಕ್ರೆಲ್, ಮಾರ್ಕ್‌ ಅದೈರ್‌, ಜೋಶ್‌ ಲಿಟ್ಲ್, ಬ್ಯಾರಿ ಮೆಕಾರ್ಥಿ, ಬೆನ್‌ ವೈಟ್, ಕ್ರೇಗ್ ಯಂಗ್ ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.