ಪಶ್ಚಿಮ, ಉತ್ತರ ವಲಯಗಳಿಗೆ ಇನಿಂಗ್ಸ್‌ ಮುನ್ನಡೆ ಪುದುಚೇರಿ/ ಚೆನ್ನೈ (ಪಿಟಿಐ): ಪಶ್ಚಿಮ ವಲಯ ಮತ್ತು ಉತ್ತರ ವಲಯ ತಂಡಗಳು ದುಲೀಪ್‌ ಟ್ರೋಫಿ ಕ್ರಿಕೆಟ್‌ ಕ್ವಾರ್ಟರ್‌ ಫೈನಲ್‌ ಪಂದ್ಯದಲ್ಲಿ ಇನಿಂಗ್ಸ್‌ ಮುನ್ನಡೆ ಪಡೆದುಕೊಂಡಿವೆ. ಪುದುಚೇರಿಯಲ್ಲಿ ನಡೆಯುತ್ತಿರುವ ಪಂದ್ಯದಲ್ಲಿ ಯಶ್‌ ಧುಲ್‌ ಅವರ ಶತಕದ (193) ನೆರವಿನಿಂದ ಉತ್ತರ ವಲಯ ತಂಡ, ಪೂರ್ವ ವಲಯದ ವಿರುದ್ಧ ಮೊದಲ ಇನಿಂಗ್ಸ್‌ನಲ್ಲಿ ಮುನ್ನಡೆ ಗಳಿಸಿದೆ. ಚೆನ್ನೈನಲ್ಲಿ ನಡೆಯುತ್ತಿರುವ ಪಂದ್ಯದಲ್ಲಿ ಪಶ್ಚಿಮ ವಲಯ ತಂಡ ಈಶಾನ್ಯ ವಲಯವನ್ನು 235 ರನ್‌ಗಳಿಗೆ ಆಲೌಟ್‌ ಮಾಡಿಸಿ, 355 ರನ್‌ಗಳ ಭಾರಿ ಮುನ್ನಡೆ ಗಳಿಸಿತು. ಸಂಕ್ಷಿಪ್ತ ಸ್ಕೋರ್‌: ಮೊದಲ ಇನಿಂಗ್ಸ್‌: ಪಶ್ಚಿಮ ವಲಯ 123 ಓವರ್‌ಗಳಲ್ಲಿ 2ಕ್ಕೆ 590 ಡಿಕ್ಲೇರ್ಡ್‌. ಈಶಾನ್ಯ ವಲಯ 81.5 ಓವರ್‌ಗಳಲ್ಲಿ 235 (ಅಂಕುರ್‌ ಮಲಿಕ್‌ 81, ಆಶೀಶ್‌ ಥಾಪಾ 43, ಚಿಂತನ್‌ ಗಜ 38ಕ್ಕೆ 4, ಜಯದೇವ್‌ ಉನದ್ಕತ್‌ 35ಕ್ಕೆ 3) ಎರಡನೇ ಇನಿಂಗ್ಸ್‌: ಪಶ್ಚಿಮ ವಲಯ 9 ಓವರ್‌ಗಳಲ್ಲಿ 1 ವಿಕೆಟ್‌ಗೆ 12 ಪುದುಚೇರಿ ಪಂದ್ಯ: ಮೊದಲ ಇನಿಂಗ್ಸ್‌: ಪೂರ್ವ ವಲಯ 136.4 ಓವರ್‌ಗಳಲ್ಲಿ 397. ಉತ್ತರ ವಲಯ 111 ಓವರ್‌ಗಳಲ್ಲಿ 3 ವಿಕೆಟ್‌ಗೆ 433 (ಯಶ್‌ ಧುಲ್‌ 193, ಮನನ್‌ ವೋಹ್ರಾ 44, ಧ್ರುವ್‌ ಶೋರೆ 81, ಮನ್‌ದೀಪ್‌ ಸಿಂಗ್ ಬ್ಯಾಟಿಂಗ್‌ 34, ಹಿಮಾನ್ಶು ರಾಣಾ ಬ್ಯಾಟಿಂಗ್‌ 62) ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.