: ಭಾರತದ ಗೆಲುವಿಗೆ 179 ರನ್ ಗುರಿ ಫ್ಲೋರಿಡಾ: ಇಲ್ಲಿ ನಡೆಯುತ್ತಿರುವ ನಾಲ್ಕನೇ ಟ್ವೆಂಟಿ-20 ಅಂತರರಾಷ್ಟ್ರೀಯ ಪಂದ್ಯದಲ್ಲಿ ಭಾರತದ ಗೆಲುವಿಗೆ ವೆಸ್ಟ್ ಇಂಡೀಸ್ 179 ರನ್‌ಗಳ ಗುರಿ ಒಡ್ಡಿದೆ. ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಿದ ವಿಂಡೀಸ್, ನಿಗದಿತ 20 ಓವರ್‌ಗಳಲ್ಲಿ ಎಂಟು ವಿಕೆಟ್ ನಷ್ಟಕ್ಕೆ 178 ರನ್ ಗಳಿಸಿತು. ವಿಂಡೀಸ್ ಪರ ಶಿಮ್ರಾನ್ ಹೆಟ್ಮೆಯರ್ ಗರಿಷ್ಠ 61 ರನ್ ಗಳಿಸಿದರು. ಶಾಯ್ ಹೋಪ್ 45 ರನ್ ಗಳಿಸಿ ಮಿಂಚಿದರು. ಕೇವಲ 35 ಎಸೆತಗಳಲ್ಲಿ ಅರ್ಧಶತಕ ಗಳಿಸಿದ ಹೆಟ್ಮೆಯರ್, ಸವಾಲಿನ ಮೊತ್ತ ಪೇರಿಸಲು ವಿಂಡೀಸ್‌ಗೆ ನೆರವಾದರು. ಕೈಲ್ ಮೇಯರ್ಸ್ 17, ಬ್ರಂಡನ್ ಕಿಂಗ್ 18 ರನ್‌ಗಳ ಉಪಯುಕ್ತ ಕಾಣಿಕೆ ನೀಡಿದರು. ಭಾರತದ ಪರ ಅರ್ಶದೀಪ್ ಸಿಂಗ್ ಮೂರು ಮತ್ತು ಕುಲದೀಪ್ ಯಾದವ್ ಎರಡು ವಿಕೆಟ್ ಕಬಳಿಸಿದರು. ಸರಣಿ ಗೆಲ್ಲಲು ಭಾರತ ಕೊನೆಯ ಎರಡು ಪಂದ್ಯಗಳಲ್ಲಿ (ಈ ಪಂದ್ಯ ಸೇರಿದಂತೆ) ಗೆಲ್ಲಲೇಬೇಕಾದ ಒತ್ತಡಕ್ಕೆ ಸಿಲುಕಿದೆ. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.