ಕ್ರಿಕೆಟ್; ಪಶ್ಚಿಮ ವಲಯಕ್ಕೆ ದುಲೀಪ್‌ ಟ್ರೋಫಿ ಕೊಯಮತ್ತೂರು (ಪಿಟಿಐ): ದಕ್ಷಿಣ ವಲಯ ತಂಡವನ್ನು 294 ರನ್‌ಗಳಿಂದ ಮಣಿಸಿದ ಪಶ್ಚಿಮ ವಲಯ ತಂಡದವರು ದುಲೀಪ್‌ ಟ್ರೋಫಿ ಕ್ರಿಕೆಟ್‌ ಟೂರ್ನಿಯಲ್ಲಿ ಚಾಂಪಿಯನ್‌ ಆದರು. ಗೆಲುವಿಗೆ 529 ರನ್‌ಗಳ ಕಠಿಣ ಗುರಿ ಪಡೆದಿದ್ದ ಹನುಮ ವಿಹಾರಿ ನೇತೃತ್ವದ ದಕ್ಷಿಣ ವಲಯ ತಂಡ ಅಂತಿಮ ದಿನವಾದ ಭಾನುವಾರ, ಎರಡನೇ ಇನಿಂಗ್ಸ್‌ನಲ್ಲಿ 234 ರನ್‌ಗಳಿಗೆ ಆಲೌಟಾಯಿತು. ನಾಲ್ಕನೇ ದಿನದಾಟದಲ್ಲೇ ಎದುರಾಳಿ ತಂಡದ ಆರು ವಿಕೆಟ್‌ ಪಡೆದಿದ್ದ ಅಜಿಂಹ್ಯ ರಹಾನೆ ನಾಯಕತ್ವದ ಪಶ್ಚಿಮ ವಲಯ ಗೆಲುವಿನ ಹಾದಿಯಲ್ಲಿತ್ತು. ಅಂತಿಮ ದಿನದಾಟದ ಭೋಜನ ವಿರಾಮಕ್ಕೆ ಮುನ್ನವೇ ಗೆಲುವಿನ ವ್ಯವಹಾರ ಪೂರ್ಣಗೊಳಿಸಿತು. 154 ರನ್‌ಗಳಿಂದಆಟಮುಂದುವರಿಸಿದದಕ್ಷಿಣವಲಯಬೆಳಿಗ್ಗೆಅಲ್ಪಪ್ರತಿರೋಧತೋರಿತು.ರವಿತೇಜಮತ್ತು ಸಾಯಿ ಕಿಶೋರ್‌ ಸುಮಾರು ಎರಡು ಗಂಟೆ ಕಾಲ ಎದುರಾಳಿ ಬೌಲಿಂಗ್‌ ದಾಳಿಯನ್ನು ಎದುರಿಸಿ ನಿಂತರು. ಈ ಜೋಡಿ 157 ಎಸೆತಗಳಲ್ಲಿ 57 ರನ್‌ ಸೇರಿಸಿತು. 82 ಎಸೆತಗಳಲ್ಲಿ 7 ರನ್‌ ಗಳಿಸಿದ ಸಾಯಿ ಕಿಶೋರ್‌ ವಿಕೆಟ್‌ ಪಡೆದ ಚಿಂತನ್‌ ಗಜ ಈ ಜತೆಯಾಟ ಮುರಿದರು. ರವಿ ಅವರನ್ನು ಜತೆಯಾದ ಕರ್ನಾಟಕದ ಕೆ.ಗೌತಮ್‌ (17 ರನ್‌, 28 ಎ) ಅವರೂ ಕೆಲಹೊತ್ತು ಎದುರಾಳಿ ತಂಡವನ್ನು ಕಾಡಿದರು. 97 ಎಸೆತಗಳಲ್ಲಿ 53 ರನ್‌ ಗಳಿಸಿದ ರವಿ ತೇಜ ವಿಕೆಟ್‌ ಪಡೆದ ಶಮ್ಸ್‌ ಮುಲಾನಿ ಅವರು ಪಶ್ಚಿಮ ವಲಯ ತಂಡದಲ್ಲಿ ಹರ್ಷ ತಂದಿತ್ತರು. ಬಾಸಿಲ್‌ ಥಂಪಿ (0) ಅವರನ್ನು ಮುಲಾನಿ ಹಾಗೂ ಗೌತಮ್‌ ಅವರನ್ನು ತನುಷ್‌ ಕೋಟ್ಯಾನ್‌ ಔಟ್‌ ಮಾಡುವುದರೊಂದಿಗೆ ಪಶ್ಚಿಮ ವಲಯ ಗೆಲುವಿನ ಸಂಭ್ರಮ ಆಚರಿಸಿತು. ಸಂಕ್ಷಿಪ್ತ ಸ್ಕೋರು: ಮೊದಲ ಇನಿಂಗ್ಸ್‌: ಪಶ್ಚಿಮ ವಲಯ: 96.3 ಓವರ್‌ಗಳಲ್ಲಿ 270. ದಕ್ಷಿಣ ವಲಯ: 83.1 ಓವರ್‌ಗಳಲ್ಲಿ 327. ಎರಡನೇ ಇನಿಂಗ್ಸ್: ಪಶ್ಚಿಮ ವಲಯ: 128 ಓವರ್‌ಗಳಲ್ಲಿ 4 ವಿಕೆಟ್‌ಗೆ 585 ಡಿಕ್ಲೇರ್ಡ್‌. ದಕ್ಷಿಣ ವಲಯ:71.2 ಓವರ್‌ಗಳಲ್ಲಿ 234 (ಸಾಯಿ ಕಿಶೋರ್‌ 7, ರವಿ ತೇಜ 53, ಕೆ.ಗೌತಮ್‌ 17,ಜಯದೇವ್‌ ಉನದ್ಕತ್‌ 28ಕ್ಕೆ 2, ಅತಿಥ್‌ ಶೇಟ್‌ 29ಕ್ಕೆ 2, ಶಮ್ಸ್‌ ಮುಲಾನಿ 51ಕ್ಕೆ 4) ಫಲಿತಾಂಶ: ಪಶ್ಚಿಮ ವಲಯಕ್ಕೆ 294 ರನ್‌ ಗೆಲುವು ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.