1st : ಮೊದಲ ದಿನವೇ ಹಲವು ದಾಖಲೆ ಬರೆದ ಅಶ್ವಿನ್ ರೊಸೆಯು, ಡಾಮ್ನಿಕಾ: ಅತಿಥೇಯ ವೆಸ್ಟ್ ಇಂಡೀಸ್ ವಿರುದ್ಧ ನಡೆಯುತ್ತಿರುವ ಮೊದಲ ಟೆಸ್ಟ್ ಪಂದ್ಯದಲ್ಲಿ ಐದು ವಿಕೆಟ್ ಗಳಿಸಿರುವ ಭಾರತದ ಆಫ್ ಸ್ಪಿನ್ನರ್ ರವಿಚಂದ್ರನ್ ಅಶ್ವಿನ್, ಅಂತರರಾಷ್ಟ್ರೀಯ ಕ್ರಿಕೆಟ್‌ನಲ್ಲಿ 700 ವಿಕೆಟ್ ಸಾಧನೆ ಮಾಡಿದ್ದಾರೆ. ಈ ಮೂಲಕ ಮಾಜಿ ದಿಗ್ಗಜರಾದ ಅನಿಲ್ ಕುಂಬ್ಳೆ ಹಾಗೂ ಹರಭಜನ್ ಸಿಂಗ್ ಸಾಲಿಗೆ ಸೇರಿರುವ ಅಶ್ವಿನ್, ಅಂತರರಾಷ್ಟ್ರೀಯ ಕ್ರಿಕೆಟ್‌ನಲ್ಲಿ 700ಕ್ಕೂ ಅಧಿಕ ವಿಕೆಟ್ ಗಳಿಸಿದ ಭಾರತದ ಮೂರನೇ ಬೌಲರ್ ಎನಿಸಿದ್ದಾರೆ. ಮುತ್ತಯ್ಯ ಮುರಳೀಧರನ್: 1347 ಶೇನ್ ವಾರ್ನ್: 1001 ಜೇಮ್ಸ್ ಆ್ಯಂಡರ್ಸನ್: 975 ಅನಿಲ್ ಕುಂಬ್ಳೆ: 956 ಗ್ಲೆನ್ ಮೆಕ್‌ಗ್ರಾಥ್: 949 ವಾಸೀಂ ಅಕ್ರಂ: 916 ಸ್ಟುವರ್ಟ್ ಬ್ರಾಡ್: 841 ಶಾನ್ ಪೊಲ್ಲಾಕ್: 829 ವಕಾರ್ ಯೂನಿಸ್: 789 ಚಮಿಂಡ ವಾಸ್: 761 ಕರ್ಟ್ನಿ ವಾಲ್ಶ್‌: 746 ಬ್ರೆಟ್ ಲೀ: 718 ಟಿಮ್ ಸೌಥಿ: 714 ಹರಭಜನ್ ಸಿಂಗ್: 711 ಡೇನಿಯಲ್‌ ವೆಟೋರಿ: 705 ರವಿಚಂದ್ರನ್ ಅಶ್ವಿನ್: 700* (ಮಾಹಿತಿ: ಕ್ರಿಕ್‌ಇನ್ಫೋ) ' . 5 🔥# # ../l6X6wFBxe0 ಸಕ್ರಿಯ ಆಟಗಾರರ ಪೈಕಿ ಟೆಸ್ಟ್ ಕ್ರಿಕೆಟ್‌ನಲ್ಲಿ ಇನಿಂಗ್ಸ್‌ವೊಂದರಲ್ಲಿ ಅತಿ ಹೆಚ್ಚು ಸಲ (33) ಐದು ವಿಕೆಟ್ ಗಳಿಸಿದ ಖ್ಯಾತಿಗೂ ಅಶ್ವಿನ್ ಭಾಜನರಾಗಿದ್ದಾರೆ. ಇಂಗ್ಲೆಂಡ್‌ನ ಜೇಮ್ಸ್ ಆ್ಯಂಡರ್ಸನ್ ದಾಖಲೆಯನ್ನು ಅಶ್ವಿನ್ ಮುರಿದಿದ್ದಾರೆ. ಟೆಸ್ಟ್ ಕ್ರಿಕೆಟ್‌ನಲ್ಲಿ ಇನಿಂಗ್ಸ್‌ವೊಂದರಲ್ಲಿ ಅತಿ ಹೆಚ್ಚು ಸಲ ಐದು ವಿಕೆಟ್ ಸಾಧನೆ: ಮುತ್ತಯ್ಯ ಮುರಳೀಧರನ್: 67 ಶೇನ್ ವಾರ್ನ್: 37 ರಿಚರ್ಡ್ ಹಾಡ್ಲಿ: 36 ಅನಿಲ್ ಕುಂಬ್ಳೆ: 35 ರಂಗನಾ ಹೆರಾತ್: 34 ಆರ್. ಅಶ್ವಿನ್: 33 ಜೇಮ್ಸ್ ಆ್ಯಂಡರ್ಸನ್: 32 , ? , @ashwinravi99 😎 🎥🔽 # | # ../5iYQS7XlyR ಟೆಸ್ಟ್ ವೃತ್ತಿ ಜೀವನದಲ್ಲಿ ಅಪ್ಪ ಹಾಗೂ ಮಗನ ವಿಕೆಟ್ ಕಬಳಿಸಿದ ಮೊದಲ ಭಾರತೀಯ ಬೌಲರ್ ಎಂಬ ವಿಶಿಷ್ಟ ದಾಖಲೆಗೂ ಅಶ್ವಿನ್ ಭಾಜನರಾದರು. 2011ರಿಂದ 2013ರ ವರೆಗೆ ಮಾಜಿ ವಿಂಡೀಸ್ ಆಟಗಾರ ಶಿವನಾರಾಯಣ ಚಂದ್ರಪಾಲ್ ಅವರನ್ನು ನಾಲ್ಕು ಸಲ ಔಟ್ ಮಾಡಿರುವ ಅಶ್ವಿನ್ ಈಗ ಅವರ ಮಗ ತೇಜನಾರಾಯಣ ಚಂದ್ರಪಾಲ್ ಅವರ ವಿಕೆಟ್ ಕಬಳಿಸಿದ್ದಾರೆ. ಒಟ್ಟಾರೆಯಾಗಿ ಟೆಸ್ಟ್‌ನಲ್ಲಿ ಈ ಸಾಧನೆ ಮಾಡಿದ ಐದನೇ ಬೌಲರ್ ಎನಿಸಿದ್ದಾರೆ. ! #! 💪 💪 5⃣ @ashwinravi99 3⃣ @ 1⃣ @ & @ ▶️ ://./FWI05P4Bnd # ../unZMSm3L0B ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.