ವಿಶ್ವಕಪ್‌ನಲ್ಲಿ ಪಾಕ್ ಎದುರು ಭಾರತ ಸೋಲುತ್ತದೆ ಎಂದ ಮಾಜಿ ಕ್ರಿಕೆಟಿಗ: ಕಾರಣವೇನು? ಈ ವರ್ಷಾಂತ್ಯದಲ್ಲಿ ನಡೆಯಲಿರುವ ಏಕದಿನ ಕ್ರಿಕೆಟ್‌ ವಿಶ್ವಕಪ್‌ ಟೂರ್ನಿಯಲ್ಲಿ ಭಾರತ ತಂಡವು ಪಾಕಿಸ್ತಾನ ವಿರುದ್ಧ ಸೋಲುತ್ತದೆ ಎಂದು ಮಾಜಿ ಕ್ರಿಕೆಟಿಗ ಅಖೀಬ್ ಜಾವೆದ್‌ ಅಭಿಪ್ರಾಯಪಟ್ಟಿದ್ದಾರೆ. ಭಾರತ ತಂಡ ಏಕದಿನ ವಿಶ್ವಕಪ್‌ ಟೂರ್ನಿಗಳಲ್ಲಿ ಇದುವರೆಗೆ ಒಮ್ಮೆಯೂ ಪಾಕ್‌ ವಿರುದ್ಧ ಸೋಲು ಕಂಡಿಲ್ಲ. ಆದಾಗ್ಯೂ ಅಕಿಬ್‌ ಅಚ್ಚರಿಯ ಹೇಳಿಕೆ ನೀಡಿದ್ದಾರೆ. ' & ' ಯುಟ್ಯೂಬ್‌ ಚಾನೆಲ್‌ನಲ್ಲಿ ಮಾತನಾಡಿರುವ ಅಖೀಬ್, 'ಈ ವಿಶ್ವಕಪ್‌ ಟೂರ್ನಿಯು ಕೆಲವು ಆಟಗಾರರಿಗೆ ಕೊನೆಯದ್ದಾಗಿರಲಿದೆ. ಭಾರತ ತಂಡದಲ್ಲಿ ಈ ರೀತಿ ಆಗಲಿದೆ ಎಂದು ಭಾವಿಸಿದ್ದೇನೆ. ಸ್ಟಾರ್‌ ಆಟಗಾರರು ವ್ಯವಸ್ಥೆಗಿಂತಲೂ ಬಲಿಷ್ಠವಾಗಿ ಬೆಳೆದಾಗ, ತಂಡದ ಆಡಳಿತ ಮಂಡಳಿಗೆ ನಿರ್ಧಾರಗಳನ್ನು ತೆಗೆದುಕೊಳ್ಳಲು ಕಷ್ಟವಾಗುತ್ತದೆ. ಆ ನಿಟ್ಟಿನಲ್ಲಿ ಎಲ್ಲ ವಿಭಾಗಗಳನ್ನು ಹೋಲಿಕೆ ಮಾಡಿ ನೋಡಿದರೆ, ಪಾಕಿಸ್ತಾನ ತಂಡವು ಭಾರತದ ವಿರುದ್ಧ ಗೆಲ್ಲುವ ಉತ್ತಮ ಅವಕಾಶವನ್ನು ಹೊಂದಿದೆ' ಎಂದು ಹೇಳಿದ್ದಾರೆ. ಭಾರತದ 4ನೇ ಕ್ರಮಾಂಕದ ಬ್ಯಾಟಿಂಗ್‌ ಸಮಸ್ಯೆಗೆ ಕೊಹ್ಲಿಯೇ ಪರಿಹಾರ: ರವಿಶಾಸ್ತ್ರಿ ಪಾಕಿಸ್ತಾನ ತಂಡದ ಮಾಜಿ ವೇಗದ ಬೌಲರ್‌ ಆಗಿರುವ ಅಖೀಬ್, ಟೀಂ ಇಂಡಿಯಾ ನಾಯಕ ರೋಹಿತ್‌ ಶರ್ಮಾ ಮತ್ತು ಮಾಜಿ ನಾಯಕ ವಿರಾಟ್‌ ಕೊಹ್ಲಿ ಕುರಿತ ಪ್ರಶ್ನೆಗೆ ಪ್ರತಿಕ್ರಿಯಿಸಿದರು. ರೋಹಿತ್‌ ಶರ್ಮಾ ಹೆಚ್ಚು ಸಮಯ ಆಡಲಾರರು. ವಿರಾಟ್‌ ಕೊಹ್ಲಿ, ಪಾಕ್‌ ತಂಡದ ನಾಯಕ ಬಾಬರ್ ಅಜಂ ಅವರಷ್ಟು ಸ್ಥಿರ ಪ್ರದರ್ಶನ ನೀಡುತ್ತಿಲ್ಲ ಎಂದಿದ್ದಾರೆ. 