ಕಾರು ಅಪಘಾತದಲ್ಲಿ ರಿಷಭ್‌ ಪಂತ್‌ಗೆ ಗಾಯ ನವದೆಹಲಿ/ ಡೆಹ್ರಾಡೂನ್‌: ಭಾರತ ಕ್ರಿಕೆಟ್‌ ತಂಡದ ವಿಕೆಟ್‌ಕೀಪರ್ ಬ್ಯಾಟರ್ ರಿಷಭ್‌ ಪಂತ್‌ ಅವರು ದೆಹಲಿ–ಡೆಹ್ರಾಡೂನ್‌ ಹೆದ್ದಾರಿಯಲ್ಲಿ ಶುಕ್ರವಾರ ಬೆಳಿಗ್ಗೆ ಸಂಭವಿಸಿದ ಕಾರು ಅಪಘಾತದಲ್ಲಿ ಗಾಯಗೊಂಡಿದ್ದು, ಪವಾಡಸದೃಶ ರೀತಿಯಲ್ಲಿ ಪ್ರಾಣಾ‍‍ಪಾಯದಿಂದ ಪಾರಾಗಿದ್ದಾರೆ. 25 ವರ್ಷದ ಪಂತ್‌ ಚಾಲನೆ ಮಾಡುತ್ತಿದ್ದ ಮರ್ಸಿಡಿಸ್‌ ಬೆಂಜ್‌ ಕಾರು ಹೆದ್ದಾರಿಯ ವಿಭಜಕಕ್ಕೆ ಡಿಕ್ಕಿಯಾಗಿ ಬೆಂಕಿ ಹೊತ್ತಿಕೊಂಡು ಉರಿದಿದೆ. ಬೆಂಕಿ ಆವರಿಸುವ ಮುನ್ನವೇ ಕಾರಿನಿಂದ ಹೊರಬರುವಲ್ಲಿ ಪಂತ್‌ ಯಶಸ್ವಿಯಾಗಿದ್ದಾರೆ. ‘ಉತ್ತರಾಖಂಡದ ಹರಿದ್ವಾರ ಜಿಲ್ಲೆಯ ಮಂಗ್ಲೋರ್‌ಬಳಿ ಬೆಳಿಗ್ಗೆ 5.30ಕ್ಕೆ ದುರ್ಘಟನೆ ನಡೆದಿದೆ.ಹರಿಯಾಣಸಾರಿಗೆ ಸಂಸ್ಥೆಗೆ ಸೇರಿದ ಬಸ್‌ ಚಾಲಕ ಹಾಗೂಪ್ರಯಾಣಿಕರು ಪಂತ್‌ ಅವರನ್ನು ಕಾರಿನಿಂದ ಹೊರತರುವಲ್ಲಿ ನೆರವಾಗಿದ್ದಾರೆ’ ಎಂದು ಹರಿದ್ವಾರ ಎಸ್‌ಪಿ ಅಜಯ್‌ ಸಿಂಗ್‌ ಹೇಳಿದ್ದಾರೆ. ಪಂತ್‌ ಅವರ ತಲೆ, ಕಾಲು, ಬಲಗೈ ಹಾಗೂ ಬೆ‌ನ್ನಿಗೆ ಗಾಯಗಳಾಗಿವೆ. ಅವರು ಉತ್ತರಾಖಂಡದ ರೂರ್ಕಿಯಲ್ಲಿರುವ ತಮ್ಮ ಮನೆಗೆ ಪ್ರಯಾಣಿಸುತ್ತಿದ್ದರು. क्रिकेटर ऋषभ पंत का रुड़की में रोड एक्सीडेंट,अस्पताल में भर्ती।# ../wdOM7OOrds ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.