ಇಂಗ್ಲೆಂಡ್‌ನ ಒನ್‌ ಡೇ ಕಪ್ ಕ್ರಿಕೆಟ್ ಟೂರ್ನಿ: ಪೃಥ್ವಿ ಶಾ ಶತಕ ಚೆಸ್ಟರ್‌ ಲಿ ಸ್ಟ್ರೀಟ್: ಭಾರತದ ಬ್ಯಾಟರ್‌ ಪೃಥ್ವಿ ಶಾ ಅವರು ಇಂಗ್ಲೆಂಡ್‌ನ ಒನ್‌ ಡೇ ಕಪ್ ಕ್ರಿಕೆಟ್ ಟೂರ್ನಿಯಲ್ಲಿ ಮತ್ತೆ ಮಿಂಚಿದ್ದಾರೆ. ನಾರ್ಥಾಂಪ್ಟನ್‌ಶೈರ್ ತಂಡವನ್ನು ಪ್ರತಿನಿಧಿಸುತ್ತಿರುವ ಅವರು ಭಾನುವಾರ ಡರ್ಹಮ್ ವಿರುದ್ದದ ಪಂದ್ಯದಲ್ಲಿ 76 ಎಸೆತಗಳಲ್ಲಿ 125 ರನ್‌ ಗಳಿಸಿದರು. ಕಳೆದ ಪಂದ್ಯದಲ್ಲಿ ಅವರು ದ್ವಿಶತಕ (244) ಗಳಿಸಿ ಗಮನ ಸೆಳೆದಿದ್ದರು. ಪೃಥ್ವಿ ಅವರ ಶತಕದ ನೆರವಿನಿಂದ ನಾರ್ಥಾಂಪ್ಟನ್‌ಶೈರ್ ತಂಡ ಆರು ವಿಕೆಟ್‌ಗಳ ಜಯ ಸಾಧಿಸಿತು. ಮೊದಲು ಬ್ಯಾಟ್‌ ಮಾಡಿದ ಡರ್ಹ‌ಮ್ 43.2 ಓವರ್‌ಗಳಲ್ಲಿ 198 ರನ್‌ಗಳಿಗೆ ಆಲೌಟಾಯಿತು. ನಾರ್ಥಾಂಪ್ಟನ್‌ಶೈರ್ 25.4 ಓವರ್‌ಗಳಲ್ಲಿ ನಾಲ್ಕು ವಿಕೆಟ್‌ ಕಳೆದುಕೊಂಡು ಗೆಲುವಿನ ಗುರಿ ತಲುಪಿತು. ಭಾರತದ ಬ್ಯಾಟರ್‌ಗೆ ತಕ್ಕ ಸಾಥ್‌ ನೀಡಿದ ರಾಬ್‌ ಕೆಯೊ 42 ರನ್‌ ಗಳಿಸಿದರು. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.