ಬಿಸಿಸಿಐ ವಾರ್ಷಿಕ ಸರ್ವಸದಸ್ಯರ ಸಭೆ 25ರಂದು ಮುಂಬೈ: ಭಾರತ ಕ್ರಿಕೆಟ್ ನಿಯಂತ್ರಣ ಮಂಡಳಿಯ ವಾರ್ಷಿಕ ಸರ್ವಸದಸ್ಯರ ಸಭೆಯು (ಎಜಿಎಂ) ಇದೇ 25ರಂದು ಗೋವಾದಲ್ಲಿ ನಡೆಯಲಿದೆ. ಈಗಿರುವ ಪದಾಧಿಕಾರಿಗಳೇ ತಮ್ಮ ಸ್ಥಾನಗಳಲ್ಲಿ ಮುಂದುವರಿಯುವರು. 2022ರ ಅಕ್ಟೋಬರ್‌ನಲ್ಲಿ ಎಜಿಎಂ ನಡೆದಿತ್ತು. ಕಳೆದ ಮೇ 27ರಂದು ಎಸ್‌ಜಿಎಂ ಕೂಡ ಆಯೋಜನೆಗೊಂಡಿತ್ತು. ಈ ಬಾರಿಯ ಎಜಿಎಂನಲ್ಲಿ 18 ಅಂಶಗಳ ಕುರಿತು ಚರ್ಚೆ ನಡೆಸಲು ಉದ್ದೇಶಿಸಲಾಗಿದೆ. ಪ್ರಮುಖವಾಗಿ ಬಿಸಿಸಿಐಗೆ ಒಂಬುಡ್ಸ್‌ಮನ್ ಮತ್ತು ನೀತಿ ಅಧಿಕಾರಿಯನ್ನು ನೇಮಕ ಮಾಡುವ ವಿಷಯವೂ ಇದೆ. ಅಕ್ಟೋಬರ್‌ 5ರಂದು ಆರಂಭವಾಗಲಿರುವ ವಿಶ್ವಕಪ್ ಟೂರ್ನಿಗೂ ಮುನ್ನ ನೇಮಕ ಕುರಿತು ಅಂತಿಮ ತಿರ್ಮಾನ ಕೈಗೊಳ್ಳಲಾಗುವುದು. ಐಸಿಸಿ (ಅಂತರರಾಷ್ಟ್ರೀಯ ಕ್ರಿಕೆಟ್ ಕೌನ್ಸಿಲ್‌)ಗೆ ಬಿಸಿಸಿಐ ಪ್ರತಿನಿಧಿಯನ್ನು ನೇಮಿಸುವುದು, ಕ್ರಿಕೆಟ್‌ ಸಮಿತಿಗಳು, ಸ್ಥಾಯಿ ಸಮಿತಿಗಳು ಮತ್ತು ಅಂಪೈರ್ಸ್‌ ಸಮಿತಿಗಳಿಗೆ ಪ್ರತಿನಿಧಿಗಳ ನೇಮಕ ಕುರಿತು ಚರ್ಚೆ ನಡೆಯಲಿದೆ. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.