ಹಾರ್ದಿಕ್‌ ಶೂ ಲೇಸ್‌ ಕಟ್ಟಿದ ಪಾಕ್‌ ಕ್ರಿಕೆಟಿಗ ಶದಾಬ್‌ ಖಾನ್‌; ಮೆಚ್ಚುಗೆ ಶ್ರೀಲಂಕಾ: ಪಂದ್ಯದ ನಡುವೆ ಟೀಮ್‌ ಇಂಡಿಯಾ ಆಟಗಾರ ಹಾರ್ದಿಕ್‌ ಪಾಂಡ್ಯ ಅವರ ಶೂ ಲೇಸ್‌ ಅನ್ನು ಪಾಕ್ ಆಟಗಾರ ಶದಾಬ್‌ ಖಾನ್‌ ಕಟ್ಟುತ್ತಿರುವ ಚಿತ್ರವೊಂದು ಸಾಮಾಜಿಕ ಮಾಧ್ಯಮದಲ್ಲಿ ಹರಿದಾಡುತ್ತಿದ್ದು, ಉಭಯ ತಂಡಗಳ ಆಟಗಾರರ ನಡುವಿನ ಸೌಹಾರ್ದತೆಗೆ ಈ ಚಿತ್ರ ಸಾಕ್ಷಿಯಾಗಿದೆ ಎಂದು ನೆಟ್ಟಿಗರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಶ್ರೀಲಂಕಾದ ಪಲ್ಲೆಕೆಲೆ ಅಂತರಾಷ್ಟ್ರೀಯ ಕ್ರೀಡಾಂಗಣದಲ್ಲಿ ಶನಿವಾರ ನಡೆದ ಭಾರತ ಮತ್ತು ಪಾಕಿಸ್ತಾನ ನಡುವಿನ ಹೈ–ವೋಲ್ಟೇಜ್ ಏಷ್ಯಾ ಕಪ್‌ ಪಂದ್ಯ ಭಾರಿ ಮಳೆಯಿಂದಾಗಿ ರದ್ದಾಗಿತ್ತು. ಪಂದ್ಯ ರದ್ದಾದರೂ ‘ಸ್ಪೀರಿಟ್‌ ಆಫ್ ಕ್ರಿಕೆಟ್‌’ (ತಂಡಗಳ ನಡುವೆ ಪರಸ್ಪರ ಗೌರವ) ಗೆದ್ದಿದೆ ಎಂದು ನೆಟ್ಟಿಗರು ಹೇಳಿದ್ದಾರೆ. ಈ ಬಗ್ಗೆ ಅನೋಖಯ್ ಎಂಬುವವರು ಸಾಮಾಜಿಕ ಮಾಧ್ಯಮ ಎಕ್ಸ್‌ನಲ್ಲಿ ಬರೆದುಕೊಂಡಿದ್ದು, ‘ಪಂದ್ಯದ ವೇಳೆ ಪಾಕಿಸ್ತಾನಿ ಕ್ರಿಕೆಟಿಗ ಶದಾಬ್ ಖಾನ್ ಅವರು ಭಾರತೀಯ ಬ್ಯಾಟರ್ ಹಾರ್ದಿಕ್ ಪಾಂಡ್ಯ ಅವರ ಶೂ ಲೇಸ್‌ಗಳನ್ನು ಕಟ್ಟುತ್ತಾರೆ. ಇದು ನಿಜವಾದ ಕ್ರೀಡಾ ಮನೋಭಾವವಾಗಿದೆ’ ಎಂದು ಹೇಳಿದರು. ಮಳೆಯಿಂದ ಪಂದ್ಯ ರದ್ದಾದ ಹಿನ್ನೆಲೆ ಉಭಯ ತಂಡಗಳಿಗೆ ತಲಾ ಒಂದು ಅಂಕ ನೀಡಲಾಯಿತು. ಈಗಾಗಲೇ ಪಾಕಿಸ್ತಾನ ತಂಡ ನೇಪಾಳ ವಿರುದ್ಧ ಜಯ ಸಾಧಿಸಿದ್ದು, ನಿನ್ನೆ ರದ್ದಾದ ಪಂದ್ಯದ ಒಂದು ಅಂಕ ಸೇರಿದಂತೆ ಪಾಕಿಸ್ತಾನ 3 ಅಂಕಗಳನ್ನು ಪಡೆದು ಸೂಪರ್ 4 ಹಂತಕ್ಕೆ ಪ್ರವೇಶಿಸಿದೆ. ಮುಂದಿನ ಪಂದ್ಯದಲ್ಲಿ ಭಾರತ ನೇಪಾಳದ ವಿರುದ್ಧ ಸೆಣಸಲಿವೆ. ಈ ಪಂದ್ಯದಲ್ಲಿ ಭಾರತ ಗೆದ್ದರೆ ಸೂಪರ್‌ 4 ಹಂತ ತಲುಪಲಿದೆ. ' , . . # # # #AsiaCup2023 ../fb7cR8aunj ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.