2nd : ಭಾರತ ವಿರುದ್ಧದ ಅಂತಿಮ ಟೆಸ್ಟ್‌ಗೆ ವಿಂಡೀಸ್ ತಂಡ ಪ್ರಕಟ ಟ್ರಿನಿಡಾಡ್: ಪ್ರವಾಸಿ ಭಾರತ ವಿರುದ್ಧ ನಡೆಯಲಿರುವ ಎರಡನೇ ಹಾಗೂ ಅಂತಿಮ ಟೆಸ್ಟ್ ಪಂದ್ಯಕ್ಕೆ ಅತಿಥೇಯ ವೆಸ್ಟ್ ಇಂಡೀಸ್ ತಂಡವನ್ನು ಪ್ರಕಟಿಸಲಾಗಿದೆ. 13 ಸದಸ್ಯರ ಬಳಗದಲ್ಲಿ ಇದೇ ಮೊದಲ ಬಾರಿಗೆ ಆಫ್ ಸ್ಪಿನ್ನರ್ ಕೆವಿನ್ ಸಿಂಕ್ಲೇರ್ ಅವರಿಗೆ ಸ್ಥಾನ ನೀಡಲಾಗಿದೆ. ಅವರಿಗೆ ಆಲ್‌ರೌಂಡರ್ ರೇಮನ್ ರೈಪರ್ ತಮ್ಮ ಸ್ಥಾನ ಬಿಟ್ಟುಕೊಟ್ಟಿದ್ದಾರೆ. ಮೊದಲ ಟೆಸ್ಟ್‌ನಲ್ಲಿ ರೇಮನ್ ಕಳಪೆ (4 ಹಾಗೂ 11) ಪ್ರದರ್ಶನ ನೀಡಿದ್ದರು. ಮತ್ತೊಂದೆಡೆ ಕೆವಿನ್ ಸಿಂಕ್ಲೇರ್, ಈಗಾಗಲೇ ಏಳು ಏಕದಿನ ಹಾಗೂ ಆರು ಟ್ವೆಂಟಿ-20 ಪಂದ್ಯಗಳಲ್ಲಿ ವಿಂಡೀಸ್ ತಂಡವನ್ನು ಪ್ರತಿನಿಧಿಸಿದ್ದಾರೆ. - . ⬇️://./D2LpHALsMy ಡೊಮಿನಿಕಾದಲ್ಲಿ ನಡೆದ ಮೊದಲ ಟೆಸ್ಟ್ ಪಂದ್ಯದಲ್ಲಿ ಇನಿಂಗ್ಸ್ ಹಾಗೂ 141 ರನ್ ಅಂತರದ ಗೆಲುವು ದಾಖಲಿಸಿದ್ದ ಟೀಮ್ ಇಂಡಿಯಾ, 1-0 ಅಂತರದ ಮುನ್ನಡೆ ಗಳಿಸಿತ್ತು. ಈ ಮೂಲಕ ಐಸಿಸಿ ಟೆಸ್ಟ್ ಚಾಂಪಿಯನ್‌ಶಿಪ್‌ನ ಹೊಸ ಆವೃತ್ತಿಯಲ್ಲಿ ಗೆಲುವಿನೊಂದಿಗೆ ಶುಭಾರಂಭ ಮಾಡಿಕೊಂಡಿರುವ ರೋಹಿತ್ ಶರ್ಮಾ ಪಡೆ, ಈಗ ವಿಂಡೀಸ್ ವಿರುದ್ಧ ಸರಣಿ ಗೆಲುವಿನತ್ತ ಕಣ್ಣಾಯಿಸಿದೆ. ವೆಸ್ಟ್‌ ಇಂಡೀಸ್ ತಂಡ ಇಂತಿದೆ: ಕ್ರೇಗ್ ಬ್ರಾತ್‌ವೇಟ್ (ನಾಯಕ), ಜರ್ಮೈನ್ ಬ್ಲ್ಯಾಕ್‌ವುಡ್ (ಉಪನಾಯಕ), ಅಲಿಕ್ ಅಥನೇಜ್, ತೇಜನಾರಾಯಣ ಚಂದ್ರಪಾಲ್, ರಹಕೀಮ್ ಕಾರ್ನ್‌ವಾಲ್, ಜೋಶುವ ಡಿ ಸಿಲ್ವಾ, ಶಾನನ್ ಗೇಬ್ರಿಯಲ್, ಜೇಸನ್ ಹೋಲ್ಡರ್, ಅಲ್ಜಾರಿ ಜೋಸೆಫ್, ಕಿರ್ಕ್ ಮೆಕೆಂಜಿ, ಕೇಮರ್ ರೂಚ್, ಜೊಮೆಲ್ ವ್ಯಾರಿಕನ್ ಮತ್ತು ಕೆವಿನ್ ಸಿಂಕ್ಲೇರ್. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.