ಮಹಾರಾಜ ಟ್ರೋಫಿ ಕ್ರಿಕೆಟ್: ಮಂಗಳೂರು ಡ್ರ್ಯಾಗನ್ಸ್‌ಗೆ ಜಯ ಬೆಂಗಳೂರು: ಎಡಗೈ ಬ್ಯಾಟರ್ ತಿಪ್ಪಾರೆಡ್ಡಿ ಅಮೋಘ ಬ್ಯಾಟಿಂಗ್ ಬಲದಿಂದ ಮಂಗಳೂರು ಡ್ರ್ಯಾಗನ್ಸ್‌ ತಂಡವು ಮಹಾರಾಜ ಟ್ರೋಫಿ ಕ್ರಿಕೆಟ್ ಟೂರ್ನಿಯ ಪಂದ್ಯದಲ್ಲಿ ಜಯಿಸಿತು. ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಗುರುವಾರ ನಡೆದ ಪಂದ್ಯದಲ್ಲಿ ಮಂಗಳೂರು ತಂಡವು 15 ರನ್‌ಗಳಿಂದ ಶಿವಮೊಗ್ಗ ಲಯನ್ಸ್ ವಿರುದ್ಧ ಜಯಿಸಿತು. ಟಾಸ್ ಗೆದ್ದ ಶಿವಮೊಗ್ಗ ತಂಡವು ಫೀಲ್ಡಿಂಗ್ ಆಯ್ಕೆ ಮಾಡಿಕೊಂಡಿತು. ಮಂಗಳೂರು ತಂಡವು ಆರಂಭದಲ್ಲಿಯೇ ಆಘಾತ ಅನುಭವಿಸಿತು. ಆದರೆ, ನಾಲ್ಕನೇ ಕ್ರಮಾಂಕದ ಬ್ಯಾಟರ್ ತಿಪ್ಪಾರೆಡ್ಡಿ (82; 47ಎ, 4X11, 6X2) ಮತ್ತು ಅನಿರುದ್ಧ ಜೋಶಿ (34; 20ಎ, 4X4, 6X1) ತಂಡಕ್ಕೆ ಆಸರೆಯಾದರು. ಇದರಿಂದಾಗಿ ಮಂಗಳೂರು 20 ಓವರ್‌ಗಳಲ್ಲಿ 7 ವಿಕೆಟ್‌ಗಳಿಗೆ 191 ರನ್‌ ಗಳಿಸಿತು. ಇದಕ್ಕುತ್ತರವಾಗಿ ಶಿವಮೊಗ್ಗ ಲಯನ್ಸ್ ತಂಡವು 20 ಓವರ್‌ಗಳಲ್ಲಿ 9 ವಿಕೆಟ್‌ಗಳಿಗೆ 176 ರನ್‌ ಗಳಿಸಿ ಸೋತಿತು. ಮಂಗಳೂರು ತಂಡದ ಬೌಲರ್‌ಗಳ ಸಂಘಟಿತ ಆಟವು ಮೇಲುಗೈ ಸಾಧಿಸಿತು. ಸಂಕ್ಷಿಪ್ತ ಸ್ಕೋರು: ಮಂಗಳೂರು ಡ್ರ್ಯಾಗನ್ಸ್: 20 ಓವರ್‌ಗಳಲ್ಲಿ 7 ವಿಕೆಟ್‌ಗಳಿಗೆ 191 (ತಿಪ್ಪಾರೆಡ್ಡಿ 82, ಅನಿರುದ್ಧ ಜೋಶಿ 34, ಶ್ರೇಯಸ್ ಗೋಪಾಲ್ 35ಕ್ಕೆ2, ಆದಿತ್ಯ ಸೋಮಣ್ಣ 38ಕ್ಕೆ3) ಶಿವಮೊಗ್ಗ ಲಯನ್ಸ್: 20 ಓವರ್‌ಗಳಲ್ಲಿ 9 ವಿಕೆಟ್‌ಗಳಿಗೆ 176 (ರೋಹನ್ ಕದಂ 25, ಕೆ. ರೋಹಿತ್ ಕುಮಾರ್ 23, ಅಭಿನವ್ ಮನೋಹರ್ 25, ಪ್ರಣವ್ ಭಾಟಿಯಾ 39, ಕ್ರಾಂತಿಕುಮಾರ್ 21, ಸಂಕಲ್ಪ ಶೆಟ್ಟೆಪ್ಪನವರ 37ಕ್ಕೆ2, ಆನಂದ ದೊಡ್ಡಮನಿ 