ಟೆಸ್ಟ್‌: ಮೂರನೇ ದಿನದ ಅಂತ್ಯಕ್ಕೆ ವಿಂಡೀಸ್‌ 229 ರನ್‌, ಜಡೇಜಗೆ 2 ವಿಕೆಟ್‌ ಪೋರ್ಟ್‌ ಆಫ್‌ ಸ್ಪೇನ್: ಟ್ರಿನಿಡಾಡ್‌ನ ಪೋರ್ಟ್ ಆಫ್ ಸ್ಪೇನ್‌ನಲ್ಲಿ ಅತಿಥೇಯ ವೆಸ್ಟ್ ಇಂಡೀಸ್ ವಿರುದ್ಧ ನಡೆಯುತ್ತಿರುವ ಎರಡನೇ ಹಾಗೂ ಅಂತಿಮ ಟೆಸ್ಟ್ ಪಂದ್ಯದಲ್ಲಿ ವಿಂಡೀಸ್‌ ನಾಯಕ ಕ್ರೆಗ್‌ ಬ್ರಾತ್‌ವೇಟ್ ಅವರ ಅರ್ಧಶತಕದ ನೆರವಿನಿಂದ ವೆಸ್ಟ್‌ ಇಂಡೀಸ್‌ ತಂಡ ಮರುಹೋರಾಟ ನಡೆಸಿದೆ. 3 # ! # 5 👍 👍 4 . ▶️ ://./d6oETzoH1Z ../weflaQIWy1 ಭಾರತ ತಂಡವು ಮೊದಲ ಇನಿಂಗ್ಸ್‌ನಲ್ಲಿ ಗಳಿಸಿರುವ 438 ರನ್‌ಗಳಿಗೆ ಉತ್ತರವಾಗಿ ಆಡುತ್ತಿರುವ ಆತಿಥೇಯ ತಂಡವು ಮೂರನೇ ದಿನದ ಅಂತ್ಯಕ್ಕೆ 108 ಓವರ್‌ಗಳಲ್ಲಿ 5 ವಿಕೆಟ್‌ಗಳಿಗೆ 229 ರನ್‌ ಗಳಿಸಿದೆ. ಆತಿಥೇಯ ತಂಡ ಇನ್ನೂ 209 ರನ್‌ಗಳ ಹಿನ್ನಡೆಯಲ್ಲಿದೆ. ಪದಾರ್ಪಣೆ ಪಂದ್ಯ ಆಡುತ್ತಿರುವ ಮುಕೇಶ್ ಕುಮಾರ್ ಮತ್ತು ಸ್ಪಿನ್ನರ್‌ ಆರ್‌.ಅಶ್ವಿನ್‌ ತಲಾ ಒಂದು ವಿಕೆಟ್ ಗಳಿಸಿದರು. ರವೀಂದ್ರ ಜಡೇಜ ಎರಡು ವಿಕೆಟ್‌ ಪಡೆದರು. ಮೊದಲ ಇನಿಂಗ್ಸ್: ಭಾರತ: 128 ಓವರ್‌ಗಳಲ್ಲಿ 438. ವೆಸ್ಟ್ ಇಂಡೀಸ್: 108 ಓವರ್‌ಗಳಲ್ಲಿ 5 ವಿಕೆಟ್‌ಗಳಿಗೆ 229 (ಕ್ರೇಗ್ ಬ್ರಾತ್‌ವೇಟ್ 75, ತೇಜನಾರಾಯಣ ಚಂದ್ರಪಾಲ್ 33, ಕಿರ್ಕ್ ಮೆಕೆಂಜಿ 32, ಜರ್ಮೈನ್‌ ಬ್ಲಾಕ್‌ವುಡ್‌ 20, ಡಿ ಸಿಲ್ವಾ 10, ಅಲಿಕ್‌ ಅಥನೇಜ್‌ ಬ್ಯಾಟಿಂಗ್‌ 37, ಹೊಲ್ಡರ್‌ ಬ್ಯಾಟಿಂಗ್‌ 11) ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.