: ಬಾಬರ್‌ಗೆ ಜೆರ್ಸಿ ಉಡುಗೊರೆ ನೀಡಿದ ಕೊಹ್ಲಿ; ವಾಸೀಂ ಅಕ್ರಮ್ ಗರಂ ಅಹಮದಾಬಾದ್: ಏಕದಿನ ವಿಶ್ವಕಪ್ ಟೂರ್ನಿಯಲ್ಲಿ ಸಾಂಪ್ರದಾಯಿಕ ಬದ್ಧ ಎದುರಾಳಿ ಪಾಕಿಸ್ತಾನ ವಿರುದ್ಧ ಅಹಮದಾಬಾದ್‌ನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ಶನಿವಾರ ನಡೆದ ಪಂದ್ಯದಲ್ಲಿ ಭಾರತ ಏಳು ವಿಕೆಟ್ ಅಂತರದ ಭರ್ಜರಿ ಗೆಲುವು ದಾಖಲಿಸಿದೆ. ಪಂದ್ಯದ ಬಳಿಕ ಪಾಕಿಸ್ತಾನದ ನಾಯಕ ಬಾಬರ್ ಆಜಂ ಅವರನ್ನು ಭೇಟಿ ಮಾಡಿರುವ ವಿರಾಟ್ ಕೊಹ್ಲಿ, ಪಾಕ್ ನಾಯಕನಿಗೆ ತಾವು ಸಹಿ ಮಾಡಿರುವ ಜೆರ್ಸಿ ಅನ್ನು ಉಡುಗೊರೆಯಾಗಿ ನೀಡಿದ್ದಾರೆ. ಇದು ಅಭಿಮಾನಿಗಳಲ್ಲಿ ಪರ-ವಿರೋಧ ಚರ್ಚೆಗೆ ಗ್ರಾಸವಾಗಿದೆ. ಪಾಕಿಸ್ತಾನದ ಮಾಜಿ ನಾಯಕ ವಾಸೀಂ ಅಕ್ರಮ್ ಸಹ ಇದಕ್ಕೆ ವಿರೋಧ ವ್ಯಕ್ತಪಡಿಸಿದ್ದಾರೆ. " ' "../KREc7H41Pm# #indvspak2023 # #RohitSharma𓃵 # #CWC23 #ICCCricketWorldCup23 ../ ಇಂದು ಇದನ್ನು ಮಾಡುವ ದಿನವಲ್ಲ. ನಿಮ್ಮ ಮಾವನ ಮಗ ನಿಜಕ್ಕೂ ಕೊಹ್ಲಿಯ ಟೀ-ಶರ್ಟ್ ತರಲು ಬಯಸಿದ್ದರೆ ಪಂದ್ಯದ ಬಳಿಕ ಡ್ರೆಸ್ಸಿಂಗ್ ಕೊಠಡಿಯಲ್ಲಿ ತೆಗೆದುಕೊಳ್ಳಬಹುದಿತ್ತು ಎಂದು ಬಾಬರ್‌ ಅವರಿಗೆ ಟಾಂಗ್ ಕೊಟ್ಟಿದ್ದಾರೆ. ಪಾಕಿಸ್ತಾನದ ಖಾಸಗಿ ಟಿ.ವಿ ಚಾನಲ್‌ನಲ್ಲಿ ನಡೆದ ಕ್ರಿಕೆಟ್ ಕುರಿತು ಚರ್ಚೆಯ ವೇಳೆ ಬಾಬರ್ ಜೆರ್ಸಿ ಸ್ವೀಕರಿಸಿರುವ ನಡೆಯನ್ನು ವಾಸೀಂ ವಿರೋಧಿಸಿದ್ದಾರೆ. ಬಾಬರ್ ವಿನಂತಿ ಮೇರೆಗೆ ಅಥವಾ ಖುದ್ದಾಗಿ ವಿರಾಟ್ ಅವರೇ ಜೆರ್ಸಿ ನೀಡಿದ್ದಾರೆಯೇ ಎಂಬುದು ತಿಳಿದು ಬಂದಿಲ್ಲ. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.