ಟಿ20 ಕ್ರಿಕೆಟ್: ವಿಂಡೀಸ್‌ ವಿರುದ್ಧ ಭಾರತಕ್ಕೆ ಭರ್ಜರಿ ಗೆಲುವು ಲಾಡೆರ್‌ಹಿಲ್, ಅಮೆರಿಕ: ನಾಲ್ಕನೇ ಟಿ20 ಪಂದ್ಯದಲ್ಲಿ ಭಾರತ ತಂಡವು ವೆಸ್ಟ್ ಇಂಡೀಸ್ ಅನ್ನು ಮಣಿಸಿತು. ಭಾರತ ತಂಡ ಒಂದು ವಿಕೆಟ್‌ ಕಳೆದುಕೊಂಡು ಗೆಲುವು ದಾಖಲಿಸಿತು. ಗಿಲ್‌ 77 ರನ್‌ ಗಳಿಸಿ ಔಟಾದರು. ಜೈಸ್ವಾಲ್ 84, ತಿಲಕ್‌ ವರ್ಮಾ ಔಟಾಗದೇ 7 ರನ್‌ ಗಳಿಸಿದರು. ಭಾರತ 17 ಓವರ್‌ಗಳಲ್ಲಿ ಗೆಲುವಿನ ನಗೆ ಬೀರಿತು. ಶನಿವಾರ ನಡೆದ ಪಂದ್ಯದಲ್ಲಿ ಟಾಸ್ ಗೆದ್ದ ವೆಸ್ಟ್ ಇಂಡೀಸ್ ತಂಡವು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡಿತು. ಹೆಟ್ಮೆಯರ್ (61; 39ಎ, 4X3, 6X4) ಮತ್ತು ಶೈ ಹೋಪ್ 45; 29ಎ, 4X3, 6X2) ಅವರ ಆಟದಿಂದ ತಂಡವು 20 ಓವರ್‌ಗಳಲ್ಲಿ 8 ವಿಕೆಟ್‌ಗಳಿಗೆ 179 ರನ್ ಗಳಿಸಿತು. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.