: ವಿರಾಟ್ ಅವರಿಂದ ಅನೇಕ ವಿಚಾರಗಳನ್ನು ಕಲಿತಿದ್ದೇನೆ: ಬಾಬರ್ ಪಲೇಕೆಲೆ: ಏಷ್ಯಾ ಕಪ್ 2023 ಕ್ರಿಕೆಟ್ ಟೂರ್ನಿಯಲ್ಲಿ ಭಾರತ ಹಾಗೂ ಪಾಕಿಸ್ತಾನ ತಂಡಗಳ ಹಣಾಹಣಿಗೆ ವೇದಿಕೆ ಸಜ್ಜುಗೊಂಡಿದೆ. ಈ ನಡುವೆ ಪ್ರತಿಕ್ರಿಯಿಸಿರುವ ಪಾಕಿಸ್ತಾನದ ನಾಯಕ ಬಾಬರ್ ಆಜಂ, ಭಾರತದ ಮಾಜಿ ನಾಯಕ ವಿರಾಟ್ ಕೊಹ್ಲಿ ಅವರಿಂದ ಅನೇಕ ವಿಚಾರಗಳನ್ನು ಕಲಿತಿದ್ದೇನೆ ಎಂದು ಹೇಳಿದ್ದಾರೆ. ತಮ್ಮ ವೃತ್ತಿ ಜೀವನದ ಆರಂಭದಲ್ಲಿ ಕೊಹ್ಲಿ ನೀಡಿದ ಸಲಹೆಯಿಂದ ತುಂಬಾ ನೆರವಾಗಿದೆ. ಇದರಿಂದ ಬ್ಯಾಟಿಂಗ್ ಉತ್ತಮಪಡಿಸಲು ಸಾಧ್ಯವಾಗಿದೆ ಎಂದು ಅವರು ತಿಳಿಸಿದ್ದಾರೆ. ನಮ್ಮಿಬ್ಬರ ಮಧ್ಯೆ ಪರಸ್ಪರ ಗೌರವ ಇದೆ. ಕೊಹ್ಲಿ ನನಗಿಂತಲೂ ಹಿರಿಯರಾಗಿದ್ದು, ಅವರನ್ನು ನಾನು ಗೌರವಿಸುತ್ತೇನೆ. ಅವರಿಂದ ಹಲವು ವಿಚಾರಗಳನ್ನು ತಿಳಿದುಕೊಂಡಿದ್ದೇನೆ ಎಂದು ತಿಳಿಸಿದ್ದಾರೆ. 'ವಿಶ್ವದ ಅತ್ಯುತ್ತಮ ಬ್ಯಾಟರ್' ಎಂದು ವಿರಾಟ್ ಕೊಹ್ಲಿ ಅವರಿಂದಲೇ ಶ್ಲಾಘನೆ ಗಿಟ್ಟಿಸಿಕೊಂಡಿರುವುದು ಅತ್ಯುತ್ತಮ ಭಾವನೆ ಉಂಟು ಮಾಡಿದೆ ಎಂದು ಅವರು ಹೇಳಿದ್ದಾರೆ. ಪಾಕ್ ಆಟಗಾರರೊಂದಿಗೆ ಕೊಹ್ಲಿ ಮಾತುಕತೆ... ಈ ನಡುವೆ ಅಭ್ಯಾಸದ ಅವಧಿಯ ಬಳಿಕ ವಿರಾಟ್ ಕೊಹ್ಲಿ ಅವರು ಪಾಕಿಸ್ತಾನ ಆಟಗಾರರೊಂದಿಗೆ ಬೆರೆತು ಮಾತುಕತೆ ನಡೆಸಿರುವ ವಿಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ. ಪಾಕ್ ವೇಗಿ ಹ್ಯಾರಿಸ್ ರವೂಫ್ ಅವರನ್ನು ತಬ್ಬಿಕೊಂಡ ಕೊಹ್ಲಿ ಮಾತುಕತೆ ನಡೆಸಿದರು. ಬಳಿಕ ಶಾದಾಬ್ ಖಾನ್, ಶಾಹೀನ್ ಆಫ್ರಿದಿ ಅವರನ್ನು ಭೇಟಿಯಾಗಿ ಮಾತುಕತೆ ನಡೆಸುತ್ತಿರುವ ದೃಶ್ಯ ಕಂಡುಬಂತು. . . [ ] ../WDnZVIo1kp ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.