2023: ಸೆ.9ಕ್ಕೆ ಶ್ರೀಲಂಕಾ–ಬಾಂಗ್ಲಾದೇಶ ಮುಖಾಮುಖಿ ಕೊಲಂಬೊ: ಶ್ರೀಲಂಕಾ ಹಾಗೂ ಬಾಂಗ್ಲಾದೇಶ ತಂಡಗಳು ಶನಿವಾರ ನಡೆಯಲಿರುವ ಸೂಪರ್ ಫೋರ್ ಹಂತದ ಪಂದ್ಯದಲ್ಲಿ ಮುಖಾಮುಖಿಯಾಗಲಿವೆ. ಆರ್. ಪ್ರೇಮದಾಸ ಕ್ರೀಡಾಂಗಣದಲ್ಲಿ ನಡೆಯಲಿರುವ ಪಂದ್ಯದಲ್ಲಿ ಜಯಿಸುವುದು ಬಾಂಗ್ಲಾ ತಂಡಕ್ಕೆ ಮುಖ್ಯವಾಗಿದೆ. ಈ ಹಂತದ ಮೊದಲ ಪಂದ್ಯದಲ್ಲಿ ಬಾಂಗ್ಲಾ ತಂಡವು ಪಾಕಿಸ್ತಾನ ಎದುರು ಸೋತಿತ್ತು. ಶ್ರೀಲಂಕಾಗೆ ಇದು ಸೂಪರ್ ಫೋರ್ ಹಂತದ ಮೊದಲ ಪಂದ್ಯವಾಗಿದೆ. ಬಾಂಗ್ಲಾ ತಂಡವು ಫೈನಲ್ ತಲುಪುವ ಕನಸು ಜೀವಂತವಾಗಿರಬೇಕಾದರೆ ಈ ಪಂದ್ಯದಲ್ಲಿ ಜಯಿಸುವ ಒತ್ತಡದಲ್ಲಿದೆ. ಬಾಂಗ್ಲಾ ತಂಡದ ನಾಯಕ ಶಕೀಬ್ ಅಲ್ ಹಸನ್ ಮತ್ತು ಮುಷ್ಫೀಕುರ್ ರಹೀಮ್ ಉತ್ತಮ ಲಯದಲ್ಲಿದ್ದಾರೆ. ಆದರೆ ಬೌಲರ್‌ಗಳು ತಮ್ಮ ಸಾಮರ್ಥ್ಯಕ್ಕೆ ತಕ್ಕಂತೆ ಬೌಲಿಂಗ್ ಮಾಡಬೇಕಿದೆ. ಲಂಕಾ ತಂಡದ ಕುಶಾಲ ಮೆಂಡಿಸ್ ಚರಿತ ಅಸಲಂಕಾ ಮತ್ತು ಧನಂಜಯ ಡಿಸಿಲ್ವಾ ಅವರು ಉತ್ತಮ ಲಯದಲ್ಲಿದ್ದಾರೆ. ‌‌ ಪಂದ್ಯ ಆರಂಭ: ಮಧ್ಯಾಹ್ನ 3 ನೇರಪ್ರಸಾರ: ಸ್ಟಾರ್ ಸ್ಪೋರ್ಟ್ಸ್‌ ಹಾಟ್‌ಸ್ಟಾರ್ ಆ್ಯಪ್. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.