ಮಳೆಯಿಂದ 3ನೇ ಟಿ–20 ಪಂದ್ಯ ವಿಳಂಬ: ಚಂದ್ರಯಾನದ ಯಶಸ್ಸು ಸಂಭ್ರಮಿಸಿದ ಆಟಗಾರರು ಡಬ್ಲಿನ್: ಭಾರತ ಮತ್ತು ಐರ್ಲೆಂಡ್ ನಡುವಿನ 3ನೇ ಟಿ–20 ಪಂದ್ಯಕ್ಕೆ ಮಳೆ ಅಡ್ಡಿಯಾಗಿದೆ. ತುಂತುರು ಮಳೆ ಬೀಳುತ್ತಿರುವುದರಿಂದ ಟಾಸ್ ವಿಳಂಬವಾಗಿದೆ. ಇದೇವೇಳೆ, ಭಾರತದ ಚಂದ್ರಯಾನ–3 ಯೋಜನೆಯ ಯಶಸ್ಸನ್ನು ಕಣ್ತುಂಬಿಕೊಂಡ ಬೂಮ್ರಾ ಪಡೆ ಸಂಭ್ರಮಾಚರಣೆ ಮಾಡಿದರು. ಸಂಜೆ 6.04ರ ಸುಮಾರಿಗೆ ಚಂದ್ರನ ದಕ್ಷಿಣ ಧ್ರುವದಲ್ಲಿ ಅಡಿ ಇಟ್ಟ ವಿಕ್ರಮ್ ಲ್ಯಾಂಡರ್ ಇಸ್ರೊ ವಿಜ್ಞಾನಿಗಳ ಬಹು ವರ್ಷಗಳ ಕನಸನ್ನು ನನಸು ಮಾಡಿತು. 🎥 ! 🙌 ' ' 🚀#Chandrayaan3 | @ | # ://./uIA29Yls51 ../OxgR1uK5uN ಮೂರು ಪಂದ್ಯಗಳ ಸರಣಿಯಲ್ಲಿ ಭಾರತ 2–0ರಿಂದ ಮುನ್ನಡೆಯಲ್ಲಿದೆ. ಗಾಯದಿಂದಾಗಿ ಸುಮಾರು ಹನ್ನೊಂದು ತಿಂಗಳು ಆಟದಿಂದ ದೂರವಿದ್ದ ಬೂಮ್ರಾ ಮರಳಿರುವ ಸರಣಿ ಇದು. ಕಳೆದ ಎರಡೂ ಪಂದ್ಯಗಳಲ್ಲಿ ಅವರು ಉತ್ತಮ ಬೌಲಿಂಗ್‌ನಿಂದ ಗಮನ ಸೆಳೆದಿದ್ದಾರೆ. ಆದರೆ ತಮ್ಮ ಲಯಕ್ಕೆ ಮರಳುವ ಅಗತ್ಯವಿದೆ. ವೇಗ ಹೆಚ್ಚಿಸಿಕೊಳ್ಳುವ ಸವಾಲೂ ಅವರ ಮುಂದಿದೆ. ಅಲ್ಲದೇ ಕೊನೆಯ ಪಂದ್ಯದಲ್ಲಿ ತಮ್ಮ ತಂಡದಲ್ಲಿರುವ ಯುವಪ್ರತಿಭೆಗಳಿಗೆ ಅವಕಾಶ ನೀಡಿ ಪರೀಕ್ಷಿಸಬೇಕಿದೆ. ಬೂಮ್ರಾ ಮತ್ತು ಕನ್ನಡಿಗ ಪ್ರಸಿದ್ಧ ಕೃಷ್ಣ ಅವರು ದೀರ್ಘ ಸಮಯದಿಂದ ಪಂದ್ಯಗಳನ್ನು ಆಡಿರಲಿಲ್ಲ. ಆದ್ದರಿಂದ ಈಗ ಅವರು ವಿಶ್ರಾಂತಿ ಪಡೆಯುವುದಕ್ಕಿಂತ ಹೆಚ್ಚು ಪಂದ್ಯಗಳಲ್ಲಿ ಆಡಿ ದೈಹಿಕ ಸಾಮರ್ಥ್ಯ ಹೆಚ್ಚಿಸಿಕೊಳ್ಳಬೇಕಿದೆ. ಮುಂಬರುವ ಏಷ್ಯಾಕಪ್ ಮತ್ತು ವಿಶ್ವಕಪ್ ಟೂರ್ನಿಗಳಿಗೆ ಸಿದ್ಧರಾಗಬೇಕಿದೆ. ಆದ್ದರಿಂದ ಅವರು ಆಡುವುದು ಬಹುತೇಕ ಖಚಿತ. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.