: ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಮುಖ್ಯ ಕೋಚ್ ಆಗಿ ಆ್ಯಂಡಿ ಫ್ಲವರ್ ನೇಮಕ ಬೆಂಗಳೂರು: ಐಪಿಎಲ್‌ನ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಮುಖ್ಯ ಕೋಚ್ ಆಗಿ ಜಿಂಬಾಬ್ವೆಯ ಆ್ಯಂಡಿ ಫ್ಲವರ್ ಅವರನ್ನು ನೇಮಕ ಮಾಡಲಾಗಿದೆ. ತಂಡದ ಕ್ರಿಕೆಟ್ ಕಾರ್ಯಾಚರಣೆಯ ನಿರ್ದೇಶಕ ಮೈಕ್ ಹೆಸನ್ ಮತ್ತು ಮುಖ್ಯ ಕೋಚ್ ಆಗಿದ್ದ ಸಂಜಯ್ ಬಂಗಾರ್ ಅವರ ಒಪ್ಪಂದಗಳನ್ನು ನವೀಕರಿಸದಿರಲು ನಿರ್ಧರಿಸಿದ ನಂತರ ಆರ್‌ಸಿಬಿ ಈ ಹೊಸ ತೀರ್ಮಾನ ಕೈಗೊಂಡಿದೆ ಎಂದು ಇಎಸ್‌ಪಿಎನ್ ಕ್ರಿಕ್ ಇನ್ಫೊ ವರದಿ ಮಾಡಿದೆ. ಕಳೆದ ಎರಡು ಐಪಿಎಲ್ ಆವೃತ್ತಿಗಳಲ್ಲಿ ಫ್ಲವರ್, ಲಖನೌ ಸೂಪರ್ ಜೈಂಟ್ಸ್‌ ತಂಡದ ಮುಖ್ಯ ಕೋಚ್ ಆಗಿದ್ದರು. ಜುಲೈನಲ್ಲಿ ಲಖನೌ ತಂಡವು ಜಸ್ಟಿನ್ ಲ್ಯಾಂಗರ್ ಅವರನ್ನು ಮುಖ್ಯ ಕೋಚ್ ಆಗಿ ನೇಮಕ ಮಾಡಿತ್ತು. ಐಸಿಸಿ ಆಲ್ ಆಫ್ ಫೇಮ್ ಗೌರವ ಪಡೆದಿರುವ ಮತ್ತು ಟಿ–20 ವಿಶ್ವಕಪ್ ಜಯಿಸಿದ ತಂಡದ ಕೋಚ್ ಆಗಿದ್ದ ಆ್ಯಂಡಿ ಫ್ಲವರ್ ಅವರನ್ನು ಆರ್‌ಸಿಬಿ ಪುರುಷರ ತಂಡದ ಮುಖ್ಯ ಕೋಚ್ ಹುದ್ದೆಗೆ ಸ್ವಾಗತಿಸಲು ನಾವು ಅತ್ಯಂತ ಉತ್ಸುಕರಾಗಿದ್ದೇವೆ. ವಿಶ್ವದಾದ್ಯಂತ ಐಪಿಎಲ್ ಮತ್ತು ಟಿ20 ತಂಡಗಳಿಗೆ ತರಬೇತುದಾರರಾಗಿ ಕೆಲಸ ಮಾಡಿರುವ ಅವರು, ಪಿಎಸ್‌ಎಲ್‌, ಐಎಲ್‌ಟಿ20, ದಿ ಹಂಡ್ರೆಡ್ ಮತ್ತು ಅಬುಧಾಬಿ T10ನಲ್ಲಿ ತಂಡಗಳು ಪ್ರಶಸ್ತಿ ಗೆಲ್ಲುವಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ ಎಂದು ಆರ್‌ಸಿಬಿ ಟ್ವೀಟ್ ಮಾಡಿದೆ. 𝗜𝗖𝗖 𝗛𝗮𝗹𝗹 𝗼𝗳 𝗙𝗮𝗺𝗲𝗿 𝗧𝟮𝟬 𝗪𝗼𝗿𝗹𝗱 𝗖𝘂𝗽 𝐀𝐧𝐝𝐲 𝐅𝐥𝐨𝐰𝐞𝐫 𝗛𝗲𝗮𝗱 𝗖𝗼𝗮𝗰𝗵 ’ . 🤩🙌 ’ & T20 , … ../ ‘ಆರ್‌ಸಿಬಿಗೆ ಅದ್ಭುತ ಅಭಿಮಾನಿಗಳಿದ್ದಾರೆ. ಮುಂದಿನ ಆವೃತ್ತಿಯಲ್ಲಿ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಆ ವಾತಾವರಣ ಸಂಪೂರ್ಣವಾಗಿ ಕಣ್ತುಂಬಿಕೊಳ್ಳಲು ಕಾತರನಾಗಿದ್ದೇನೆ’ಎಂದು ಫ್ಲವರ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ‘ನಾನು ಗೌರವಿಸುವ ಇಬ್ಬರು ತರಬೇತುದಾರರಾದ ಮೈಕ್ ಹೆಸನ್ ಮತ್ತು ಸಂಜಯ್ ಬಂಗಾರ್ ಅವರ ಕೆಲಸವನ್ನು ಕಂಡಿದ್ದೇನೆ. ಆರ್‌ಸಿಬಿಯನ್ನು ಹೊಸ ಎತ್ತರಕ್ಕೆ ಕೊಂಡೊಯ್ಯುವ ಸವಾಲನ್ನು ನಾನು ಎದುರು ನೋಡುತ್ತಿದ್ದೇನೆ’ಎಂದೂ ಅವರು ಹೇಳಿದ್ದಾರೆ. ‘ವಿಶೇಷವಾಗಿ ನಾನು ನಾಯಕ ಫಫ್ ಡುಪ್ಲೆಸಿ ಅವರೊಂದಿಗೆ ಮತ್ತೆ ಕೆಲಸ ಮಾಡಲು ಉತ್ಸುಕನಾಗಿದ್ದೇನೆ. ನಾವು ಈ ಹಿಂದೆ ಒಟ್ಟಾಗಿ ಕೆಲಸ ಮಾಡಿದ್ದೆವು. ಮುಂದೆ ನಮ್ಮ ಸಂಬಂಧವನ್ನು ಮತ್ತಷ್ಟು ಉತ್ತಮವಾದ ರೀತಿಯಲ್ಲಿ ರೂಪಿಸಲು ನಾನು ಎದುರು ನೋಡುತ್ತಿದ್ದೇನೆ’ ಎಂದಿದ್ದಾರೆ. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.