ಏಷ್ಯಾ ಕಪ್‌ ಕ್ರಿಕೆಟ್‌: 6 ವರ್ಷ ಬಳಿಕ ಅಫ್ಗನ್ ತಂಡಕ್ಕೆ ಮರಳಿದ ಕರೀಂ ಜನತ್ ಕಾಬೂಲ್‌ (ಪಿಟಿಐ): ಆಲ್‌ರೌಂಡರ್ ಕರೀಂ ಜನತ್ ಅವರು ಆರು ವರ್ಷಗಳ ನಂತರ ಅಫ್ಗಾನಿಸ್ತಾನ ಏಕದಿನ ತಂಡದಲ್ಲಿ ಸ್ಥಾನ ಪಡೆದಿದ್ದಾರೆ. ಇದೇ 30ರಂದು ಆರಂಭವಾಗುವ ಏಷ್ಯಾ ಕಪ್ ಕ್ರಿಕೆಟ್‌ ಟೂರ್ನಿಗೆ ಭಾನುವಾರ ಪ್ರಕಟಿಸಲಾಗಿರುವ ತಂಡದಲ್ಲಿ ಅನುಭವಿ ಎಡಗೈ ಬ್ಯಾಟರ್‌ ನಜೀಬುಲ್ಲಾ ಜದ್ರಾನ್ ಅವರನ್ನೂ ಸೇರ್ಪಡೆಗೊಳಿಸಲಾಗಿದೆ. ಇನಿಂಗ್ಸ್‌ಗೆ ಲಂಗರು ಹಾಕುವುದಕ್ಕೆ ಪ್ರಸಿದ್ಧರಾಗಿರುವ ಎಡಗೈ ಬ್ಯಾಟರ್‌ ಹಷ್ಮತ್‌ಉಲ್ಲಾ ಶಾಹಿದಿ ಅವರು ತಂಡದ ನಾಯಕರಾಗಿದ್ದಾರೆ. ಪಾಕಿಸ್ತಾನ ಮತ್ತು ಶ್ರೀಲಂಕಾದಲ್ಲಿ ಟೂರ್ನಿಯ ಪಂದ್ಯಗಳು ನಡೆಯಲಿವೆ. ಮೊಣಕಾಲಿನ ನೋವಿನಿಂದ ಜದ್ರಾನ್‌, ಇತ್ತೀಚೆಗೆ ಪಾಕಿಸ್ತಾನ ವಿರುದ್ಧ ಮೂರು ಪಂದ್ಯಗಳ ಏಕದಿನ ಸರಣಿಯಲ್ಲಿ ಆಡಿರಲಿಲ್ಲ. 25 ವರ್ಷದ ಜನತ್‌ 2017ರಲ್ಲಿ ಕೊನೆಯ ಬಾರಿ ಏಕದಿನ ತಂಡದಲ್ಲಿ ಆಡಿದ್ದರು. ನಂತರ ಅವರು ಒಂದು ಟೆಸ್ಟ್ ಮತ್ತು 49 ಟಿ20 ಪಂದ್ಯಗಳಲ್ಲಿ ಆಡಿದ್ದಾರೆ. ತಂಡ ಇಂತಿದೆ: ಹಷ್ಮತ್‌ಉಲ್ಲಾ ಶಾಹೀದಿ (ನಾಯಕ), ರಹಮಾನುಲ್ಲಾ ಗುರ್ಬಾಝ್ (ವಿಕೆಟ್‌ ಕೀಪರ್‌), ಇಕ್ರಮ್‌ ಅಲಿಖಿಲ್‌ (ವಿಕೆಟ್‌ ಕೀಪರ್‌), ಇಬ್ರಾಹಿಂ ಜದ್ರಾನ್‌, ರಿಯಾಝ್ ಹಸನ್, ರಹಮತ್‌ ಷಾ, ನಜೀಬುಲ್ಲಾ ಜದ್ರಾನ್‌, ಮೊಹಮ್ಮದ್ ನಬಿ, ರಷೀದ್‌ ಖಾನ್, ಅಬ್ದುಲ್ ರಹಮಾನ್, ಶರ್ಫುದ್ದೀನ್ ಅಶ್ರಫ್, ಮುಜೀಬ್ ಉರ್ ರೆಹಮಾನ್, ನೂರ್ ಅಹ್ಮದ್, ಮೊಹಮ್ಮದ್‌ ಸಲೀಮ್ ಸಫಿ, ಫಜಲ್‌ ಹಕ್‌ ಫರೂಖಿ. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.