ಕ್ರಿಕೆಟ್‌: ಬೆಂಗಳೂರು ಸ್ಪೋರ್ಟ್ಸ್ ಕ್ಲಬ್‌ಗೆ ಪ‍್ರಶಸ್ತಿ ಬೆಂಗಳೂರು: ಉತ್ತಮ ಆಟವಾಡಿದ ಬೆಂಗಳೂರು ಸ್ಪೋರ್ಟ್ಸ್ ಕ್ಲಬ್ ತಂಡದವರು ಕೆಎಸ್‌ಸಿಎ ಗುಂಪು ಒಂದರ 1ರಿಂದ 3ನೇ ಡಿವಿಷನ್‌ 16 ವರ್ಷದೊಳಗಿನವರ ಅಂತರ್‌ಕ್ಲಬ್‌ ಕ್ರಿಕೆಟ್‌ ಟೂರ್ನಿಯಲ್ಲಿ ಪ್ರಶಸ್ತಿ ಜಯಿಸಿದರು. ಆರ್‌ಡಬ್ಲ್ಯುಎಫ್‌ ಕ್ರೀಡಾಂಗಣದಲ್ಲಿ ನಡೆದ ಟೂರ್ನಿಯ ಅಂತಿಮ ಪಂದ್ಯದಲ್ಲಿ ಸ್ಪೋರ್ಟ್ಸ್ ಕ್ಲಬ್‌ ತಂಡವು ವಲ್ಚರ್ಸ್ ಕ್ರಿಕೆಟ್‌ ಕ್ಲಬ್‌ನೊಂದಿಗೆ ಡ್ರಾ ಸಾಧಿಸಿತು. ಹೆಚ್ಚು ಪಾಯಿಂಟ್ಸ್ ಗಳಿಕೆಯ ಆಧಾರದಲ್ಲಿ ಪ್ರಶಸ್ತಿ ತನ್ನದಾಗಿಸಿಕೊಂಡಿತು. ಸಂಕ್ಷಿಪ್ತ ಸ್ಕೋರು: ಬೆಂಗಳೂರು ಸ್ಪೋರ್ಟ್ಸ್ ಕ್ಲಬ್‌: ಮೊದಲ ಇನಿಂಗ್ಸ್: 90 ಓವರ್‌ಗಳಲ್ಲಿ 275 (ಅನಂತ್‌ ಎಸ್‌. 67, ರೋಹಿತ್‌ ಆರ್‌.ವಿ. 68, ಅರ್ನವ್ ಶರ್ಮಾ 60; ಸಮ್ಯಕ್ ವೆಲ್ಲಾಲೂರ್ 29ಕ್ಕೆ 2, ಆರಿನ್ ಪಾಠಕ್‌ 35ಕ್ಕೆ 2). ಎರಡನೇ ಇನಿಂಗ್ಸ್: 46 ಓವರ್‌ಗಳಲ್ಲಿ 9ಕ್ಕೆ 127 (ರೋಹಿತ್‌ 23, ಅರ್ನವ್‌ 29; ಸಮ್ಯಕ್ 9ಕ್ಕೆ 2, ಮಣಿಕಂಠ ಶಿವಾನಂದ್‌ 14ಕ್ಕೆ 2, ಶಿವಕುಮಾರ್ 26ಕ್ಕೆ 3). ವಲ್ಚರ್ಸ್ ಸಿಸಿ: ಮೊದಲ ಇನಿಂಗ್ಸ್: 68.5 ಓವರ್‌ಗಳಲ್ಲಿ 133 ಆಲೌಟ್‌ (ಮಣಿಕಂಠ ಶಿವಾನಂದ್‌ 35, ನಿಹಾಲ್ ಗೌಡ ಕೆ. 36; ಮಯೂರ ಲಕ್ಷ್ಮಿಕಾಂತ್‌ 45ಕ್ಕೆ 2, ಪ್ರೀತಂ ಎ. 6ಕ್ಕೆ 2, ಆದರ್ಶ್ ಎಸ್‌.ಜೆ 45ಕ್ಕೆ 2). ಫಲಿತಾಂಶ: ಪಂದ್ಯ ಡ್ರಾ ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.