2023 | ಕೆಕೆಆರ್ ವಿರುದ್ಧ ಟಾಸ್ ಗೆದ್ದ ಡೆಲ್ಲಿ, ಬೌಲಿಂಗ್ ಆಯ್ಕೆ ನವದೆಹಲಿ: ಇಂಡಿಯನ್ ಪ್ರೀಮಿಯರ್ ಲೀಗ್‌ನ (ಐಪಿಎಲ್) 27ನೇ ಪಂದ್ಯದಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ಹಾಗೂ ಕೋಲ್ಕತ್ತ ನೈಟ್‌ ರೈಡರ್ಸ್ ತಂಡಗಳು ಮುಖಾಮುಖಿಯಾಗಿವೆ. ಫಿರೋಜ್ ಶಾ ಕೋಟ್ಲಾ ಅಂಗಣದಲ್ಲಿ ನಡೆಯುತ್ತಿರುವ ಪಂದ್ಯದಲ್ಲಿ ಕೋಲ್ಕತ್ತ ವಿರುದ್ಧ ಟಾಸ್ ಗೆದ್ದಿರುವ ಡೆಲ್ಲಿ, ಬೌಲಿಂಗ್ ಆಯ್ಕೆ ಮಾಡಿಕೊಂಡಿದೆ. ಡೆಲ್ಲಿ ಕ್ಯಾಪಿಟಲ್ಸ್ ತಂಡ ಈ ಬಾರಿಯ ಐಪಿಎಲ್‌ ಕ್ರಿಕೆಟ್‌ ಟೂರ್ನಿಯಲ್ಲಿ ಮೊದಲ ಜಯದ ನಿರೀಕ್ಷೆಯಲ್ಲಿದೆ. ಡೇವಿಡ್‌ ವಾರ್ನರ್‌ ನಾಯಕತ್ವದ ಡೆಲ್ಲಿ ತಂಡವು ಆಡಿದ ಎಲ್ಲ ಐದೂ ಪಂದ್ಯಗಳಲ್ಲಿ ನಿರಾಸೆ ಅನುಭವಿಸಿದೆ. ಈ ಪಂದ್ಯದಲ್ಲೂ ಸೋತರೆ ಆ ತಂಡದ ಪ್ಲೇ ಆಫ್ ಪ್ರವೇಶದ ಬಾಗಿಲು ಬಹುತೇಕ ಮುಚ್ಚಿದಂತೆ. ಹೀಗಾಗಿ ಡೆಲ್ಲಿ ತಂಡಕ್ಕೆ ‘ಮಾಡು ಇಲ್ಲವೇ ಮಡಿ’ ಹಣಾಹಣಿ. ಪೃಥ್ವಿ ಬ್ಯಾಟಿಂಗ್‌ ಚಿಂತೆ: ಪ್ರತಿಭಾನ್ವಿತ ಆರಂಭಿಕ ಬ್ಯಾಟರ್‌, 23 ವರ್ಷದ ಪೃಥ್ವಿ ಶಾ ಅವರು ರನ್‌ ಬರ ಎದುರಿಸುತ್ತಿರುವುದು ಡೆಲ್ಲಿ ತಂಡದ ಕಳವಳಕ್ಕೆ ಕಾರಣವಾಗಿದೆ. ಐದು ಪಂದ್ಯಗಳಲ್ಲಿ ಅವರ ಗಳಿಕೆ ಕೇವಲ 34 ರನ್. ಆಡುವ 11ರ ಬಳಗದಲ್ಲಿ ಅವರ ಸ್ಥಾನ ಅಲುಗಾಡುವಂತಾಗಿದೆ. ಹೀಗಾಗಿ ವಿಕೆಟ್‌ ಕೀಪರ್ ಬ್ಯಾಟರ್‌ ಸರ್ಫರಾಜ್ ಖಾನ್ ಅವರನ್ನು ಆರಂಭಿಕರಾಗಿ ಕಣಕ್ಕಿಳಿಸಬಹುದು. ಐದು ಪಂದ್ಯಗಳಲ್ಲಿ ಕೋಲ್ಕತ್ತ ಎರಡು ಗೆದ್ದು, ಮೂರರಲ್ಲಿ ಸೋತಿದೆ. ನಾಯಕ ನಿತೀಶ್‌ ರಾಣಾ, ಮಧ್ಯಮ ಕ್ರಮಾಂಕದಲ್ಲಿ ರಿಂಕು ಸಿಂಗ್‌, ವೆಸ್ಟ್‌ ಇಂಡೀಸ್‌ನ ಆ್ಯಂಡ್ರೆ ರಸೆಲ್‌ ಅವರು, ಎನ್ರಿಚ್‌ ನಾಕಿಯಾ ಹಾಗೂ ಮುಸ್ತಫಿಜುರ್‌ ನೇತೃತ್ವದ ಡೆಲ್ಲಿ ಬೌಲಿಂಗ್‌ ಪಡೆಯ ದಾಳಿಯನ್ನು ಪುಡಿಗಟ್ಟುವ ಸಾಮರ್ಥ್ಯವುಳ್ಳವರು. ಓದಿ... 2023 | ಮೊಹಮ್ಮದ್ ಸಿರಾಜ್ ದಾಳಿಗೆ ಪಂಜಾಬ್ ತತ್ತರ, ಆರ್‌ಸಿಬಿಗೆ ಭರ್ಜರಿ ಜಯ 🚨 🚨@ @. ▶️ ://./ # | # ../WopA9ZSaJO ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.