ಮಹಾರಾಜ ಟ್ರೋಫಿ ಕ್ರಿಕೆಟ್: ನಾಲ್ಕರ ಘಟ್ಟಕ್ಕೆ ಹುಬ್ಬಳ್ಳಿ, ಮೈಸೂರು ಬೆಂಗಳೂರು: ಹುಬ್ಬಳ್ಳಿ ಟೈಗರ್ಸ್ ಮತ್ತು ಮೈಸೂರು ವಾರಿಯರ್ಸ್ ತಂಡಗಳು ಮಹಾರಾಜ ಟ್ರೋಫಿ ಟಿ20 ಕ್ರಿಕೆಟ್ ಟೂರ್ನಿಯ ಸೆಮಿಫೈನಲ್ ಪ್ರವೇಶಿಸಿದವು. ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಶನಿವಾರ ನಡೆದ ಲೀಗ್ ಹಂತದ ಕೊನೆಯ ಪಂದ್ಯದಲ್ಲಿ ಮನ್ವಂತ್‌ ಕುಮಾರ್ (33ಕ್ಕೆ5) ಅವರ ಉತ್ತಮ ಬೌಲಿಂಗ್‌ನಿಂದ ಹುಬ್ಬಳ್ಳಿ ತಂಡವು 5 ವಿಕೆಟ್‌ಗಳಿಂದ ಮಂಗಳೂರು ಡ್ರ್ಯಾಗನ್ಸ್ ವಿರುದ್ಧ ಗೆದ್ದಿತು. ಒಟ್ಟು 16 ಅಂಕಗಳೊಂದಿಗೆ ಪ್ರಥಮ ಸ್ಥಾನ ಪಡೆದು ನಾಲ್ಕರ ಘಟ್ಟಕ್ಕೆ ಸಾಗಿತು. ಇನ್ನೊಂದು ಪಂದ್ಯದಲ್ಲಿ ಮೈಸೂರು ತಂಡವು 8 ವಿಕೆಟ್‌ಗಳಿಂದ ಜಯಿಸಿತು. 12 ಅಂಕಗಳೊಂದಿಗೆ ಸೆಮಿಫೈನಲ್ ಪ್ರವೇಶಿಸಿತು. ಸಂಕ್ಷಿಪ್ತ ಸ್ಕೋರು: ಮಂಗಳೂರು ಡ್ರ್ಯಾಗನ್ಸ್: 20 ಓವರ್‌ಗಳಲ್ಲಿ 9 ವಿಕೆಟ್‌ಗಳಿಗೆ 167 (ಬಿ.ಆರ್. ಶರತ್ 40, ರೋಹನ್ ಪಾಟೀಲ 34, ಸಿದ್ಧಾರ್ಥ್ 53, ಎಲ್. ಮನ್ವಂತಕುಮಾರ್ 33ಕ್ಕೆ5, ಲವಿಶ್ ಕೌಶಲ್ 26ಕ್ಕೆ2) ಹುಬ್ಬಳ್ಳಿ ಟೈಗರ್ಸ್: 18.2 ಓವರ್‌ಗಳಲ್ಲಿ 5 ವಿಕೆಟ್‌ಗಳಿಗೆ 170 (ಮೊಹಮ್ಮದ್ ತಾಹ 51, ಮನೀಷ್ ಪಾಂಡೆ 56, ಬಿ. ಮೋಃಇತ್ ಔಟಾಗದೆ 20, ಆನಂದ ದೊಡ್ಡಮನಿ 34ಕ್ಕೆ3) ಫಲಿತಾಂಶ:ಹುಬ್ಬಳ್ಳಿ ಟೈಗರ್ಸ್‌ಗೆ 5 ವಿಕೆಟ್‌ಗಳ ಜಯ. ಗುಲ್ಬರ್ಗ ಮಿಸ್ಟಿಕ್ಸ್: 20 ಓವರ್‌ಗಳಲ್ಲಿ 7 ವಿಕೆಟ್‌ಗಳಿಗೆ 153 (ಎಲ್‌.ಆರ್. ಚೇತನ್ 34, ಮೈಕೆಲ್ ನರೋನಾ 25, ಶ್ರೀನಿವಾಸ್ ಶರತ್ 26, ಜೆ. ಸುಚಿತ್ 28ಕ್ಕೆ3, ಕುಶಾಲ್ ವಾಧ್ವಾನಿ 17ಕ್ಕೆ2) ಮೈಸೂರು ವಾರಿಯರ್ಸ್: 18 ಓವರ್‌ಗಳಲ್ಲಿ 2 ವಿಕೆಟ್‌ಗಳಿಗೆ154 (ಎಸ್‌.ಯು. ಕೃತಿಕ್ 20, ಆರ್. ಸಮರ್ಥ್ ಔಟಾಗದೆ 62, ಕರುಣ್ ನಾಯರ್ 23, ಕೆ.ಎಸ್. ಲಂಕೇಶ್ ಔಟಾಗದೆ 39, ಹಾರ್ದಿಕ್ ರಾಜ್ 30ಕ್ಕೆ2) ಫಲಿತಾಂಶ:ಮೈಸೂರು ವಾರಿಯರ್ಸ್ ತಂಡಕ್ಕೆ 8 ವಿಕೆಟ್‌ಗಳ ಜಯ. ಇಂದಿನ ಪಂದ್ಯಗಳು ಮಂಗಳೂರು ಡ್ರ್ಯಾಗನ್ಸ್–ಗುಲ್ಬರ್ಗ ಮಿಸ್ಟಿಕ್ಸ್ (ಮಧ್ಯಾಹ್ನ 1) ಬೆಂಗಳೂರು ಬ್ಲಾಸ್ಟರ್ಸ್–ಶಿವಮೊಗ್ಗ ಲಯನ್ಸ್ (ಸಂಜೆ 5.30) ನೇರಪ್ರಸಾರ: ಸ್ಟಾರ್ ಸ್ಪೋರ್ಟ್ಸ್ ಕನ್ನಡ, ಫ್ಯಾನ್‌ಕೋಡ್ ಆ್ಯಪ್. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.