ವಿಶ್ವಕಪ್‌ ಕ್ರಿಕೆಟ್ ಟಿಕೆಟ್‌ ಇಂದಿನಿಂದ ಮಾರಾಟ- ಎಲ್ಲಿ ಲಭ್ಯ? ಬೆಂಗಳೂರು: ಏಕದಿನ ವಿಶ್ವಕಪ್‌ ಕ್ರಿಕೆಟ್‌ ಟೂರ್ನಿಯ ಪಂದ್ಯಗಳ ಟಿಕೆಟ್‌ಗಳನ್ನು ‘ಬುಕ್‌ಮೈ ಶೋ’ನಲ್ಲಿ ಹಂತಹಂತವಾಗಿ ಗುರುವಾರದಿಂದ (ಆ.24) ಮಾರಾಟ ಮಾಡಲಾಗುವುದು ಎಂದು ಬಿಸಿಸಿಐ ತಿಳಿಸಿದೆ. ಐಸಿಸಿ ವಾಣಿಜ್ಯ ಪಾಲುದಾರರಿಗೆ ಮತ್ತು ಮಾಸ್ಟರ್‌ಕಾರ್ಡ್‌ ಬಳಕೆದಾರರಿಗೆ ಮೊದಲ ಹಂತದಲ್ಲಿ ಟಿಕೆಟ್‌ ಲಭ್ಯವಾಗಲಿದೆ. ಬೆಂಗಳೂರಿನಲ್ಲಿ ನಡೆಯುವ ಪಂದ್ಯಗಳ ಟಿಕೆಟ್‌ಗಳು ಸೆ.2ರಿಂದ ಲಭ್ಯವಾಗಲಿದೆ. ಆಸ್ಟ್ರೇಲಿಯಾ– ಪಾಕಿಸ್ತಾನ, ನ್ಯೂಜಿಲೆಂಡ್‌– ಪಾಕಿಸ್ತಾನ, ಭಾರತ– ನೆದರ್ಲೆಂಡ್ಸ್‌ ನಡುವಿನ ಪಂದ್ಯಗಳ ಟಿಕೆಟ್ ಬೆಲೆ ‘ಸಿ’ ಸ್ಟ್ಯಾಂಡ್‌ನಲ್ಲಿ ₹4,720 (ಜಿಎಸ್‌ಟಿ ಸೇರಿದಂತೆ), ‘ಎಚ್‌’ ಸ್ಟ್ಯಾಂಡ್‌ನಲ್ಲಿ ₹885 (ಜಿಎಸ್‌ಟಿ ಸೇರಿದಂತೆ) ನಿಗದಿ ಮಾಡಲಾಗಿದೆ. ಇಂಗ್ಲೆಂಡ್‌– ಶ್ರೀಲಂಕಾ, ನ್ಯೂಜಿಲೆಂಡ್‌– ಶ್ರೀಲಂಕಾ ನಡುವಿನ ಪಂದ್ಯಗಳ ಟಿಕೆಟ್‌ ಬೆಲೆ ‘ಸಿ’ ಸ್ಟ್ಯಾಂಡ್‌ನಲ್ಲಿ ₹3,540 (ಜಿಎಸ್‌ಟಿ ಸೇರಿದಂತೆ), ‘ಎಚ್‌’ ಸ್ಟ್ಯಾಂಡ್‌ನಲ್ಲಿ ₹590 (ಜಿಎಸ್‌ಟಿ ಸೇರಿದಂತೆ) ನಿಗದಿ ಮಾಡಲಾಗಿದೆ. ಸಿ ಸ್ಟ್ಯಾಂಡ್‌ನಲ್ಲಿ 287, ಎಚ್ ಸ್ಟ್ಯಾಂಡ್‌ನಲ್ಲಿ 192 ಸೀಟುಗಳು ಲಭ್ಯ ಇವೆ. ಮಾಸ್ಟರ್‌ಕಾರ್ಡ್ ಬಳಕೆದಾರರಿಗೆ (ಸಂಜೆ 6ರಿಂದ): ಆ.24ರಿಂದ ಭಾರತ ತಂಡ ಹೊರತುಪಡಿಸಿ ಎಲ್ಲ ಪಂದ್ಯಗಳು: ಆ.29ರಿಂದ ಭಾರತದ ಎಲ್ಲ ಪಂದ್ಯಗಳು: ಸೆ.14ರಿಂದ ಸೆಮಿಫೈನಲ್ ಮತ್ತು ಫೈನಲ್‌. ಇತರ ಬಳಕೆದಾರರಿಗೆ (ರಾತ್ರಿ 8 ರಿಂದ): ಆ.25ರಿಂದ ಭಾರತ ತಂಡ ಹೊರಡು ಪಡಿಸಿ ಎಲ್ಲ ಪಂದ್ಯಗಳು ಮತ್ತು ಅಭ್ಯಾಸ ಪಂದ್ಯಗಳು: ಆ.30ರಿಂದ ಗುವಾಹಟಿ ಮತ್ತು ತಿರುವನಂತಪುರಂದಲ್ಲಿ ನಡೆಯುವ ಭಾರತದ ಅಭ್ಯಾಸ ಪಂದ್ಯಗಳು: ಆ.31ರಿಂದ ಚೆನ್ನೈ, ದೆಹಲಿ ಮತ್ತು ಪುಣೆಯಲ್ಲಿ ನಡೆಯಲಿರುವ ಭಾರತದ ಪಂದ್ಯಗಳು: ಸೆ.1ರಿಂದ ಧರ್ಮಶಾಲಾ, ಲಖನೌ ಮತ್ತು ಮುಂಬೈನಲ್ಲಿ ನಡೆಯುವ ಭಾರತದ ಪಂದ್ಯಗಳು: ಸೆ.2ರಿಂದ ಬೆಂಗಳೂರು ಮತ್ತು ಕೋಲ್ಕತ್ತ‌ದಲ್ಲಿ ನಡೆಯುವ ಭಾರತದ ಪಂದ್ಯಗಳು: ಸೆ.3ರಿಂದ ಅಹಮದಾಬಾದ್‌ನಲ್ಲಿ ನಡೆಯುವ ಭಾರತದ ಪಂದ್ಯ: ಸೆ.15ರಿಂದ ಸೆಮಿಫೈನಲ್ ಮತ್ತು ಫೈನಲ್‌ ಪಂದ್ಯ. = ‌ಭಾರತಕ್ಕೆ ಎರಡು ಅಭ್ಯಾಸ ಪಂದ್ಯ ವಿಶ್ವಕಪ್‌ ಟೂರ್ನಿಗೂ ಮುನ್ನ ಭಾರತ ಕ್ರಿಕೆಟ್‌ ತಂಡವು ಇಂಗ್ಲೆಂಡ್ ಮತ್ತು ನೆದರ್ಲೆಂಡ್ಸ್‌ ತಂಡದೊಂದಿಗೆ ಅಭ್ಯಾಸ ಪಂದ್ಯ ಆಡಲಿದೆ ಎಂದು ಐಸಿಸಿ ಬುಧವಾರ ತಿಳಿಸಿದೆ. ಸೆ.30ರಂದು ಗುವಾಹಟಿಯಲ್ಲಿ ನಡೆಯುವ ಮೊದಲ ಅಭ್ಯಾಸ ಪಂದ್ಯದಲ್ಲಿ ಭಾರತ ತಂಡವು ಹಾಲಿ ಚಾಂಪಿಯನ್‌ ಇಂಗ್ಲೆಂಡ್‌ ತಂಡವನ್ನು ಎದುರಿಸಲಿದೆ. ಅ.3ರಂದು ತಿರುವನಂತಪುರಂನಲ್ಲಿ ನೆದರ್ಲೆಂಡ್ಸ್‌ ತಂಡದೊಂದಿಗೆ ಎರಡನೇ ಅಭ್ಯಾಸ ಪಂದ್ಯ ಆಡಲಿದೆ. ಎರಡೂ ಪಂದ್ಯಗಳು ಮಧ್ಯಾಹ್ನ 2ಕ್ಕೆ ಆರಂಭವಾಗಲಿದೆ. ಇತರ ಅಭ್ಯಾಸ ಪಂದ್ಯಗಳು: ಸೆ.29ರಂದು ಬಾಂಗ್ಲಾದೇಶ- ಶ್ರೀಲಂಕಾ (ಗುವಾಹಟಿ), ದಕ್ಷಿಣ ಆಫ್ರಿಕಾ- ಅಫ್ಗಾನಿಸ್ತಾನ, (ತಿರುವನಂತಪುರಂ), ನ್ಯೂಜಿಲೆಂಡ್ - ಪಾಕಿಸ್ತಾನ (ಹೈದರಾಬಾದ್); ಸೆ.30ರಂದು ಭಾರತ- ಇಂಗ್ಲೆಂಡ್ (ಗುವಾಹಟಿ), ಆಸ್ಟ್ರೇಲಿಯಾ- ನೆದರ್ಲೆಂಡ್ಸ್‌ (ತಿರುವನಂತಪುರಂ); ಅ.2ರಂದು ಇಂಗ್ಲೆಂಡ್- ಬಾಂಗ್ಲಾದೇಶ (ಗುವಾಹಟಿ), ನ್ಯೂಜಿಲೆಂಡ್ - ದಕ್ಷಿಣ ಆಫ್ರಿಕಾ (ತಿರುವನಂತಪುರಂ); ಅ.3ರಂದು ಭಾರತ- ನೆದರ್ಲೆಂಡ್ಸ್‌ (ತಿರುವನಂತಪುರಂ), ಅಫ್ಗಾನಿಸ್ತಾನ- ಶ್ರೀಲಂಕಾ (ಗುವಾಹಟಿ), ಪಾಕಿಸ್ತಾನ- ಆಸ್ಟ್ರೇಲಿಯಾ (ಹೈದರಾಬಾದ್) ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.