'ರೋಹಿತ್ ಶರ್ಮಾ ಎಷ್ಟು ಸಮಯ ಆಡಬಲ್ಲರು? ಕೋಹ್ಲಿ, ಬಾಬರ್‌ ಅವರಂತೆ ಸ್ಥಿರ ಪ್ರದರ್ಶನ ನೀಡಲಾರರು. ಒಂದು ಟೂರ್ನಿಯಲ್ಲಿ ಅಮೋಘ ಪ್ರದರ್ಶನ ನೀಡಿದರೆ, ಮತ್ತೊಂದು ಟೂರ್ನಿಯಲ್ಲಿ ವೈಫಲ್ಯ ಅನುಭವಿಸುತ್ತಾರೆ. ಅವರು (ವಿರಾಟ್‌ ಕೊಹ್ಲಿ) ಅದ್ಭುತ ಆಟಗಾರ ಆಗಿದ್ದರೂ, ಕಷ್ಟಪಡುತ್ತಿದ್ದಾರೆ. ಹಾಗಾಗಿ, ವಿಶ್ವಕಪ್‌ ಟೂರ್ನಿಯಲ್ಲಿ ಭಾರತವನ್ನು ಸೋಲಿಸುವ ಅತ್ಯುತ್ತಮ ಅವಕಾಶ ಪಾಕಿಸ್ತಾನಕ್ಕೆ ಇದೆ' ಎಂದಿದ್ದಾರೆ. 2024ರ ಟಿ20 ವಿಶ್ವಕಪ್‌ನಲ್ಲಿ ಆಡುವರೇ ಕೊಹ್ಲಿ?: ಸಂಜಯ್ ಬಂಗಾರ್ ಹೇಳಿದ್ದೇನು? ಭಾರತ ಮತ್ತು ಪಾಕಿಸ್ತಾನ ತಂಡಗಳು ವಿಶ್ವಕಪ್‌ ಟೂರ್ನಿಗಳಲ್ಲಿ ಇದುವರೆಗೆ 7 ಬಾರಿ ಮುಖಾಮುಖಿಯಾಗಿವೆ. ಏಳು ಬಾರಿಯೂ ಭಾರತವೇ ಗೆದ್ದಿದೆ. ಭಾರತದಲ್ಲಿ ಆಯೋಜನೆಗೊಳ್ಳಲಿರುವ ಈ ಬಾರಿಯ ವಿಶ್ವಕಪ್‌ ಟೂರ್ನಿಯು ಅಕ್ಟೋಬರ್‌ 5ರಿಂದ ನವೆಂಬರ್‌ 19ರವರೆಗೆ ನಡೆಯಲಿದೆ. ಉಭಯ ತಂಡಗಳು ಅಹಮದಾಬಾದ್‌ನ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ಅಕ್ಟೋಬರ್‌ 14ರಂದು ಮುಖಾಮುಖಿಯಾಗಲಿವೆ. ಅಂತರರಾಷ್ಟ್ರೀಯ ಕ್ರಿಕೆಟ್‌ನಲ್ಲಿ 15 ವರ್ಷ: ವಿಶೇಷ ಪೋಸ್ಟ್ ಹಂಚಿಕೊಂಡ ಕೊಹ್ಲಿ ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.