31ಕ್ಕೆ2, ಪಾರಸ್ ಗುರುಭಕ್ಷ್ ಆರ್ಯ 29ಕ್ಕೆ2) ಫಲಿತಾಂಶ: ಮಂಗಳೂರು ಡ್ರ್ಯಾಗನ್ಸ್‌ಗೆ 15 ರನ್‌ ಜಯ. ಬೆಂಗಳೂರು ಬ್ಲಾಸ್ಟರ್ಸ್: 19.3 ಓವರ್‌ಗಳಲ್ಲಿ 113 (ಡಿ. ನಿಶ್ಚಲ್ 36, ಮಯಂಕ್ ಅಗರವಾಲ್ 15, ಸೂರಜ್ ಅಹುಜಾ 15, ಅಮನ್ ಖಾನ್ ಔಟಾಗದೆ 18, ಅಭಿಲಾಷ್ ಶೆಟ್ಟಿ 19ಕ್ಕೆ3, ಶರಣ್ ಗೌಡ 28ಕ್ಕೆ2, ಡಿ. ಅವಿನಾಶ್ 22ಕ್ಕೆ3) ಗುಲ್ಬರ್ಗ ಮಿಸ್ಟಿಕ್ಸ್: 14.5 ಓವರ್‌ಗಳಲ್ಲಿ 5 ವಿಕೆಟ್‌ಗಳಿಗೆ 114 (ಎಲ್‌.ಆರ್. ಚೇತನ್ 18, ಮೆಕ್‌ನಿಲ್ ಹ್ಯಾಡ್ಲಿ ನರೋನಾ 28, ಆರ್. ಸ್ಮರಣ್ 29, ಶುಭಾಂಗ್ ಹೆಗ್ಡೆ 28ಕ್ಕೆ1) ಫಲಿತಾಂಶ: ಗುಲ್ಬರ್ಗ ಮಿಸ್ಟಿಕ್ಸ್‌ಗೆ 5 ವಿಕೆಟ್‌ ಜಯ. ಇಂದಿನ ಪಂದ್ಯಗಳು ಮೈಸೂರು ವಾರಿಯರ್ಸ್–ಬೆಂಗಳೂರು ಬ್ಲಾಸ್ಟರ್ಸ್ (ಮಧ್ಯಾಹ್ನ 1) ಶಿವಮೊಗ್ಗ ಲಯನ್ಸ್–ಹುಬ್ಬಳ್ಳಿ ಟೈಗರ್ಸ್ (ಸಂಜೆ 5.30) ನೇರಪ್ರಸಾರ: ಸ್ಟಾರ್‌ ಸ್ಪೋರ್ಟ್ಸ್ ಕನ್ನಡ, ಫ್ಯಾನ್‌ಕೋಡ್ ಆ್ಯಪ್ - - ಬೆಂಗಳೂರಿಗೆ ಮತ್ತೊಂದು ಸೋಲು ಮಯಂಕ್ ಅಗರವಾಲ್ ನಾಯಕತ್ವದ ಬೆಂಗಳೂರು ಬ್ಲಾಸ್ಟರ್ಸ್ ತಂಡವು ಸತತ ಎಂಟನೇ ಪಂದ್ಯದಲ್ಲಿ ಸೋತಿತು. ಗುರುವಾರ ನಡೆದ ಪಂದ್ಯದಲ್ಲಿ ಗುಲ್ಬರ್ಗ ಮಿಸ್ಟಿಕ್ಸ್ ತಂಡವು 5 ವಿಕೆಟ್‌ಗಳಿಂದ ಬೆಂಗಳೂರು ತಂಡವನ್ನು ಸೋಲಿಸಿತು. ಅಭಿಲಾಷ್ ಶೆಟ್ಟಿ (19ಕ್ಕೆ3) ಮತ್ತು ಡಿ. ಅವಿನಾಶ್ (22ಕ್ಕೆ3) ಅವರ ಅಮೋಘ ಬೌಲಿಂಗ್ ಬಲದಿಂದ ಗುಲ್ಬರ್ಗ ತಂಡವು ಬೆಂಗಳೂರನ್ನು 113 ರನ್‌ಗಳ ಸಾಧಾರಣ ಮೊತ್ತಕ್ಕೆ ಕಟ್ಟಿಹಾಕಿತು. ಗುರಿ ಬೆನ್ನತ್ತಿದ ಗುಲ್ಬರ್ಗ ತಂಡವು 14.5 ಓವರ್‌ಗಳಲ್ಲಿ 5 ವಿಕೆಟ್‌ಗಳಿಗೆ 114 ರನ್ ಗಳಿಸಿ ಜಯಿಸಿತು. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.